ದರ್ಶನ್‌ ಜಾಮೀನು ಭವಿಷ್ಯ | ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡಲ್ಲ – ಸುಪ್ರೀಂ

Public TV
2 Min Read

– ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ ಕಾರಣ, ಜಾಮೀನು ಯಾಕೆ ಕೊಟ್ರಿ?
– ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ತೀವ್ರ ತರಾಟೆ

ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ಸುಪ್ರೀಂ ಕೋರ್ಟ್‌ನಲ್ಲಿಂದು (Supreme Court) ಸುದೀರ್ಘ ವಿಚಾರಣೆ ನಡೆಯಿತು.

ಕೊಲೆ ಪ್ರಕರಣದಲ್ಲಿ ದರ್ಶನ್‌ಗೆ ರಾಜ್ಯ ಹೈಕೋರ್ಟ್‌ (Karnataka High Court) ನೀಡಿ‌ದ್ದ ಜಾಮೀನು ಆದೇಶ ಪ್ರಶ್ನಿಸಿ ಬೆಂಗಳೂರು ನಗರ ಪೊಲೀಸರು ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾ.ಪಾರ್ದಿವಾಲಾ ನೇತೃತ್ವದ ದ್ವಿ-ಸದಸ್ಯ ಪೀಠ ಸುಮಾರು ಒಂದೂವರೆ ಗಂಟೆಗಳ ಕಾಲ ವಿಚಾರಣೆ ನಡೆಸಿ ಆದೇಶ ಕಾಯ್ದಿರಿಸಿತು. ಈ ವೇಳೆ ನಡೆದ ವಾದ-ಪ್ರತಿವಾದ ಹಾಗೂ ಜಡ್ಜ್‌ ಎತ್ತಿದ ಲಾ ಪಾಯಿಂಟ್‌ಗಳು ಗಮನಸೆಳೆದಿವೆ.

ಹೈಕೋರ್ಟ್‌ಗೆ ತೀವ್ರ ತರಾಟೆ:
ಆರೋಪಿಗಳು ನಿರಪರಾಧಿ ಅನ್ನೋ ರೀತಿ ಹೈಕೋರ್ಟ್ ಬೇಲ್ ಕೊಟ್ಟಿದೆ. ನಿಮಗೂ ಕೂಡ ಈ ರೀತಿ ಅನ್ನಿಸುತ್ತಿಲ್ವಾ? ಎಲ್ಲಾ ಕೇಸ್‌ಗಳಲ್ಲೂ ಹೈಕೋರ್ಟ್ ಹೀಗೆ ಮಾಡುತ್ತಾ? ವಿಚಾರಣಾ ನ್ಯಾಯಾಲಯ ತಪ್ಪು ಮಾಡಿದ್ರೆ ತಪ್ಪಾಗಿದೆ ಅನ್ನಬಹುದು. ಹೈಕೋರ್ಟ್ ಹೀಗೆ ಮಾಡಿದ್ರೆ ಹೇಗೆ? ನಾವು ಹೈಕೋರ್ಟ್ ಮಾಡಿದ ತಪ್ಪು ಮಾಡಲ್ಲ, ತರಾತುರಿಯಲ್ಲಿ ಆದೇಶ ಕೊಡುವುದಿಲ್ಲ ಏಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ ಕಾರಣ; ಸುಪ್ರೀಂ
ಸುದೀರ್ಘ ವಿಚಾರಣೆಯಲ್ಲಿ ಪ್ರತಿಯೊಬ್ಬ ಆರೋಪಿಗಳ ಬಗ್ಗೆಯೂ ಆಳವಾದ ವಿಚಾರಣೆ ನಡೆದ ಕೋರ್ಟ್‌ ಎ-1 ಪವಿತ್ರಾಗೌಡ ಬಗ್ಗೆ ಗಂಭೀರವಾದ ಅಭಿಪ್ರಾಯ ವ್ಯಕ್ತಪಡಿಸಿದೆ. ಇಷ್ಟೆಲ್ಲಾ ಅನಾಹುತಕ್ಕೆ ಪವಿತ್ರಾಗೌಡ ಕಾರಣ ಅಂದಿದೆ.

ಇಡೀ ರಾದ್ಧಾಂತಕ್ಕೆ ಪವಿತ್ರಾಗೌಡ (Pavithra Gowda) ಕಾರಣ. ಸಮಸ್ಯೆ ಮೂಲವೇ ನೀವು.. ನಿಮ್ಮಿಂದಲೇ ಆಗಿದ್ದು.. ಯಾಕೆ ನಿಮಗೆ ಬೇಲ್ ಕೊಡಬೇಕು? ಇಷ್ಟೆಲ್ಲಾ ‘ಸಾಕ್ಷ್ಯ ಇದ್ದರೂ.. ಬೇಲ್ ಯಾಕೆ ಕೊಡಬೇಕು? ಇದು ಬರೀ ಕೊಲೆ ಅಲ್ಲ.. ವ್ಯವಸ್ಥಿತ ಪಿತೂರಿ, ಷಡ್ಯಂತ್ರ. ಸಾಕ್ಷ್ಯ ಇದ್ದರೂ ಯಾಕೆ ಜಾಮೀನು ಮುಂದುವರಿಸಬೇಕು? ದರ್ಶನ್-ಪವಿತ್ರಾಗೌಡಗೆ ಏನು ಸಂಬಂಧ? ಎ1 ಪವಿತ್ರಾಗೌಡ ಪವನ್‌ಗೆ 55 ಬಾರಿ ಕರೆ ಮಾಡಿದ್ಯಾಕೆ? ಅಂತಲೂ ಜಡ್ಜ್ ಪಾರ್ದಿವಾಲ ಪ್ರಶ್ನೆ ಮಾಡಿದ್ರು.

ಪವಿತ್ರಾಗೌಡ ಪರ ವಕೀಲರ ವಾದವೇನು?
ಜಡ್ಜ್‌ ಪ್ರಶ್ನೆಗೆ ಉತ್ತರಿಸಿದ ಪವಿತ್ರಾಗೌಡ ಪರ ವಕೀಲರು, ಕೊಲೆಗೂ ಪವಿತ್ರಾಗೌಡಗೂ ಸಂಬಂಧ ಇಲ್ಲ. ರೇಣುಕಾಸ್ವಾಮಿ ಕಿಡ್ನ್ಯಾಪ್ ಪವಿ‌ತ್ರಾಗೆ ಗೊತ್ತಿರಲಿಲ್ಲ. ಪವಿತ್ರಾಗೆ ಅಪಹರಣಕಾರರ ಪರಿಚಯವೂ ಇಲ್ಲ. ರೇಣುಕಾಗೆ ಚಪ್ಪಲಿಯಲ್ಲಿ ಹೊಡೆದು ಪವಿತ್ರಾ ವಾಪಸ್ ಆಗಿದ್ದಾರೆ ಅಂತ ವಾದಿಸಿದ್ರು.

Share This Article