ನಾವು ಹಿಂದೂಗಳಿಗಿಂತ ವಿಭಿನ್ನ – ಎರಡು ರಾಷ್ಟ್ರ ಥಿಯರಿ ಹೇಳಿ ಪಾಠ ಮಾಡಿದ ಪಾಕಿಸ್ತಾನ ಸೇನಾ ಮುಖ್ಯಸ್ಥ

By
2 Min Read

– ನಿಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸ ಹೇಳಿಕೊಡಿ ಎಂದ ಮುನೀರ್‌

ಇಸ್ಲಾಮಾಬಾದ್:‌ ಪಾಕಿಸ್ತಾನದ ಸೇನಾ ಮುಖ್ಯಸ್ಥ ಅಸೀಂ ಮುನೀರ್ (Asim Munir) ತಮ್ಮ ಇತ್ತೀಚಿನ ಭಾಷಣವೊಂದರಲ್ಲಿ ಎರಡು ರಾಷ್ಟ್ರದ ಸಿದ್ಧತಾಂತಗಳನ್ನ ಪ್ರತಿಪಾದಿಸಿ ಭಾರತದ ವಿರುದ್ಧ ಮತ್ತೆ ಕ್ಯಾತೆ ತೆಗೆದಿದ್ದಾರೆ.

ಪಾಕಿಸ್ತಾನ ಹುಟ್ಟಿದ ಕಥೆಯನ್ನು ಮಕ್ಕಳಿಗೆ ಹೇಳಿ
ಓವರ್‌ಸೀಸ್ ಪಾಕಿಸ್ತಾನಿ (Pakistani) ಕನ್ವೆನ್ಷನ್‌ನಲ್ಲಿ ಭಾಷಣ ಮಾಡಿದ ಮುನೀರ್‌, ಪಾಕಿಸ್ತಾನಿಯರು ಹಿಂದೂ ಮತ್ತು ಮುಸ್ಲಿಮರ ನಡುವಿನ ವ್ಯತ್ಯಾಸಗಳನ್ನು ತಮ್ಮ ಮಕ್ಕಳಿಗೆ ಹೇಳಿಕೊಡಬೇಕು. ಈ ರಾಷ್ಟ್ರ ಹೇಗೆ ಹುಟ್ಟಿತು ಎಂಬ ಕಥೆಯನ್ನು ಹೇಳಬೇಕು. ಈ ವ್ಯತ್ಯಾಸವೇ ಪಾಕಿಸ್ತಾನ ರಚನೆಗೆ ಮೂಲ ಆಧಾರವಾಗಿದ್ದು, ಪಾಕಿಸ್ತಾನದ ಜನಕ ಮೊಹಮ್ಮದ್‌ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತದ ಮಹತ್ವವನ್ನು ನಾವು ಮುಂದಿನ ಪೀಳಿಗೆಗೆ ತಿಳಿಸಬೇಕು ಎಂದು ಕರೆ ಕೊಟ್ಟಿದ್ದಾರೆ. ಇದನ್ನೂ ಓದಿ: UK | ರಾಯಲ್ ಕಾಲೇಜ್ ಆಫ್ ಫಿಸಿಶಿಯನ್ಸ್‌ನ 123ನೇ ಅಧ್ಯಕ್ಷರಾಗಿ ಭಾರತೀಯ ಮೂಲದ ಮುಮ್ತಾಜ್‌ ಆಯ್ಕೆ

ನಮ್ಮ ಆಲೋಚನೆ, ಸಿದ್ಧಾಂತ ಬೇರೆ
ಹಿಂದೂಗಳು ಮತ್ತು ಮುಸ್ಲಿಮರ (Hindu-Muslims) ನಡುವೆ ದೊಡ್ಡ ವ್ಯತ್ಯಾಸವಿದೆ ಅಂತ ನಮ್ಮ ಮಕ್ಕಳಿಗೆ ತಿಳಿಸಬೇಕು. ನಮ್ಮ ಧರ್ಮ ಬೇರೆ, ನಮ್ಮ ಆಚಾರಗಳು ಬೇರೆ, ನಮ್ಮ ಸಂಪ್ರದಾಯಗಳು ಬೇರೆ, ನಮ್ಮ ಆಲೋಚನೆಗಳು ಬೇರೆ, ನಮ್ಮ ಮಹತ್ವಾಕಾಂಕ್ಷೆಗಳು ಬೇರೆ, ಅಲ್ಲಿಯೇ ಎರಡು ರಾಷ್ಟ್ರ ಸಿದ್ಧಾಂತದ ಬುನಾದಿ ಹಾಕಲಾಯಿತು. ನಾವು ಎರಡು ರಾಷ್ಟ್ರಗಳು, ನಾವು ಒಂದೇ ರಾಷ್ಟ್ರವಲ್ಲ ಎಂದು ನಮ್ಮ ಮಕ್ಕಳಿಗೆ ತಿಳಿಸಿ. ಇಸ್ಲಾಮಿಕ್ ಗಣರಾಜ್ಯದ ಸೃಷ್ಟಿಗೆ ಇದು ಮುಖ್ಯ ಕಾರಣ ಎಂಬ ಸತ್ಯ ಅವರಿಗೆ ಗೊತ್ತಾಗಲಿ. 1947ರಲ್ಲಿ ಪಾಕಿಸ್ತಾನ ರಚನೆಗೆ ಮೊಹಮ್ಮದ್‌ ಅಲಿ ಜಿನ್ನಾ ಅವರ ದ್ವಿರಾಷ್ಟ್ರ ಸಿದ್ಧಾಂತವೇ ಕಾರಣ ಎಂಬುದನ್ನು ನಮ್ಮ ಭವಿಷ್ಯದ ಪೀಳಿಗೆ ಮರೆಯಬಾರದು ಎಂದು ಮುನೀರ್‌ ಹೇಳಿಕೆ ನೀಡಿದ್ದು, ಮತ್ತೆ ಭಾರತದ ವಿರುದ್ಧ ಕ್ಯಾತೆ ತೆಗೆಯುವ ಕೆಲಸ ಮಾಡಿದ್ದಾರೆ. ಇದನ್ನೂ ಓದಿ: ಯುಎಸ್-ಚೀನಾ ಟಾರಿಫ್ ವಾರ್ ಮತ್ತಷ್ಟು ಜೋರು – ಚೀನಾ ಉತ್ಪನ್ನಗಳಿಗೆ 245% ಸುಂಕ ವಿಧಿಸಿದ ಅಮೆರಿಕ

ಹಿಂದೂ-ಮಸ್ಲಿಂ ನಡುವಿನ ವ್ಯತ್ಯಾಸ ಹೇಳಿಕೊಡಿ
ನಮ್ಮ ಪೂರ್ವಜರು ನಾವು ಹಿಂದೂಗಳಿಗಿಂತ ಪ್ರತಿಯೊಂದು ವಿಷಯದಲ್ಲೂ ಭಿನ್ನರಾಗಿದ್ದೇವೆ ಎಂದು ನಂಬಿದ್ದರು. ನಮ್ಮ ಧರ್ಮ, ಆಚರಣೆ, ಸಂಪ್ರದಾಯ, ಆಲೋಚನೆ ಮತ್ತು ಗುರಿಗಳು ಬೇರೆ ಆದ್ದರಿಂದಲೇ, ದ್ವಿರಾಷ್ಟ್ರ ಪರಿಕಲ್ಪನೆ ಮೊಳಕೆಯೊಡೆಯಿತು. ಈಗಲೂ ಪಾಕಿಸ್ತಾನವು ದ್ವಿರಾಷ್ಟ್ರ ಸಿದ್ಧಾಂತದ ತಳಹದಿಯ ಮೇಲೆ ನಿಂತಿದೆ. ಇದರ ಮಹತ್ವ ಎಂದಿಗೂ ಕಡಿಮೆಯಾಗಬಾರದು. ಇದಕ್ಕಾಗಿ ನಾವು ನಮ್ಮ ಮಕ್ಕಳಿಗೆ ಹಿಂದೂ-ಮುಸ್ಲಿಂ ನಡುವಿನ ವ್ಯತ್ಯಾಸವನ್ನು ಹೇಳಿಕೊಡಬೇಕು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬ್ಲೂ ಫಿಲ್ಮ್ ವೀಕ್ಷಣೆ, ಚಿತ್ರೀಕರಣ ಕಾನೂನುಬದ್ಧಗೊಳಿಸಲು ಮುಂದಾದ ಉಕ್ರೇನ್

Share This Article