ನಾವು 15 ರಿಂದ 20 ಸ್ಥಾನ ಗೆದ್ದೇ ಗೆಲ್ತೇವೆ- ಸಿದ್ದರಾಮಯ್ಯ ಫುಲ್ ಕಾನ್ಫಿಡೆನ್ಸ್

Public TV
1 Min Read

ಬೆಂಗಳೂರು: ನಾವು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. 15 ರಿಂದ 20 ಸ್ಥಾನ ಗೆದ್ದೇ ಗೆಲ್ಲುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ವಿಧಾನಸೌಧದಲ್ಲಿ (Vidhanasoudha) ಇಂದು ಸುದ್ದಿಗಾರರೊಂದಿಗೆ ಮಾತನಾಡುತ್ತಾ ಎಕ್ಸಿಟ್ ಪೋಲ್ (Exit Poll) ಬಗ್ಗೆ ಪ್ರತಿಕ್ರಿಯಿಸಿ, ಎಕ್ಸಿಟ್ ಪೋಲ್ ಮೋದಿ ಮಾಧ್ಯಮ ಸಮೀಕ್ಷೆ. ಈಗಾಗಲೇ ರಾಹುಲ್ ಗಾಂಧಿ ಇದನ್ನು ಹೇಳಿದ್ದಾರೆ. ನಾವು ರಾಜ್ಯದಲ್ಲಿ 15 ರಿಂದ 20 ಸ್ಥಾನ ಗೆಲ್ಲುತ್ತೇವೆ ಎಂದರು.

ನಾವು ಕರ್ನಾಟಕದಲ್ಲಿ ಹೆಚ್ಚಿನ ಸ್ಥಾನ ಗೆಲ್ಲುತ್ತೇವೆ. 15 ರಿಂದ 20 ಸ್ಥಾನ ಗೆಲ್ಲುತ್ತೇವೆ. ಇಂಡಿಯಾ ಒಕ್ಕೂಟವು 295 ಸ್ಥಾನ ಗೆಲ್ಲಲಿದೆ ಎಂದು ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಅವರೇ ಹೇಳಿದ್ದಾರೆ. ನಾನು ಹೇಳಿದ್ದೀನಲ್ವ ನಾವು 15 ಸ್ಥಾನ ಗೆಲ್ತೀವಿ ಎಂದು ತಿಳಿಸಿದರು.

ರಾಜ್ಯದಲ್ಲಿ ಮುಂಗಾರು ಮಳೆ ಆರಂಭವಾಗಿದೆ. ಬಿತ್ತನೆ ಬೀಜದ ಕೆಲಸ ಆರಂಭವಾಗಿದೆ. ಮಳೆ ಜಾಸ್ತಿ ಆಗಿ ಮರಗಳು ಬಿದ್ದಿವೆ. ನಗರದಲ್ಲಿ ಗುಂಡಿ ಮುಚ್ಚಲು ಆದೇಶ ಮಾಡಿದ್ದೇನೆ. ಸಾಯಂಕಾಲ ಅಧಿಕಾರಿಗಳ ಸಭೆ ನಡೆಸಲಾಗುತ್ತದೆ. ಬಳಿಕ ಮಳೆ ಹಾನಿ ಪ್ರದೇಶಕ್ಕೆ ಭೇಟಿ ನೀಡುವ ಬಗ್ಗೆ ನಿರ್ಧಾರ ಮಾಡಲಾಗುತ್ತದೆ ಎಂದು ಹೇಳಿದರು.

ಇದೇ ವೇಳೆ ನಾಗೇಂದ್ರ ರಾಜೀನಾಮೆ ಬಗ್ಗೆ ನಾನು ಕೇಳಿಲ್ಲ. ರಿಪೋರ್ಟ್ ಬರಬೇಕು ಅಲ್ವಾ. ಎಸ್ ಐಟಿ ರಚನೆಯಾಗಿಯೇ ಎರಡು ದಿವಸ ಆಗಿದೆ. ರಿಪೋರ್ಟ್ ಬರಲಿ ಆಮೇಲೆ ನೋಡೊಣ ಎಂದರು.

Share This Article