We Have An Agreement – ಸಿಎಂ ಹುದ್ದೆ ಒಪ್ಪಂದದ ಬಗ್ಗೆ ಡಿಕೆಶಿ ಮೌನ ಮುರಿದ್ರಾ?

Public TV
3 Min Read

– ರಾಷ್ಟ್ರೀಯ ವಾಹಿನಿಗೆ ಡಿಕೆಶಿ ಸಂದರ್ಶನ
– ಸಿಎಂ ಹಾಸನ ಸಮಾವೇಶಕ್ಕೂ ಮೊದಲು ಡಿಕೆಶಿ ಸ್ಫೋಟಕ ಹೇಳಿಕೆ

ಬೆಂಗಳೂರು: ಮುಖ್ಯಮಂತ್ರಿ ಹುದ್ದೆ ಒಪ್ಪಂದದ ಬಗ್ಗೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಈಗ ಮೌನ ಮುರಿದ್ರಾ ಎಂಬ ಪ್ರಶ್ನೆ ಎದ್ದಿದೆ.

ರಾಷ್ಟ್ರೀಯ ವಾಹಿನಿ ಟೈಮ್ಸ್ ನೌಗೆ ನೀಡಿದ ಸಂದರ್ಶನದ ವೇಳೆ ಡಿಕೆಶಿ ಒಪ್ಪಂದದ ಬಗ್ಗೆ ಪ್ರಸ್ತಾಪ ಮಾಡಿದ್ದರಿಂದ ಈ ಪ್ರಶ್ನೆ ಈಗ ಸೃಷ್ಟಿಯಾಗಿದೆ.

ನನ್ನ ಸಿಎಂ ಸಿದ್ದರಾಮಯ್ಯ ನಡುವಿನ ಸಂಬಂಧ ಚೆನ್ನಾಗಿದೆ. ಈಗ ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಹೇಳಿದರು. ಈ ವೇಳೆ ನೀವು ಮುಂದಿನ ವರ್ಷ ಸಿಎಂ ಆಗುತ್ತೀರಾ ಪ್ರಶ್ನೆಗೆ ನೇರವಾಗಿ ಉತ್ತರಿಸದ ಡಿಕೆಶಿ ನಕ್ಕು We Have An Agreement ಮಾರ್ಮಿಕವಾಗಿ ಪ್ರತಿಕ್ರಿಯಿಸಿದರು.

ಸಂದರ್ಶನದಲ್ಲಿ ಡಿಕೆಶಿ ಹೇಳಿದ್ದೇನು?
ನಾನು ಹೈಕಮಾಂಡ್ ಬ್ಲಾಕ್ ಮೇಲ್ ಮಾಡಿಲ್ಲ, ಮಾಡಲ್ಲ. ಅದು ನನ್ನ ವೀಕ್ನೇಸ್. ಪಕ್ಷ ನನಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಣೆ ಮಾಡುತ್ತೇನೆ. ಯಾವುದೇ ಪೋಸ್ಟ್ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ.

ಒಂದು ದಿನ ನನ್ನ ಲಾಯಲ್ಟಿಗೆ ರಾಯಲ್ಟಿ ಸಿಗಲಿದೆ. ಆ ದಿನಕ್ಕಾಗಿ ನಾನು ಕಾಯುತ್ತಿದ್ದೇನೆ. ನನಗೆ ಗಾಂಧಿ ಕುಟುಂಬದ ಬಗ್ಗೆ ಪ್ರೀತಿ ಇದೆ. ನಾನು ಪಾರ್ಟಿ ಹೇಳಿದಂತೆ ಹೋಗುತ್ತೇನೆ. ನಮ್ಮ ನಡುವೆ ಕೆಲ ಒಪ್ಪಂದ ನಡೆದಿದೆ. ಅದನ್ನ ಮಾಧ್ಯಮಗಳ ಮುಂದೆ ನಾನು ಚರ್ಚೆ ಮಾಡುವುದಿಲ್ಲ. ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಅಧಿಕಾರದಲ್ಲಿ ಇರ್ತಾರೋ ಇರಲ್ವೋ ಗೊತ್ತಿಲ್ಲ: ಸಿಎಂ ಆಪ್ತ ಸಲಹೆಗಾರ ಬಿಆರ್ ಪಾಟೀಲ್ ಹೊಸ ಬಾಂಬ್

ನಾನು ಯಾವಾಗಲೂ ಸಿದ್ದರಾಮಯ್ಯ ಜೊತೆ ಚೆನ್ನಾಗಿದ್ದೇನೆ. ಇಬ್ಬರೂ ಒಟ್ಟಾಗಿದ್ದೇವೆ, ಇಬ್ಬರು ಮಾತಾಡುತ್ತೇವೆ. ನನ್ನ ಮಾತಿಗೆ ಅವರು ಒಪ್ಪುತ್ತಾರೆ. ಅವರ ಮಾತಿಗೆ ನಾನು ಒಪ್ಪುತ್ತೇನೆ. ನಾನು ಪ್ರಾಮಾಣಿಕವಾಗಿದ್ದೇನೆ ಪ್ರಾಮಾಣಿಕತೆಗೆ ತಕ್ಕ ಬೆಲೆ ತಕ್ಕ ಪದವಿ ಸಿಕ್ಕೇ ಸಿಗುತ್ತದೆ.

ಆಸೆ ಪಡುವುದು ತಪ್ಪಲ್ಲ. ಆಸೆ ಪಡೋದನ್ನು ನಿಲ್ಲಿಸಲು ಆಗುವುದಿಲ್ಲ. ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆ. ನಾವು ಪೊಲಿಟಿಕಲ್ ಪೋಸ್ಟ್ ಬಗ್ಗೆ ಮಾಧ್ಯಮಗಳಲ್ಲಿ ಮಾತನಾಡಲು ಆಗುವುದಿಲ್ಲ.ಮೂರರಿಂದ ನಾಲ್ಕು ಜನರು ಕುಳಿತು ಅದನ್ನ ಫೈನಲ್ ಮಾಡ್ತಾರೆ. ಯಾರು ಆಗಬೇಕೆಂದು ನಿರ್ಧಾರ ಕೈಗೊಳ್ಳುತ್ತಾರೆ.

ನನ್ನ ಸಾಮರ್ಥ್ಯ ನನ್ನ ದೌರ್ಬಲ್ಯ ಎರಡೂ ನನಗೆ ಗೊತ್ತಿದೆ. ನನಗೆ ಕೊಟ್ಟ ಜವಬ್ದಾರಿಯನ್ನ ನಾನು ನಿಭಾಯಿಸಬಲ್ಲೆ. ನನ್ನ ವೀಕ್ನೆಸ್ ನಾನು ಎಂದಿಗೂ ಹೈಕಮಾಂಡ್ ಬ್ಲಾಕ್ ಮೇಲ್ ಮಾಡಿಲ್ಲ. ನನಗೆ ಗಾಂಧಿ ಕುಟುಂಬದ ಜೊತೆ ಉತ್ತಮ ಬಾಂಧವ್ಯ, ಪ್ರೀತಿ ಇದೆ. ನನ್ನ ಲಾಯಲ್ಟಿಗೆ ರಾಯಲ್ಟಿ ಸಿಗಲಿದೆ ಒಂದು ದಿನ. ಆ ದಿನಕ್ಕಾಗಿ ಕಾಯುತ್ತಿದ್ದೇನೆ.

ನಾನು ಯಾವಾಗಲೂ ಸಿದ್ದರಾಮಯ್ಯ ಜೊತೆ ಚೆನ್ನಾಗಿದ್ದೀನಿ. ಇಬ್ಬರೂ ಒಟ್ಟಾಗಿದ್ದೇವೆ, ಇಬ್ಬರು ಮಾತಾಡುತ್ತೇವೆ. ನನ್ನ ಮಾತಿಗೆ ಅವರು ಒಪ್ಪುತ್ತಾರೆ. ಅವರ ಮಾತಿಗೆ ನಾನು ಒಪ್ಪುತ್ತೇನೆ. ಇದನ್ನ ನನ್ನ ಮನದುಂಬಿ ಹೇಳುತ್ತೇನೆ. ಯಾರೆಲ್ಲಾ ಸಿಎಂ ಹುದ್ದೆಗೆ ಆಸೆ ಪಡುತ್ತಿದ್ದಾರೋ ಅವರಿಗೆಲ್ಲ ಆಲ್ ದಿ ಬೆಸ್ಟ್. ಯಾರು ಆಸೆ ಪಡೋದನ್ನ ನಿಲ್ಲಿಸೋಕೆ ಆಗಲ್ಲ. ಶಾಸಕರನ್ನು ಪಾರ್ಟಿ ಹ್ಯಾಂಡಲ್ ಮಾಡುತ್ತೆ, ಹೈಕಮಾಂಡ್ ನೋಡಿಕೊಳ್ಳುತ್ತೆ.

 

Share This Article