We’re in war – ಅಮೆರಿಕದ ಫೈಟರ್‌ ಜೆಟ್‌ ಪತನದ ಬಗ್ಗೆ ಟ್ರಂಪ್‌ ಫಸ್ಟ್‌ ರಿಯಾಕ್ಷನ್‌

2 Min Read

– ಮಾತುಕತೆಯ ಮೇಲೆ ಯಾವುದೇ ಪರಿಣಾಮ ಬೀರಲ್ಲ ಎಂದ ಅಧ್ಯಕ್ಷ

ವಾಷಿಂಗ್ಟನ್‌: ನಾವು ಯುದ್ಧದಲ್ಲಿದ್ದೇವೆ (We’re in war), ಇದ್ಯಾವುದೇ ಘಟನೆಗಳು ಮಾತುಕತೆಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ತಿಳಿಸಿದ್ದಾರೆ.

ಒಂದೇ ದಿನ ಅಮೆರಿಕದ ಪ್ರಮುಖ ಎಫ್-35 ಸ್ಟೆಲ್ತ್ ಫೈಟರ್ ಜೆಟ್, F-10, F-15E ಜೆಟ್, ಯುಹೆಚ್ 60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾಗೂ `ಯುದ್ಧದೊರೆ’ ಖ್ಯಾತಿಯ HC-130J ವಿಮಾನವನ್ನ ಹೊಡೆದಿರುವುದಾಗಿ ಇರಾನ್‌ ನೀಡಿದ ಹೇಳಿಕೆಗೆ ಸಂದರ್ಶನವೊಂದರಲ್ಲಿ ಟ್ರಂಪ್‌ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಅಮೆರಿಕದ ಎಫ್-35 ಸೇರಿ ಜೆಟ್, ಕಾಪ್ಟರ್ ಉಡೀಸ್ – ಓರ್ವ ಪೈಲಟ್ ಸೆರೆ ಅಂತಿದೆ ಇರಾನ್

ಈ ಘಟನೆಗಳು ಇರಾನ್‌ ಜೊತೆಗೆ ನಡೆಯುತ್ತಿರುವ ರಾಜತಾಂತ್ರಿಕತೆ ಮತ್ತು ಮಾತುಕತೆಗಳ ಮೇಲೆ ಪರಿಣಾಮ ಬೀರುವುದಿಲ್ಲ. ಏಕೆಂದ್ರೆ ಇದು ಯುದ್ಧ, ನಾವು ಯುದ್ಧದಲ್ಲಿದ್ದೇವೆ. ಈ ಪ್ರದೇಶದಲ್ಲಿ ಮಿಲಿಟರಿ ಕ್ರಮ ಮತ್ತು ರಾಜತಾಂತ್ರಿಕ ಪ್ರಯತ್ನಗಳು ಏಕಕಾಲದಲ್ಲಿ ನಡೆಯುತ್ತಿವೆ ಎಂದಿದ್ದಾರೆ ಟ್ರಂಪ್‌.

ಮುಂದುವರಿದು.. ಅಮೆರಿಕದ ಯುದ್ಧವಿಮಾನಗಳಿಗೆ ಸಂಬಂಧಿಸಿದ ಶೋಧ, ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ಚರ್ಚಿಸಲು ನಿರಾಕರಿಸಿದ್ರು. ಪ್ರಸ್ತುತ ಪರಿಸ್ಥಿತಿ ಸೂಕ್ಷ್ಮ ಮತ್ತು ಸಂಕೀರ್ಣವಾಗಿದೆ. ಆದ್ದರಿಂದ ರಕ್ಷಣಾ ಕಾರ್ಯಾಚರಣೆಗಳ ಬಗ್ಗೆ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಇದನ್ನೂ ಓದಿ: 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ: ಇರಾನ್‌

ಇನ್ನೂ ಆಪರೇಷನ್ ಟ್ರೂ ಪ್ರಾಮಿಸ್ ಭಾಗವಾಗಿ ಇರಾನ್‌ ಇಂದೂ ಸಹ ಪ್ರತಿದಾಳಿ ಆರಂಭಿಸಿ, ಅಮೆರಿಕದ ಅನೇಕ ಜೆಟ್‌ಗಳನ್ನ ಉಡೀಸ್‌ ಮಾಡಿದೆ. ಮೊದಲ ದಿನ ಅಮೆರಿಕದ ಪ್ರಮುಖ ಎಫ್-35 ಸ್ಟೆಲ್ತ್ ಫೈಟರ್ ಜೆಟ್, ಎಫ್-15ಇ ಜೆಟ್, ಯುಹೆಚ್ 60 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್ ಹಾಗೂ `ಯುದ್ಧದೊರೆ’ ಖ್ಯಾತಿಯ ಹೆಚ್‌ಸಿ 130ಜೆ ವಿಮಾನವನ್ನು ಹೊಡೆದಿದ್ದೇವೆ. ಎಫ್-15ಇ ಜೆಟ್ ಹೊಡೆದಾಗ ಪೈಲಟ್ ಹೊರಜಿಗಿದಿದ್ದು, ಸೆರೆ ಹಿಡಿದಿದ್ದೇವೆ ಅಂತ ಇರಾನ್ ಹೇಳಿತ್ತು.

2ನೇ ದಿನ ಅಮೆರಿಕದ ಫೈಟರ್ ಜೆಟ್, ಎ-10 ಥಂಡರ್ಬೋಲ್ಟ್ II, ಹಾರ್ಮುಜ್ ಜಲಸಂಧಿಯ ಬಳಿ ಪತನಗೊಂಡಿದೆ ಎಂದು ಇರಾನ್‌ ಹೇಳಿದೆ. ಇದನ್ನೂ ಓದಿ: ಇರಾನ್‌ಗೆ ಶಾಕ್: ನೌಕಾಪಡೆ ಉಪ ಗುಪ್ತಚರ ಮುಖ್ಯಸ್ಥ ಬೆಹ್ನಾಮ್ ರೆಝಾಯ್ ಹತ್ಯೆ – ಖಚಿತಪಡಿಸಿದ IRGC

AI Image

ಅಮೆರಿಕ – ಇರಾನ್‌ ಮಾತುಕತೆ ಸ್ಥಗಿತ
ಇನ್ನೂ ಮಾತುಕತೆ ಚೆನ್ನಾಗಿ ನಡೆಯುತ್ತಿದೆ ಎನ್ನುವ ಟ್ರಂಪ್‌ ಅವರ ಹೇಳಿಕೆಗೆ ವಿರುದ್ಧವಾಗಿ ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯೊಂದನ್ನ ಬಿತ್ತರಿಸಿದೆ. ಕದನ ವಿರಾಮಗಳು ಸ್ಥಗಿತಗೊಂಡಿರುವುದರಿಂದ ಇರಾನ್‌ ಮತ್ತು ಅಮೆರಿಕ ನಡುವಿನ ಸಂಘರ್ಷ ತಡೆಯುವ ರಾಜತಾಂತ್ರಿಕ ಪ್ರಯತ್ನಗಳು ಹಿನ್ನಡೆ ಅನುಭವಿಸಿವೆ. ಪಾಕಿಸ್ತಾನ ಸೇರಿದಂತೆ ಹಲವಾರು ಪ್ರಾದೇಶಿಕ ದೇಶಗಳ ಮಧ್ಯಸ್ಥಿಕೆ ಹೊರತಾಗಿಯೂ ಮಾತುಕತೆ ಪ್ರಗತಿ ಸಾಧಿಸಿಲ್ಲ ಎಂದು ವರದಿ ಹೇಳಿದೆ.

Share This Article