ಕೋಲ್ಕತ್ತಾ: ಪಶ್ಚಿಮ ಬಂಗಾಳದಲ್ಲಿ (West Bengal) ಅಧಿಕಾರ ಹಿಡಿಯಲು ಬಯಸುತ್ತಿರುವ ಬಿಜೆಪಿ ಪ್ರಣಾಳಿಕೆಯನ್ನು (BJP Manifesto) ಬಿಡುಗಡೆ ಮಾಡಿದ್ದು, ಪ್ರತಿ ತಿಂಗಳು ಮಹಿಳೆಯರಿಗೆ 3 ಸಾವಿರ ರೂ., ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3 ಸಾವಿರ ರೂ. ಪ್ರೋತ್ಸಾಹ ಧನ ನೀಡಲಾಗುವುದು ಘೋಷಿಸಿದೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ (Amit Shah) ಅವರು ಬಿಜೆಪಿಯ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿ 15 ಭರವಸೆಗಳನ್ನು ಪ್ರಕಟಿಸಿದರು.
15 ಭರವಸೆಗಳು ಯಾವುದು?
ಮಹಿಳೆಯರು ಮತ್ತು ಯುವಕರಿಗಾಗಿ ಕಲ್ಯಾಣ ಯೋಜನೆಗಳು
ಮಹಿಳೆಯರಿಗೆ ಆರ್ಥಿಕ ನೆರವು: ರಾಜ್ಯದ ಪ್ರತಿಯೊಬ್ಬ ಮಹಿಳೆಗೆ ಪ್ರತಿ ತಿಂಗಳು 3,000 ಸಹಾಯಧನ.
ನಿರುದ್ಯೋಗಿಗಳಿಗೆ ಭತ್ಯೆ: ನಿರುದ್ಯೋಗಿ ಯುವಕರಿಗೆ ತಿಂಗಳಿಗೆ 3,000 ಪ್ರೋತ್ಸಾಹ ಧನ.
ಮಹಿಳಾ ಮೀಸಲಾತಿ: ರಾಜ್ಯ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ 33% ಮೀಸಲಾತಿ.
ಆರೋಗ್ಯ ಸೇವೆ: ಆಯುಷ್ಮಾನ್ ಭಾರತ್ ಯೋಜನೆಯ ವಿಸ್ತರಣೆ ಮತ್ತು ಮಹಿಳೆಯರಿಗೆ ಉಚಿತ ಕ್ಯಾನ್ಸರ್ ತಪಾಸಣೆ ಹಾಗೂ HPV ಲಸಿಕೆ ಇದನ್ನೂ ಓದಿ: ಬಂಗಾಳದ ಜನತೆಗೆ ಪ್ರಧಾನಿ ಮೋದಿ 6 ಗ್ಯಾರಂಟಿ ಘೋಷಣೆ
ಸರ್ಕಾರಿ ನೌಕರರು ಮತ್ತು ಉದ್ಯೋಗ
7ನೇ ವೇತನ ಆಯೋಗ: ಬಿಜೆಪಿ ಸರ್ಕಾರ ಬಂದ 45 ದಿನಗಳೊಳಗೆ ರಾಜ್ಯ ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗದ ಶಿಫಾರಸುಗಳ ಜಾರಿ.
ಉದ್ಯೋಗ ಸೃಷ್ಟಿ: ಮುಂದಿನ ಐದು ವರ್ಷಗಳಲ್ಲಿ 1 ಕೋಟಿ ಹೊಸ ಉದ್ಯೋಗ ಮತ್ತು ಸ್ವಯಂ ಉದ್ಯೋಗಾವಕಾಶಗಳ ಸೃಷ್ಟಿ.
कोलकाता में @BJP4Bengal के संकल्प पत्र विमोचन से लाइव…
নারী, যুবসমাজ, সকল শ্রেণির কল্যাণ ও অনুপ্রবেশমুক্ত বাংলা গড়তে সক্ষম কেবল বিজেপি। কলকাতায় পশ্চিমবঙ্গ বিজেপির সংকল্পপত্র প্রকাশ অনুষ্ঠান থেকে সরাসরি…#BhorosharShopothBJP https://t.co/tPMaileymI
— Amit Shah (@AmitShah) April 10, 2026
ಆಡಳಿತ ಮತ್ತು ಕಾನೂನು ಸುಧಾರಣೆಗಳು
ಏಕರೂಪ ನಾಗರಿಕ ಸಂಹಿತೆ : ಅಧಿಕಾರಕ್ಕೆ ಬಂದ 6 ತಿಂಗಳೊಳಗೆ ರಾಜ್ಯದಲ್ಲಿ ಏಕರೂಪ ನಾಗರಿಕ ನೀತಿಸಂಹಿತೆ (UCC) ಜಾರಿ.
ನುಸುಳುವಿಕೆಗೆ ತಡೆ: ಅಕ್ರಮ ನುಸುಳುವಿಕೆಯನ್ನು ಪತ್ತೆಹಚ್ಚಿ, ಡಿಲೀಟ್ ಮಾಡಿ, ಗಡಿಪಾರು ಮಾಡುವ ಕಠಿಣ ನೀತಿ.
ಸಿಂಡಿಕೇಟ್ ಮುಕ್ತ ಬಂಗಾಳ: ರಾಜ್ಯದಲ್ಲಿರುವ ‘ಸಿಂಡಿಕೇಟ್’ ಮತ್ತು ‘ಕಟ್ ಮನಿ’ ಸಂಸ್ಕೃತಿಯನ್ನು ಸಂಪೂರ್ಣವಾಗಿ ತೊಡೆದುಹಾಕುವುದು.
ಭ್ರಷ್ಟಾಚಾರದ ವಿರುದ್ಧ ತನಿಖೆ: ಕಳೆದ 15 ವರ್ಷಗಳ ಭ್ರಷ್ಟಾಚಾರ ಮತ್ತು ಅಪರಾಧ ಪ್ರಕರಣಗಳ ಮರುತನಿಖೆ ಹಾಗೂ ತಪ್ಪಿತಸ್ಥರಿಗೆ ಜೈಲು ಶಿಕ್ಷೆ.
ಶ್ವೇತಪತ್ರ ಬಿಡುಗಡೆ: ಟಿಎಂಸಿ ಆಡಳಿತದ ಅವಧಿಯಲ್ಲಿ ನಡೆದ ಭ್ರಷ್ಟಾಚಾರ ಮತ್ತು ಕಾನೂನು ಸುವ್ಯವಸ್ಥೆ ಹದಗೆಟ್ಟ ಬಗ್ಗೆ ಶ್ವೇತಪತ್ರ ಪ್ರಕಟಣೆ.
ಭಾಷೆಗಳ ಸೇರ್ಪಡೆ: ಭಾರತೀಯ ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಕುರ್ಮಾಲಿ ಮತ್ತು ರಾಜ್ಬೋಂಗ್ಶಿ ಭಾಷೆಗಳ ಸೇರ್ಪಡೆ
ಶಿಕ್ಷಣ, ಕೈಗಾರಿಕೆ ಮತ್ತು ಕೃಷಿ
ಉನ್ನತ ಶಿಕ್ಷಣ ಸಂಸ್ಥೆಗಳು: ಉತ್ತರ ಬಂಗಾಳದಲ್ಲಿ ಹೊಸ AIIMS, IIT ಮತ್ತು IIM ಸ್ಥಾಪನೆ.
ಕೈಗಾರಿಕಾ ಅಭಿವೃದ್ಧಿ: ಸಿಂಗೂರಿನಲ್ಲಿ ಬೃಹತ್ ಕೈಗಾರಿಕಾ ಪಾರ್ಕ್ ನಿರ್ಮಾಣ.
ಸಾಂಸ್ಕೃತಿಕ ಪುನರುತ್ಥಾನ: ಪ್ರಾದೇಶಿಕ ಭಾಷೆಗಳಿಗೆ ಮಾನ್ಯತೆ ಮತ್ತು ವಂದೇ ಮಾತರಂ ಮ್ಯೂಸಿಯಂ ಸ್ಥಾಪನೆ.
ಕೃಷಿ ಮತ್ತು ಮೀನುಗಾರಿಕೆ: ಆಲೂಗಡ್ಡೆ, ಭತ್ತ ಮತ್ತು ಮಾವು ಬೆಳೆಗಾರರಿಗೆ ಬೆಂಬಲ ಹಾಗೂ ಬಂಗಾಳವನ್ನು ಮೀನು ರಫ್ತು ಹಬ್ ಆಗಿ ಪರಿವರ್ತಿಸಲು ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆ ಜಾರಿ.

