ಯೋಗೇಶ್ವರ್ ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ: ಸಚಿವ ಲಾಡ್

Public TV
1 Min Read

ಧಾರವಾಡ: ಸಿ.ಪಿ.ಯೋಗೇಶ್ವರ್ (C.P Yogeshwar) ಕಾಂಗ್ರೆಸ್ (Congress) ಪಕ್ಷಕ್ಕೆ ಬಂದರೆ ಸ್ವಾಗತ ಮಾಡುತ್ತೇವೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh Lad) ಹೇಳಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್ವರ್ ಅವರಿಗೆ ನಮ್ಮ ಪಕ್ಷಕ್ಕೆ ನಾನು ವೈಯಕ್ತಿಕವಾಗಿ ಸ್ವಾಗತ ಮಾಡುತ್ತೇನೆ. ನಮ್ಮ ಪಕ್ಷದ ಹೈಕಮಾಂಡ್, ಅಧ್ಯಕ್ಷರು ಹಾಗೂ ಸಿಎಂ ಅವರ ಒಪ್ಪಿಗೆ ಮೇರೆಗೆ ಅವರು ನಮ್ಮ ಪಕ್ಷಕ್ಕೆ ಬರಬಹುದು. ನಮ್ಮ ಪಕ್ಷಕ್ಕೆ ಬಂದರೆ ವೆಲ್ ಕಮ್ ಮಾಡುತ್ತೇನೆ ಎಂದಿದ್ದಾರೆ.

ಸಂಡೂರು ಉಪಚುನಾವಣೆಗೆ ಕಾಂಗ್ರೆಸ್ ಟಿಕೆಟ್ ವಿಚಾರವಾಗಿ, ಟಿಕೆಟ್ ವಿಚಾರ ಬಗೆಹರಿದಿದೆ. ಆದರೆ, ಯಾರಿಗೆ ಫೈನಲ್ ಆಗುತ್ತದೆ ಎನ್ನುವುದನ್ನು ನೋಡಬೇಕು. ಸಂಸದ ತುಕಾರಾಂ ಅವರ ಪತ್ನಿಯ ಹೆಸರು ಇದೆ. ಇನ್ನೂ ಅಧಿಕೃತವಾಗಿ ಹೊರಗೆ ಬಂದಿಲ್ಲ. ನಮ್ಮ ತೀರ್ಮಾನವನ್ನು ನಾವು ಹೇಳಿದ್ದೇವೆ. ಪಕ್ಷ ಏನು ತೀರ್ಮಾನ ತೆಗೆದುಕೊಳ್ಳುತ್ತದೆಯೋ ನೋಡಬೇಕು ಎಂದು ಹೇಳಿದ್ದಾರೆ.

ಶಿಗ್ಗಾಂವಿ ಉಪಚುನಾವಣೆ ವಿಚಾರವಾಗಿ, ನಮ್ಮ ಪಕ್ಷದಲ್ಲಿ ಲಿಂಗಾಯತ ಹಾಗೂ ಮುಸ್ಲಿಂ ಅಂತಾ ಏನೂ ಇಲ್ಲ. ನಮ್ಮದು ಸೆಕ್ಯುಲರ್ ಪಕ್ಷ. ನಾವೆಲ್ಲರನ್ನೂ ಒಂದೇ ರೀತಿ ನೋಡುತ್ತೇವೆ. ಯಾರಿಗೇ ಟಿಕೆಟ್ ಕೊಟ್ಟರೂ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ. ನಮ್ಮ ಅನಿಸಿಕೆಗಳನ್ನು ಬಹಿರಂಗವಾಗಿ ಹೇಳಲು ಬರುವುದಿಲ್ಲ. ಎಲ್ಲಾ ವಿಚಾರಗಳನ್ನೂ ಪಕ್ಷದಲ್ಲಿ ಹೇಳಿಕೊಂಡಿರುತ್ತೇವೆ ಎಂದಿದ್ದಾರೆ.

Share This Article