ದೇವೇಗೌಡರ ಆಸೆ ಪೂರೈಸಲು ಸಾಹಸಕ್ಕೆ ಕೈ ಹಾಕಿದ್ದೇನೆ – ಹೆಚ್‌ಡಿಕೆ ಶಪಥ

Public TV
2 Min Read

ಹಾಸನ: ಹೆಚ್.ಡಿ ದೇವೇಗೌಡರ (HD Devegowda) ಆಸೆ ಪೂರೈಸಲು ನಾನು ಈ ಬಾರಿ ಸಾಹಸಕ್ಕೆ ಕೈಹಾಕಿದ್ದೇನೆ. ಹಾಸನ (Hassan) ಜಿಲ್ಲೆಯಲ್ಲಿ 7ಕ್ಕೆ ಏಳು ಸ್ಥಾನವನ್ನೂ ಗೆದ್ದು ಅವರ ಆಸೆ ಪೂರೈಸುತ್ತೇನೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಶಪಥ ಮಾಡಿದ್ದಾರೆ.

ಹಾಸನದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ದೇವೇಗೌಡರ 60 ವರ್ಷದ ರಾಜಕೀಯ ಜೀವನದಲ್ಲಿ ಈ ನಾಡಿಗೆ ಏನೇನೊ ಮಾಡಬೇಕೆಂಬ ಕನಸು ಕಂಡಿದ್ದರು. ಆದ್ರೆ ಅವರಿಗೆ ಸಿಕ್ಕಿದ ಅವಧಿ ಕಡಿಮೆ. 11 ತಿಂಗಳು ಪ್ರಧಾನಿ (Prime Minister), 2 ವರ್ಷ ರಾಜ್ಯದಲ್ಲಿ ಸಿಎಂ, 3 ವರ್ಷ ಸಚಿವರಾಗಿದ್ದರು. ಅವರು ಅಂದುಕೊಂಡಿದ್ದನ್ನ ಮಾಡೋಕೆ ಆಗಲಿಲ್ಲ. ಅವರ ಆಸೆ ಪೂರೈಸಲು ನಾನು ಈಗ ಸಾಹಸಕ್ಕೆ ಕೈ ಹಾಕಿದ್ದೇನೆ ಎಂದು ಹೇಳಿದ್ದಾರೆ.

ನಿಮ್ಮ ಕಣ್ಣೆದುರೇ ನಿಮ್ಮ ಆಸೆಯಂತೆ ಜನರ ಬದುಕು ಕಟ್ಟೋ ಸರ್ಕಾರ ಬರುತ್ತೆ. ಅದನ್ನು ನೋಡಲು ನೀವು ಇರಬೇಕು ಎಂದು ತಂದೆಯಿಂದ ವಚನ ಪಡೆದುಕೊಂಡಿದ್ದೇನೆ. ದೇವರಿಗೂ ಇದೇ ಪ್ರಾರ್ಥನೆ ಮಾಡುತ್ತಿದ್ದೇನೆ. ನಾನು ಕಂಡ ಕನಸನ್ನ ನನ್ನ ಮಕ್ಕಳು ನನಸು ಮಾಡಿದ್ದಾರೆ ಎಂದು ಅವರ ಮನಃ ತೃಪ್ತಿಯಾಗಬೇಕು ತಿಳಿಸಿದ್ದಾರೆ.

ನಮ್ಮ ಭದ್ರಕೋಟೆಯನ್ನ ಛಿದ್ರ ಮಾಡುತ್ತೇವೆ ಅಂತಾ ಕೆಲವರು ಹೊರಟಿದ್ದಾರೆ. ದೇವೇಗೌಡರು ಬೆಳೆಸಿರುವ ಲಕ್ಷಾಂತರ ಕಾರ್ಯಕರ್ತರ ಶಕ್ತಿ ಇರೋವರೆಗೂ ಈ ಪಕ್ಷಕ್ಕೆ ಯಾರೂ ಏನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಹೇಗೆ ಬಲಿ ಹಾಕಬೇಕೆಂದು ಗೊತ್ತಿದೆ – ಟ್ರಾನ್ಸ್‌ಫಾರ್ಮರ್ ಬದಲಿಸದ ಅಧಿಕಾರಿಗೆ ಹೆಚ್.ಡಿ.ರೇವಣ್ಣ ಕ್ಲಾಸ್

`ಹಣ ಇದೆ ಅಂತಾ ಪಂಚರತ್ನ ಯಾತ್ರೆ ಮಾಡ್ತಿದ್ದಾರೆ’ ಎಂಬ ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ತಿರುಗೇಟು ನೀಡಿದ ಹೆಚ್‌ಡಿಕೆ, 40 ಸೀಟ್ ಒಬ್ಬನೇ ಏಕಾಂಗಿಯಾಗಿ ಗೆದ್ದಿರುವುದು ಕಡಿಮೆಯೇ? ಅವರಿದ್ದಾಗ ಎಷ್ಟು ಜನ ನಾಯಕರಿದ್ದರು? 58 ಸೀಟ್ ಗೆಲ್ಲಬೇಕಾದ್ರೆ ಯರ‍್ಯಾರ ಕೊಡುಗೆ ಎಷ್ಟು? ಅದೆಲ್ಲಾ ಹೇಳಬೇಕಲ್ವಾ? ಎಂದು ಸವಾಲ್ ಹಾಕಿದ್ದಾರೆ. ಇದನ್ನೂ ಓದಿ: ನೂರಾರು ಮತದಾರರಿಗೆ ಬಿಜೆಪಿಯಿಂದ ಬಾಡೂಟ, ಗಿಫ್ಟ್ – ಕಂಠಪೂರ್ತಿ ಕುಡಿದು ಎಲ್ಲೆಂದರಲ್ಲಿ ಮಲಗಿದ ಜನ

ಈ ಯಾತ್ರೆ ಆರಂಭಿಸಿದಾಗ ನನ್ನ ಬಳಿ ಹಣ ಇರಲಿಲ್ಲ, ಮುಂದಿನ ಚುನಾವಣೆ ನಡೆಸಲು ಈ ಕ್ಷಣದವರೆಗೂ ನನ್ನ ಹತ್ರ ಹಣ ಇಲ್ಲ. ಹಾಸನ ಕ್ಷೇತ್ರದಲ್ಲೂ ಸದ್ಯದಲ್ಲೇ ಪಂಚರತ್ನ ಯಾತ್ರೆ ಮಾಡುತ್ತೇವೆ. ಈ ಬಗ್ಗೆ ನಾನು, ರೇವಣ್ಣ ತೀರ್ಮಾನ ಮಾಡ್ತೀವಿ. ಪಂಚರತ್ನ ಯಾತ್ರೆಯ ಯೋಜನೆಗಳು ಅನುಷ್ಠಾನಕ್ಕೆ ಬರಬೇಕಾದರೆ 123 ಸ್ಥಾನ ಗೆಲ್ಲಬೇಕು. ಹಾಸನದಲ್ಲಿ 7ಕ್ಕೆ ಏಳೂ ಸ್ಥಾನ ಗೆಲ್ಲಬೇಕು. ಅದನ್ನು ಹೊರತುಪಡಿಸಿ ಬೇರೆ ಚರ್ಚೆ ಅನಗತ್ಯ ಎಂದು ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *