Weekend with Ramesh : ಕುರ್ಚಿ ಮೇಲೆ ಕೂತು ಕಣ್ಣೀರಿಟ್ಟ ಡಾಲಿ ಧನಂಜಯ

Public TV
1 Min Read

ವಾರದ ವೀಕೆಂಡ್ ವಿತ್ ರಮೇಶ್ (Weekend with Ramesh) ಕಾರ್ಯಕ್ರಮಕ್ಕೆ ಅತಿಥಿಯಾಗಿ ಯಾರು ಬರಲಿದ್ದಾರೆ ಎನ್ನುವ ಕುತೂಹಲ ಎಲ್ಲರಿಗಿತ್ತು. ಅದಕ್ಕೀಗ ತೆರೆ ಬಿದ್ದಿದೆ. ಈ ವಾರದ ಅತಿಥಿಯಾಗಿ ಡಾಲಿ ಧನಂಜಯ (Dolly Dhananjay)  ಸಾಧಕರ ಕುರ್ಚಿ ಏರಿದ್ದಾರೆ. ಆ ಪ್ರೋಮೋವನ್ನು ಜೀ ಕನ್ನಡ ವಾಹಿನಿಯು ರಿಲೀಸ್ ಕೂಡ ಮಾಡಿದೆ.

ಪ್ರೋಮೋದಲ್ಲಿ ಹತ್ತಾರು ವಿಷಯಗಳನ್ನು ಹೇಳುವ ಪ್ರಯತ್ನ ಮಾಡಲಾಗಿದೆ. ಡಾಲಿ ಬಾಲ್ಯ, ಬಾಲ್ಯದ ಗೆಳೆಯರು, ಕುಟುಂಬ ಮತ್ತು ಅವರ ಸಹೋದರಿಯ ಕಥೆಯನ್ನೂ ಸೂಕ್ಷ್ಮವಾಗಿ ಹೇಳಲಾಗಿದೆ. ಕುರ್ಚಿಯ ಮೇಲೆ ಕೂತು ತನ್ನ ಬದುಕನ್ನು ತಿರುವಿಹಾಕಿ ನೋಡಿರುವ ಡಾಲಿ ಕಣ್ಣೀರಿಟ್ಟಿದ್ದಾರೆ. ಇದನ್ನೂ ಓದಿ: ಕ್ರಿಕೆಟರ್ ಆಗುವ ಕನಸು ಕಂಡ ಬಡ ಹುಡುಗಿಗೆ ನಟ ಅರ್ಜುನ್ ಕಪೂರ್ ಸಾಥ್

ಸಮಾಜದ ಬಗ್ಗೆ ಸದಾ ತುಡಿಯುವ ಡಾಲಿ, ಸಿನಿಮಾ ಕ್ಷೇತ್ರಕ್ಕೆ ಬಂದಿದ್ದು ಅಚ್ಚರಿ. ಇಂಜಿನಿಯರಿಂಗ್ ಓದಿಕೊಂಡಿದ್ದವರು. ಬಣ್ಣದ ಮೇಲಿನ ಗೀಳಿನಿಂದಾಗಿ ರಂಗಭೂಮಿಗೆ ಎಂಟ್ರಿ ಕೊಟ್ಟವರು. ಮೈಸೂರಿನಲ್ಲಿ ರಂಗತಂಡ ಕಟ್ಟಿಕೊಂಡು ಹಲವಾರು ನಾಟಕಗಳಲ್ಲಿ ಅಭಿನಯಿಸಿದವರು. ಅಲ್ಲದೇ, ಕಿರುಚಿತ್ರದ ಮೂಲಕ ಚಿತ್ರೋದ್ಯಮಕ್ಕೆ ಕಾಲಿಟ್ಟ ಧನಂಜಯ, ಇದೀಗ ಸ್ಟಾರ್ ನಟರಾಗಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದಿರುವ ಡಾಲಿ, ತತ್ವ ಸಿದ್ಧಾಂತಗಳ ವಿರುದ್ಧ ಯಾವತ್ತೂ ಹೋದವರು ಅಲ್ಲ. ಈ ಕಾರಣದಿಂದಾಗಿ ವಿವಾದಕ್ಕೂ ಕಾರಣರಾಗಿದ್ದಾರೆ. ನೇರ ಮಾತುಗಳು ಅವರನ್ನು ಸಂಕಷ್ಟಕ್ಕೆ ಸಿಲುಕಿಸುವೆ. ಆದರೂ, ಡಾಲಿ ಬದಲಾಗಲಿಲ್ಲ. ಈ ಎಲ್ಲ ವಿಚಾರಗಳನ್ನು ಹೊತ್ತು ಈ ವಾರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಜನರ ಮುಂದೆ ಬರಲಿದೆ.

Share This Article