ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು ತಂದಿದ್ದೇವೆ: ಡಿಕೆಶಿ

Public TV
1 Min Read

ಕೋಲಾರ: ರಾಜ್ಯದ ಮಾದರಿಯಲ್ಲೇ ಕೇಂದ್ರದಲ್ಲೂ ಗ್ಯಾರಂಟಿಗಳನ್ನು (Guarantee Schemes) ತಂದಿದ್ದೇವೆ. ಇದು ಕೋಟ್ಯಂತರ ಜನರಿಗೆ ಅನುಕೂಲವಾಗಲಿದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಹೇಳಿದ್ದಾರೆ.

ಕೋಲಾರದ (Kolar) ಮುಳಬಾಗಿಲಿನ ಕುರುಡುಮಲೆ ವಿನಾಯಕನಿಗೆ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಸಿದ್ದರಾಮಯ್ಯ ಸಹಿ ಮಾಡಿದಂತೆ ನಮ್ಮ ಎಐಸಿಸಿ ಅಧ್ಯಕ್ಷರು ಹಾಗೂ ರಾಹುಲ್ ಗಾಂಧಿಯವರು ಸಹಿ ಮಾಡಿದ್ದಾರೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನ ಬರಲಿದೆ ಎಂದರು. ಇದನ್ನೂ ಓದಿ: ಸೈದ್ಧಾಂತಿಕವಾಗಿ ಇಬ್ಬರಿಗೂ ಹೊಂದಾಣಿಕೆ ಆಗಲ್ಲ: ಕಾಂಗ್ರೆಸ್‌ ಶಾಸಕಿ ಪತ್ನಿಯಿದ್ದ ಮನೆ ಬಿಟ್ಟು ಹೋದ ಬಿಎಸ್‌ಪಿ ಅಭ್ಯರ್ಥಿ

ರೈತರಿಗೆ ಆದಾಯ ದ್ವಿಗುಣಗೊಳಿಸುವ ಪ್ರಣಾಳಿಕೆ ಬಿಡುಗಡೆ ಮಾಡಲಾಗಿದೆ. ಆರೋಗ್ಯದಲ್ಲಿ ನ್ಯಾಯ, ಉದ್ಯೋಗದಲ್ಲಿ ನ್ಯಾಯ, ಮಹಿಳೆಯರಿಗೆ ನ್ಯಾಯ, ರೈತರಿಗೆ ಮತ್ತು ಶಿಕ್ಷಣದಲ್ಲಿ ನ್ಯಾಯ ಒದಗಿಸುವ 5 ಗ್ಯಾರಂಟಿ ನೀಡಲಾಗಿದೆ. ರಾಜ್ಯದ ಜನತೆಗೆ ಕಾಂಗ್ರೆಸ್ ಪಕ್ಷ ಕೊಟ್ಟ ಮಾತಿನಂತೆ ನಡೆದಿದೆ. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರು ಗ್ಯಾರಂಟಿಗಳಿಗೆ ಸಹಿ ಮಾಡಿ ಕೊಟ್ಟಿದ್ದಾರೆ. ನಮ್ಮ ಗ್ಯಾರಂಟಿ, ನಮ್ಮ ವಿಜಯ ನಿಶ್ಚಿತವಾಗಿದೆ. ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷ ಜಯಗಳಿಸಲಿದೆ. ರಾಜ್ಯದ ಗ್ಯಾರಂಟಿಗಳಂತೆ ಕೇಂದ್ರದ ಗ್ಯಾರೆಂಟಿಗಳಿಗೆ ಶಕ್ತಿ ಕೊಡುವಂತೆ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿರುವೆ ಎಂದು ಹೇಳಿದರು. ಇದನ್ನೂ ಓದಿ: ಗುಂಡೂರಾವ್ ಮನೆಯಲ್ಲಿ ಅರ್ಧ ಪಾಕಿಸ್ತಾನವಿದೆ ಹೇಳಿಕೆ – ಕಾಂಗ್ರೆಸ್‌ನಿಂದ ಯತ್ನಾಳ್ ವಿರುದ್ಧ ದೂರು

Share This Article