ದೆಹಲಿಯಲ್ಲಿ ಆಗಾಗ್ಗೆ ಉಂಟಾಗುವ ವಾಯುಮಾಲಿನ್ಯ (Air Pollution) ತಡೆಯಲು ಬಿಜೆಪಿ ನೇತೃತ್ವದ ದೆಹಲಿ ರಾಜ್ಯ ಸರ್ಕಾರ (Delhi Government) ಇತ್ತೀಚೆಗೆ ಹೊಸ ಆದೇಶವೊಂದನ್ನ ಪ್ರಕಟಿಸಿತ್ತು. 10 ವರ್ಷ ಮೇಲ್ಪಟ್ಟ ಡೀಸೆಲ್ 15 ವರ್ಷ ಹಳೆಯದಾದ ಪೆಟ್ರೋಲ್ ವಾಹನಗಳಿಗೆ ಇಂಧನ ನಿಷೇಧಿಸುವಂತೆ ಆದೇಶ ಹೊರಡಿಸಿತ್ತು. ಅದಕ್ಕಾಗಿ ಹಳೆಯ ವಾಹನಗಳನ್ನು ಗುರುತಿಸಿ ಪೆಟ್ರೋಲ್ ಬಂಕ್‌ಗಳಿಗೆ (Petrol Pumps) ಸಂದೇಶ ಕಳುಹಿಸಲು ಸೆಂಟ್ರಲ್ ಡೇಟಾಬೇಸ್ ವ್ಯವಸ್ಥೆ ರೂಪಿಸಲಾಗಿತ್ತು. ಜೊತೆಗೆ ದೆಹಲಿಯ 498 ಬಂಕ್‌ಗಳಿಗೆ ಸುತ್ತೋಲೆ ರವಾನಿಸಿದ್ದ ಸರ್ಕಾರ, 15 ವರ್ಷದ ಹಳೆಯ ಪೆಟ್ರೋಲ್, 10 ವರ್ಷದ ತುಂಬಿದ ಡೀಸೆಲ್ ವಾಹನಗಳಿಗೆ ಇಂಧನ ಪೂರೈಸಬಾರದು ಎಂದು ಸೂಚಿಸಿತ್ತು.
ದೆಹಲಿಯಲ್ಲಿ ಶೇ.50ರಷ್ಟು ವಾಯು ಮಾಲಿನ್ಯ ವಾಹನಗಳಿಂದ ಉಂಟಾಗುತ್ತಿದೆ ಎಂದು ಅಂದಾಜಿಸಿ, ವಾಯು ಗುಣಮಟ್ಟ ಕಾಪಾಡುವ ಉದ್ದೇಶದಿಂದ ವಾಯುಗುಣ ಮಟ್ಟ ನಿರ್ವಹಣಾ ಆಯೋಗ ಇಂಧನ ನಿರ್ಬಂಧಿಸುವ ಆದೇಶ ಹೊರಡಿಸಿತ್ತು. ಕಾರು, ದ್ವಿಚಕ್ರ ವಾಹನ, ಟ್ರಕ್, ವಿಂಟೇಜ್ ಆಟೋಮೊಬೈಲ್ಸ್ ಸೇರಿದಂತೆ ಸುಮಾರು 62 ಲಕ್ಷ ವಾಹನಗಳನ್ನು ಹಳೆಯ ವಾಹನಗಳ (Old Vehicles) ಪಟ್ಟಿಗೆ ಸೇರಿಸಲಾಗಿತ್ತು. ಇದಕ್ಕೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಇದನ್ನೂ ಓದಿ: ಹಾವಿನ ದ್ವೇಷ 12 ವರುಷ – ಹಾಗೇ ಪ್ರೀತಿಯೂ ಪುರಾಣದಿಂದಲೇ ಹುಟ್ಟಿದ್ದಾ?
ʻಹಸಿರು ನೀತಿ’ (ಗ್ರೀನ್ ಪಾಲಿಸಿ) ಹೆಸರಿನಲ್ಲಿ ಸರ್ಕಾರ ಹೊಸ ವಾಹನ ಖರೀದಿಗೆ ಪರೋಕ್ಷವಾಗಿ ಒತ್ತಡ ಹಾಕುತ್ತಿದೆ. ಹೊಸ ಕಾರು ಖರೀದಿಸಿದ್ರೆ ಸಾಮಾನ್ಯ ಜನತೆ ಶೇ.45ರಷ್ಟು ಜಿಎಸ್‌ಟಿ ಪ್ಲಸ್ ಸೆಸ್ ತೆರಬೇಕಾಗುತ್ತದೆ. ಹಾಗಾಗಿ ಇದು ಹಿಂಬಾಗಿಲ ಮೂಲಕ ಸರ್ಕಾರದ ಖಜಾನೆ ತುಂಬಿಸಿಕೊಳ್ಳಲು ಪ್ರಯತ್ನವಾಗಿದೆ ಎಂದು ವಾಹನ ಮಾಲೀಕರು ಆಕ್ರೋಶ ಹೊರಹಾಕಿದ್ದರು. ಇದನ್ನೂ ಓದಿ: ಯೋಗಿ ಮಾತಿಗೂ ಕಿಮ್ಮತ್ತಿಲ್ಲ – ವಿದ್ಯಾರ್ಥಿನಿಗೆ ಶುಲ್ಕ ವಿನಾಯ್ತಿ ಕೊಡಲು ನಿರಾಕರಿಸಿದ RSS ಮೂಲದ ಶಿಕ್ಷಣ ಸಂಸ್ಥೆ
ಜನಾಕ್ರೋಶ ಹೆಚ್ಚಾದ ಬೆನ್ನಲ್ಲೇ ಆದೇಶವನ್ನು ಹಿಂಪಡೆಯಲಾಗಿದೆ. ಈ ಬೆನ್ನಲ್ಲೇ ʻತಾಂತ್ರಿಕ ಸವಾಲುಗಳು, ಸಂಕೀರ್ಣ ವ್ಯವಸ್ಥೆಗಳಿಂದ ಇಂಧನ ನಿರ್ಬಂಧಿಸುವ ಆದೇಶ ಜಾರಿಗೊಳಿಸುವುದು ಕಷ್ಟವಾಗಿದೆ. ಹೀಗಾಗಿ ಮಾಲಿನ್ಯಕ್ಕೆ ದಾರಿ ಮಾಡಿಕೊಡುವ ಕಳಪೆ ನಿರ್ವಹಣೆಯ ವಾಹನಗಳನ್ನು ಜಪ್ತಿ ಮಾಡುವ ವ್ಯವಸ್ಥೆ ರೂಪಿಸಲಾಗುವುದುʼ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದ್ದರು. ಇದಕ್ಕೆ ಪೂರಕವಾಗಿ ಒಂದಿಷ್ಟು ಕೆಲಸಗಳು ನಡೆಯುತ್ತಿವೆ. ಮುಂದಿನ ದಿನಗಳಲ್ಲಿ ಮತ್ತೆ ಈ ಆದೇಶ ಸಕ್ರೀಯವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: PSI ಪರೀಕ್ಷೆಯಲ್ಲಿ ಫೇಲ್, ಆದ್ರೂ 2 ವರ್ಷ ಅಧಿಕಾರಿಯಾಗಿ ಕೆಲಸ ಮಾಡಿದ್ದ ಐನಾತಿ ಮಹಿಳೆ ಅಂದರ್
ಮಾಲಿನ್ಯ ತಡೆಗೆ ಮುಂದಾಗಿರುವ ದೆಹಲಿ ಸರ್ಕಾರ ವಾಹನಗಳ ವಯೋಮಿತಿಗಳನ್ನು ತಿಳಿಯಲು ಮತ್ತು ಅನುಷ್ಠಾನಕ್ಕೆ ತರಲು ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಾದ್ಯಂತ (ಎನ್‌ಸಿಆರ್) ಟೋಲ್ ಬೂತ್‌ಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ANPR) ಕ್ಯಾಮೆರಾಗಳನ್ನು ಅಳವಡಿಸುವ ಕಾರ್ಯ ಶುರು ಮಾಡಿದೆ. ಈ ಹೈಟೆಕ್ ಕ್ಯಾಮೆರಾ 15 ವರ್ಷಕ್ಕಿಂತ ಮೇಲ್ಪಟ್ಟ ಹಳೆಯದಾದ ಪೆಟ್ರೋಲ್ ವಾಹನ ಮತ್ತು 10 ವರ್ಷ ಮೇಲ್ಪಟ್ಟ ಡೀಸೆಲ್ ವಾಹನಗಳನ್ನ ಗುರುತಿಸಲು ಸಹಾಯ ಮಾಡುತ್ತದೆ. ಬಳಿಕ ಅವುಗಳ ವಯೋಮಿಯನ್ನು ಗುರುತಿಸಿ ಸ್ಕ್ರಾಪ್‌ಪಿಂಗ್‌ಗೆ ರವಾನಿಸಲು ಅನುಕೂಲವಾಗುತ್ತದೆ. ಇದನ್ನೂ ಓದಿ: ಆರ್ಥಿಕ ನೆರವು, ವಿವಾಹದ ಭರವಸೆ ನೀಡಿ ಹಿಂದೂಗಳನ್ನ ಇಸ್ಲಾಂಗೆ ಮತಾಂತರ – ಮಾಸ್ಟರ್ ಮೈಂಡ್ ಸೇರಿ ಇಬ್ಬರು ಅರೆಸ್ಟ್
ಸದ್ಯ ANPR ಕ್ಯಾಮೆರಾಗಳನ್ನು ದೆಹಲಿಯ 500 ಪೆಟ್ರೋಲ್ ಪಂಪ್‌ಗಳಲ್ಲಿ ಅಳವಡಿಸಲಾಗಿದೆ. ಇದರೊಂದಿಗೆ ನೋಯ್ಡಾ, ಗ್ರೇಟರ್ ನೋಯ್ಡಾ ಮತ್ತು ಗುರಗಾಂವ್‌ನಲ್ಲಿರುವ ಪಂಪ್‌ಗಳಲ್ಲೂ ಈ ಕ್ಯಾಮೆರಾಗಳ ಅಳವಡಿಕೆಗೆ ಚಿಂತನೆ ನಡೆಸಲಾಗಿದೆ. ಇದರಲ್ಲಿನ ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್ (OCR) ತಂತ್ರಜ್ಞಾನವನ್ನು ಬಳಸಿಕೊಂಡು, ಕ್ಯಾಮೆರಾಗಳು ನಂಬರ್ ಪ್ಲೇಟ್ ಡೇಟಾವನ್ನು ಡಿಜಿಟಲ್ ಮಾಹಿತಿಯಾಗಿ ಪರಿವರ್ತಿಸುತ್ತವೆ. ಜೊತೆಗೆ ದೆಹಲಿಯಲ್ಲಿ ನೋಂದಣಿಯಾದ ವಾಹನದ ವಿವರಗಳು ಮತ್ತು ಬಳಕೆಯ ಅವಧಿಯನ್ನ ತಕ್ಷಣವೇ ಬಹಿರಂಗಪಡಿಸುತ್ತವೆ. ಇದರಿಂದ ನಿಯಮ ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳುವುದಕ್ಕೂ ಅನುಕೂಲವಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ. ಇಷ್ಟೇ ಅಲ್ಲ ANPR ಕ್ಯಾಮೆರಾಗಳು ಹಳೆಯ ವಾಹನಗಳನ್ನು ಪತ್ತೆಹಚ್ಚುವ ಜೊತೆಗೆ ಇತರ ಕೆಲಸಗಳಿಗೂ ಉಪಯೋಗವಾಗಲಿದೆ ಅದೇನೆಂಬುದನ್ನು ತಿಳಿಯಲು ಮುಂದೆ ಓದಿ…
ANPR ಕ್ಯಾಮೆರಾದ ಬೆಲೆ ಎಷ್ಟು?
ಭಾರತದಲ್ಲಿ ANPR ಕ್ಯಾಮೆರಾಗಳ ಬೆಲೆ 20,000 ರೂ. ನಿಂದ 50,000 ರೂ.ವರೆಗೆ ಇದೆ. ಆದಾಗ್ಯೂ, ಹೆಚ್ಚಿನ ರೆಸಲ್ಯೂಶನ್ ಅಥವಾ ಮುಂದುವರಿದ ಮಾದರಿಗಳು ಇನ್ನೂ ದುಪ್ಪಟ್ಟು ವೆಚ್ಚವಾಗಬಹುದು.
ಈ ಕ್ಯಾಮೆರಾಗಳು ಯಾವುದಕ್ಕೆಲ್ಲ ಅನುಕೂಲ?
* ಸಂಚಾರ ನಿರ್ವಹಣೆ: ಪ್ರತಿ ವಾಹನದ ಸ್ಪೀಡ್ ಅಂದಾಜಿಸಲು, ಸಿಗ್ನಲ್‌ಗಳಲ್ಲಿ ಸಂಚಾರ ನಿಯಮ ಉಲ್ಲಂಘನೆ ಪತ್ತೆಹಚ್ಚಲು ಹಾಗೂ ವಾಹನ ದಟ್ಟಣೆ ಮಾದರಿಯನ್ನ ವಿಶ್ಲೇಷಣೆ ಮಾಡಲು ಬಳಸಲಾಗುತ್ತದೆ.
* ಕಾನೂನು ಮತ್ತು ಸುವ್ಯವಸ್ಥೆ: ಕದ್ದ ವಾಹನಗಳನ್ನು ಗುರುತಿಸಲು, ಶಂಕಿತರನ್ನು ಪತ್ತೆಹಚ್ಚಲು ಮತ್ತು ನಿಯಮ ಉಲ್ಲಂಘಿಸುವ ವಾಹನಗಳಿಗೆ ದಂಡ ವಿಧಿಸಲು ಅನುಕೂಲವಾಗುತ್ತದೆ.
* ಪಾರ್ಕಿಂಗ್ ನಿರ್ವಹಣೆ: ವಾಹನ ಪ್ರವೇಶ ಮತ್ತು ನಿರ್ಗಮನ ದಾಖಲಿಸಲು ಮತ್ತು ಸ್ವಯಂಚಾಲಿತ ಪಾರ್ಕಿಂಗ್ ಶುಲ್ಕ ಸಂಗ್ರಹ ಸಕ್ರಿಯಗೊಳಿಸಲು ಅನುಕೂಲ.
* ಟೋಲ್ ಸಂಗ್ರಹ: ಟೋಲ್ ಪ್ಲಾಜಾಗಳಲ್ಲಿ ವಾಹನ ಸಂಖ್ಯೆ ಫಲಕಗಳನ್ನು ರೀಡ್ ಮಾಡುವ ಮೂಲಕ ಸ್ವಯಂಚಾಲಿತ ಟೋಲ್ ಕಡಿತಕ್ಕಾಗಿ ಬಳಸಲಾಗುತ್ತದೆ.
* ಭದ್ರತೆ: ನಿರ್ಬಂಧಿತ ಅಥವಾ ಸೂಕ್ಷ್ಮ ಪ್ರದೇಶಗಳಲ್ಲಿ ಅನಧಿಕೃತ ವಾಹನಗಳನ್ನು ಪತ್ತೆಹಚ್ಚಲು ಮತ್ತು ಕಣ್ಗಾವಲು ಹೆಚ್ಚಿಸಲು ಸುಲಭವಾಗುತ್ತದೆ.
ಕ್ಯಾಮೆರಾಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ?
* ಹೆಚ್ಚಿನ ರೆಸಲ್ಯೂಶನ್ ಹೊಂದಿರುವ ಕ್ಯಾಮೆರಾ ವಾಹನದ ನಂಬರ್ ಪ್ಲೇಟನ್ನು ಸುಲಭ ಮತ್ತು ಸ್ಪಷ್ಟವಾಗಿ ರೀಡ್ ಮಾಡುತ್ತದೆ.
* ಇದರಲ್ಲಿನ OCR (ಆಪ್ಟಿಕಲ್ ಕ್ಯಾರೆಕ್ಟರ್ ರೆಕಗ್ನಿಷನ್) ಸಾಫ್ಟ್‌ವೇರ್ ಇಮೇಜ್‌ನಿಂದ ಆಲ್ಫಾನ್ಯೂಮರಿಕ್ ಕೋಡನ್ನು (ನಂಬರ್ ಪ್ಲೇಟ್‌ನಲ್ಲಿರುವ ಸಂಖ್ಯೆಗಳು) ರೀಡ್ ಮಾಡುವ ಮೂಲಕ ಹೆಚ್ಚಿನ ಮಾಹಿತಿ ಹೊರತೆಗೆಯುತ್ತದೆ.
* ಕೇಂದ್ರ ಡೇಟಾಬೇಸ್‌ನೊಂದಿಗೆ ಕ್ರಾಸ್-ಚೆಕ್ ಮಾಡುವ ಮೂಲಕ ನೋಂದಣಿ ಯಂತಹ ವಾಹನ ವಿವರ ಹಾಗೂ ನಿಜವಾದ ಮಾಲೀಕರನ್ನು ಪತ್ತೆ ಮಾಡುತ್ತದೆ.
* ಈ ಡೇಟಾಗಳನ್ನು ಅಪರಾಧ ಪತ್ತೆ, ಸಂಚಾರ ನಿಯಮ ಉಲ್ಲಂಘನೆ ಇನ್ನಿತರ ಉದ್ದೇಶಗಳಿಗಾಗಿಯೂ ಬಳಸಲಾಗುತ್ತದೆ.
ಇದರ ಅನುಕೂಲ ಮತ್ತು ಅನಾನುಕೂಲಗಳೇನು?
* ಸಮಯ ಉಳಿತಾಯದೊಂದಿಗೆ ಕಾರ್ಯದಕ್ಷತೆಯನ್ನು ಹೆಚ್ಚಿಸುತ್ತದೆ.
* ವಾಹನ ಗುರುತಿಸುವಿಕೆಯಲ್ಲಿ ಮಾನವ ದೋಷದ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಅಂದ್ರೆ ಮನುಷ್ಯನಿಂದ ಆಗುವ ದೋಷಗಳನ್ನು ಇದು ಮಾಡುವುದಿಲ್ಲ.
* ದಿನದ 24 ಗಂಟೆಯೂ ಮೇಲ್ವಿಚಾರಣೆ ಮಾಡುವ ಸಾಮರ್ಥ್ಯ ಹೊಂದಿದೆ.
* ವಾಹನ ಮತ್ತು ಮಾಲೀಕರ ಮಾಹಿತಿಯನ್ನು ಸಂಗ್ರಹಿಸುವ ಜೊತೆಗೆ ಸಂಗ್ರಹಿಸಿದ ಮಾಹಿತಿಯನ್ನ ಗೌಪ್ಯವಾಗಿಡಲು ಸಹಾಯಕವಾಗುತ್ತದೆ.
* ಇದರ ಅನಾನುಕೂಲವೆಂದರೆ ಕಳಪೆ ಹವಾಮಾನ ಪರಿಸ್ಥಿತಿ ಅಥವಾ ಕಡಿಮೆ ಬೆಳಕಿನ ವಾತಾವರಣ ಇರುವಾಗ ನಿಖರತೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರಲಿದೆ.
ಪೆಟ್ರೋಲ್ ಪಂಪ್‌ಗಳಲ್ಲಿ ಈ ಕ್ರಮ ಏಕೆ?
ಪೆಟ್ರೋಲ್ ಪಂಪ್‌ಗಳಲ್ಲಿ ANPR ಕ್ಯಾಮೆರಾಗಳನ್ನು ಅಳವಡಿಸುವ ಮುಖ್ಯ ಉದ್ದೇಶವೇ ವಾಯುಮಾಲಿನ್ಯ ತಡೆಯುವುದು. ಮಾಲಿನ್ಯಕಾರಕ ವಾಹನಗಳನ್ನು ಗುರುತಿಸಿದ್ರೆ, ಅವುಗಳ ವಯೋಮಿತಿ ಗಮನಿಸಿ ಬಳಿಕ ಅವುಗಳನ್ನು ನಿಷೇಧಿಸುವ ಕೆಲಸಕ್ಕೆ ಮುಂದಾಬಹುದು ಅನ್ನೋದು ಸರ್ಕಾರದ ಚಿಂತನೆ.