ಒಂದಲ್ಲ ನೂರು FIR ಹಾಕಿದ್ರೂ ಹೆದರಲ್ಲ: ಮುನಿಸ್ವಾಮಿ

Public TV
1 Min Read

ಕೋಲಾರ: ಬಿಜೆಪಿಯವರ ವಿರುದ್ಧ ನೂರು ಎಫ್‌ಐಆರ್ (FIR) ದಾಖಲು ಮಾಡಿದರೂ ಹೆದರಲ್ಲ ಎಂದು ಕೋಲಾರ (Kolar) ಮಾಜಿ ಸಂಸದ ಎಸ್.ಮುನಿಸ್ವಾಮಿ (S Muniswamy) ಹೇಳಿದ್ದಾರೆ.

ಕೋಲಾರದ ಹೊರವಲಯದ ರತ್ನ ಕನ್ವೆನ್ಷನ್ ಹಾಲ್‌ನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಸೇವಾ ಪ್ರಾಕ್ಷಿಕ ಕಾರ್ಯಾಗಾರದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ನಲ್ಲಿ 42 ಸಂಘಟನೆಗಳಿವೆ. ಅದರಲ್ಲಿ ಭಾರತೀಯ ಜನತಾ ಪಾರ್ಟಿ ಒಂದು. ದೇಶ ಮತ್ತು ಧರ್ಮದ ರಕ್ಷಣೆಗೆ ಆರ್‌ಎಸ್‌ಎಸ್ ಹುಟ್ಟಿರೋದು, ದೇಶಕ್ಕೋಸ್ಕರ ಪ್ರಾಣ ಕೊಡಲು ಸಿದ್ಧ. ವೋಟ್ ಬ್ಯಾಂಕ್‌ಗೋಸ್ಕರ ಸಿದ್ದರಾಮಯ್ಯ ಒಂದು ಸಮುದಾಯವನ್ನು ಮೆಚ್ಚಿಸಲು ಹೊರಟಿದ್ದಾರೆ ಎಂದು ಕಿಡಿಕಾರಿದರು. ಇದನ್ನೂ ಓದಿ: ನಾನು ನಿಮ್ಮ ಜೊತೆಗಿದ್ದೇನೆ: ಮಣಿಪುರ ಜನರಿಗೆ ಪ್ರಧಾನಿ ಮೋದಿ ಭರವಸೆ

ಒಂದಲ್ಲ ನೂರು ಎಫ್‌ಐಆರ್ ಹಾಕಿದರು ಹೆದುರುವುದಿಲ್ಲ, ಭಯ ಅನ್ನೋದು ನಮ್ಮಲ್ಲಿ ಇಲ್ಲ. ಸಿಟಿ ರವಿ, ವಿಕ್ರಂ ಹೆಗ್ಡೆ, ರಾಜೀವ್ ಮೇಲೆ ಹಾಕಿರುವ ಪ್ರಕರಣ ನೋಡಿದರೆ ರಾಜ್ಯದಲ್ಲಿ ಕಾಂಗ್ರೆಸ್ ದ್ವೇಷದ ರಾಜಕಾರಣ ಮಾಡುತ್ತಿದೆ, ಸುಳ್ಳು ಗ್ಯಾರೆಂಟಿಗಳನ್ನು ಹೇಳಿ ಜನರನ್ನ ದಾರಿ ತಪ್ಪಿಸಿದೆ. ಮುಂದಿನ ದಿನಗಳಲ್ಲಿ ಜನ ಶಾಶ್ವತವಾಗಿ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ವಿಧಾನ ಮಂಡಲದಲ್ಲಿಯ ಆರೋಗ್ಯಪೂರ್ಣ ಚರ್ಚೆಗಳೇ ಪ್ರಜಾಪ್ರಭುತ್ವದ ಯಶಸ್ಸಿನ ಮೂಲಾಧಾರ: ಬಸವರಾಜ ಹೊರಟ್ಟಿ

ಹಿಂದು ಸಂಘಟನೆಗಳ ಮುಖಂಡ ಮತ್ತು ದೇಶ ಭಕ್ತರನ್ನು ಒಳಗೆ ಹಾಕಿಸುತ್ತಿದ್ದೀರಿ. ಮುಂದೆ ಒಂದು ದಿನ ನಿಮ್ಮನ್ನು ಒಳಗೆ ಹಾಕಿಸುವಂತಹ ಕಾಲ ಹತ್ತಿರ ಬರುತ್ತದೆ. ಸಚಿವ ಸಂಪುಟದಲ್ಲಿ ಅನೇಕ ಸಚಿವರು ಭ್ರಷ್ಟಚಾರದಲ್ಲಿ ಸಿಕ್ಕಿ ಹಾಕಿಕೊಂಡು ಜಾಮೀನು ಮೇಲೆ ಹೊರಗಡೆ ಇದ್ದಾರೆ. ಮುಂದೆ ಶಾಶ್ವತವಾಗಿ ಒಳಗೆ ಹಾಕಿಸುವಂತಹ ಕೆಲಸ ನಮ್ಮ ಸರ್ಕಾರ ಬಂದ ಮೇಲೆ ಆಗುತ್ತದೆ ಎಂದು ತಿಳಿಸಿದರು. ಇದನ್ನೂ ಓದಿ: Hassan Tragedy | ಟ್ರಕ್ ಅಪಘಾತ ನಡೆದ ಜಾಗದಲ್ಲಿ ಹಂಪ್ಸ್ ನಿರ್ಮಿಸಲು ತೀರ್ಮಾನ

Share This Article