ನಿಮ್ಮದು ಅದ್ಭುತ ಸಾಧನೆ – ಪಿ.ವಿ ಸಿಂಧುರನ್ನ ಹೊಗಳಿದ ಆಸ್ಟ್ರೇಲಿಯಾ ಸ್ಟಾರ್ ಡೇವಿಡ್ ವಾರ್ನರ್

Public TV
1 Min Read

ಬರ್ಮಿಂಗ್‌ಹ್ಯಾಮ್: ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆಯಾಗಿದ್ದ ಭಾರತೀಯ ಬ್ಯಾಡ್ಮಿಂಟನ್ ತಾರೆ ಪಿ.ವಿ.ಸಿಂಧು ಕಾಮನ್‌ವೆಲ್ತ್ನಲ್ಲಿ ಚಿನ್ನ ಗೆದ್ದ ಸಾಧನೆಯನ್ನು ಆಸ್ಟ್ರೇಲಿಯಾ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ.

ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ.ಸಿಂಧು ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಇದನ್ನೂ ಓದಿ: ಎದ್ದು ಬಿದ್ದು ಬ್ಯಾಟಿಂಗ್‌ಗೆ ಆಗಮಿಸಿದ ಯಾಸ್ತಿಕಾ ಭಾಟಿಯಾ – ಬಿದ್ದು ಬಿದ್ದು ನಕ್ಕ ಸ್ಮೃತಿ, ಕೌರ್

ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ ಲಿ ವಿರುದ್ಧ 21-15, 21-13 ನೇರ ಸೆಟ್‌ಗಳಿಂದ ಪಂದ್ಯವನ್ನು ಗೆದ್ದು ಸತತ ಮೂರು ಕಾಮನ್‌ವೆಲ್ತ್ ಕ್ರೀಡೆಗಳಲ್ಲಿ ಪದಕ ಗೆದ್ದ ಸಾಧನೆ ಮಾಡಿದ್ದಾರೆ. ಸಿಂಧು ಅವರ ಈ ಸಾಧನೆಯನ್ನು ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಹೊಗಳಿದ್ದಾರೆ. ಇದನ್ನೂ ಓದಿ: ಮನವಿ ಮಾಡಿದ್ರೂ ನನಗೆ ದೆಹಲಿ ಸರ್ಕಾರದಿಂದ ಸಹಾಯವೇ ಸಿಗಲಿಲ್ಲ; ಗೆದ್ದಾಗ ಪ್ರಶಂಸಿಸುತ್ತಿದ್ದಾರೆ – ಕಾಮನ್‌ವೆಲ್ತ್‌ನಲ್ಲಿ ಕಂಚು ಗೆದ್ದ ಕ್ರೀಡಾಪಟು ಬೇಸರ

`ಸಿಂಧು ಅವರು ಪದಕ ಪಡೆದ ಚಿತ್ರವನ್ನು ಟ್ವೀಟ್ ಮೂಲಕ ಹಂಚಿಕೊಂಡಿದ್ದು, `ವೆಲ್‌ಡನ್ ಪಿ.ವಿ.ಸಿಂಧು, ಕಾಮನ್‌ವೆಲ್ತ್ನಲ್ಲಿ ಚಿನ್ನಗೆದ್ದು ಅದ್ಭುತ ಸಾಧನೆ ಮಾಡಿದ್ದೀರಿ’ ಎಂದು ಬರೆದುಕೊಂಡಿದ್ದಾರೆ.

ಪಿ.ವಿ.ಸಿಂಧು ಈ ಹಿಂದೆ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚು ಗೆದ್ದಿದ್ದರು. 2018 ರಲ್ಲಿ ಸೈನಾ ನೆಹ್ವಾಲ್ ವಿರುದ್ಧ ಸೋತು ಬೆಳ್ಳಿ ಗೆದ್ದಿದ್ದ ಸಿಂಧು, ಈ ಬಾರಿ ಚಿನ್ನದ ಪದಕಕ್ಕೆ ಮುತ್ತಿಡುವ ಮೂಲಕ ಕನಸು ನನಸು ಮಾಡಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *