ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ; ಬೇರೆ ಆಪ್ಷನ್‌ ನೋಡ್ತಿದ್ದೇವೆ: ಡಿಕೆಶಿ

Public TV
1 Min Read

ಬೆಂಗಳೂರು: ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳುತ್ತಿಲ್ಲ. ಬೇರೆ ಆಪ್ಷನ್‌ ನೋಡ್ತಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ (DK Shivakumar) ಹೇಳಿದರು.

ಸದಾಶಿವನಗರದ ನಿವಾಸದಲ್ಲಿ ಮಾತನಾಡಿದ ಡಿಕೆಶಿ, ನಾವು ಯಾರನ್ನೂ ಪುಕ್ಸಟ್ಟೆ ಅಕ್ಕಿ ಕೇಳ್ತಿಲ್ಲ. ಫೆಡರಲ್ ಸ್ಟ್ರಕ್ಚರ್‌ನಲ್ಲಿ ಇದ್ದೇವೆ. ಆಪ್ಷನ್ ನೋಡ್ತಿದ್ದೇವೆ. ಅಕ್ಕಿಯನ್ನ ಬೇರೆ ರಾಜ್ಯದಿಂದ ತರುವ ಬಗ್ಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕೇವಲ 2 ಬಲ್ಬ್ ಇದ್ದ ತಗಡಿನ ಮನೆಗೆ 1 ಲಕ್ಷ ರೂ. ಬಿಲ್ – ಶಾಕ್ ಆಗಿ ವೃದ್ಧೆ ಮನೆಗೆ ಅಧಿಕಾರಿ ದೌಡು!

ನಿಮ್ಮ ಪಕ್ಷಕ್ಕಿಂತ ನಮ್ಮ ಪಕ್ಷ ವಿಭಿನ್ನವಾಗಿದೆ. ನಾವು ಕೊಟ್ಟ ಮಾತು ಉಳಿಸಿಕೊಳ್ತೇವೆ. ಸಿಎಂ, ಸಚಿವರು ದೆಹಲಿಗೆ ಹೋಗಿ ಯಾರನ್ನ ಭೇಟಿರಾಗಿದ್ದಾರೆ, ಏನು ಮಾಡಿದ್ದಾರೆ ಗೊತ್ತಿಲ್ಲ. ನಾನು ದೆಹಲಿಗೆ ಹೋಗಿಲ್ಲ. ಹೋಗುವ ಟೈಮ್ ಬರುತ್ತೆ. ಆಗ ಹೋಗ್ತೇನೆ ಎಂದರು.

ಶೋಭಾ ಕರಂದ್ಲಾಜೆ ಮೆದುಳು ಇರಲಿಲ್ವ ಎಂದು ಮಾತನಾಡಿದ್ದಾರೆ. ಅವರು ಉದ್ಯೋಗ ಸೃಷ್ಟಿ ಮಾಡ್ತೀನಿ, 15 ಲಕ್ಷ ಕೊಡ್ತೀನಿ, ಕಪ್ಪು ಹಣ ತರ್ತೀನಿ ಅಂತ ಏಕೆ ಮಾತಾಡಿದ್ರು? 5 ವರ್ಷದಲ್ಲಿ ಅವರ ಪ್ರಣಾಳಿಕೆ ಪೂರ್ಣ ಮಾಡಲಿಲ್ಲ. ನಾವು ಮಾಡ್ತಿದ್ದೇವೆ. ನಮಗೆ ಬಡವರ ಬಗ್ಗೆ ಕಾಳಜಿ ಇದೆ ಎಂದು ಟಾಂಗ್‌ ಕೊಟ್ಟರು. ಇದನ್ನೂ ಓದಿ: ಅಕ್ರಮವಾಗಿ ಸಾಗಿಸ್ತಿದ್ದ 16,200 KG ಅಕ್ಕಿ ವಶಕ್ಕೆ

ಅಕ್ಕಿ ವಿಚಾರದಲ್ಲಿ ಕಾಂಗ್ರೆಸ್ ನಾಯಕರಿಗೆ ಜ್ಞಾನ ಇರಲಿಲ್ಲ ಎಂಬ ಕುಮಾರಸ್ವಾಮಿ ಹೇಳಿಕೆ ಬಗ್ಗೆ ಮಾತನಾಡಿ, ನಮಗೆ ಖಂಡಿತ ಜ್ಞಾನ ಇರಲಿಲ್ಲ. ಕುಮಾರಣ್ಣಗೆ ಜ್ಞಾನ ಇದೆಯಲ್ಲಾ ಸಾಕು. ಪ್ರಧಾನಿ ತಮ್ಮ ಬಳಿ ಅಲ್ಲದಿದ್ರೂ, ವಿದೇಶಿ ಮಾಧ್ಯಮಗಳ ಜೊತೆ ಮಾತನಾಡಿದ್ದಾರೆ. ನೀವೂ ಖುಷಿ ಪಡಿ ಎಂದು ಲೇವಡಿ ಮಾಡಿದ್ದಾರೆ.

Share This Article