ನೀವು ಹೇಗಿದ್ದೀರೋ ಹಾಗೇ ತೋರಿಸಿದ್ದೀವಿ- ಕಿಚ್ಚನ ಮಾತಿಗೆ ಸ್ಪರ್ಧಿಗಳು ಗಪ್‌ಚುಪ್

By
1 Min Read

ಬಿಗ್ ಬಾಸ್ ಸೀಸನ್ 10ರ (Bigg Boss Kannada 10) ಫಿನಾಲೆಗೆ ಇಂದು (ಜ.27) ಚಾಲನೆ ಸಿಕ್ಕಿದೆ. 6 ಸ್ಪರ್ಧಿಗಳು ಫಿನಾಲೆಯ ಕಣದಲ್ಲಿದ್ದಾರೆ. ಈ ವೇಳೆ, ನೀವು ಹೇಗಿದ್ದೀರೋ ಹಾಗೇ ಟಿವಿಯಲ್ಲಿ ತೋರಿಸಿದ್ದೀವಿ ಎಂದು ಸ್ಪರ್ಧಿಗಳಿಗೆ ಸುದೀಪ್ ಬಿಸಿ ಮುಟ್ಟಿಸಿದ್ದಾರೆ. ಈ ಮೂಲಕ ರಕ್ಷಕ್‌ಗೆ (Rakshak)  ಪರೋಕ್ಷವಾಗಿ ಸುದೀಪ್ (Sudeep) ಟಾಂಗ್ ಕೊಟ್ಟಿದ್ದಾರೆ.

ದೊಡ್ಮನೆಯಲ್ಲಿ ಈಗ ಕಾರ್ತಿಕ್, ವಿನಯ್, ಸಂಗೀತಾ, ತುಕಾಲಿ ಸಂತು, ವರ್ತೂರು ಸಂತೋಷ್, ಪ್ರತಾಪ್ ಈ 6 ಸ್ಪರ್ಧಿಗಳು ಈಗ ಫಿನಾಲೆ ರೇಸ್‌ನಲ್ಲಿದ್ದಾರೆ. ಇದರ ನಡುವೆ ಒಳಗಿರುವ ಸ್ಪರ್ಧಿಗಳ ಪರವಾಗಿ ಹೊರಗಡೆ ಹೇಗೆ ಪ್ರಚಾರ ಕಾರ್ಯ ನಡೆಯುತ್ತಿದೆ ಎಂದು ಸುದೀಪ್ ವಿಡಿಯೋವೊಂದನ್ನು ಸ್ಪರ್ಧಿಗಳಿಗೆ ತೋರಿಸಿದ್ದಾರೆ. ಇದನ್ನೂ ಓದಿ:Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್?

ಈ ವೇಳೆ, ಜನರ ಪ್ರೀತಿ ನೋಡಿ ಹೇಗೆ ಅನಿಸುತ್ತಿದೆ ಎಂದು ಪ್ರತಾಪ್‌ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ಹೃದಯ ತುಂಬಿ ಬರುತ್ತಿದೆ ಸರ್, ಇಷ್ಟೊಂದು ಪ್ರೀತಿ ಸಿಗುತ್ತೆ ಎಂದು ಗೊತ್ತಿರಲಿಲ್ಲ. ಜನರಿಗೆ ಯಾವ ರೀತಿ ಹೊರಗಡೆ ಕಂಡಿದ್ದೇನೆ ಎಂಬುದರ ಬಗ್ಗೆ ನನಗೆ ಐಡಿಯಾ ಇಲ್ಲ. ಆದರೂ ಅವರ ಪ್ರೀತಿಯ ಬಗ್ಗೆ ಖುಷಿಯಿದೆ ಎಂದಿದ್ದಾರೆ.

ಈ ವೇಳೆ ಸುದೀಪ್, ನಾವು ಯಾವ ಪುಟ್ಕೋಸಿ, ಬದನೆಕಾಯಿ ನೆಗೆಟಿವ್‌ನೂ ನಾವು ಮಾಡಲ್ಲ. ನೀವು ಹೇಗಿದ್ದೀರೋ ಹಾಗೇ ತೋರಿಸಿದ್ದೀವಿ ಎಂದು ಪ್ರತಾಪ್‌ಗೆ ಹೇಳಿದ್ದಾರೆ. ಜೊತೆಗೆ ಹೊರಗಡೆ ಬಂದ ಮೇಲೆ ಇಂಟರ್‌ವ್ಯೂ ಕೊಡಬೇಕಾದ್ರೂ ಇದನ್ನು ಗಮನದಲ್ಲಿಟ್ಟುಕೊಳ್ಳಿ ಅಂದಿದ್ದಾರೆ. ಈ ಮೂಲಕ ಪರೋಕ್ಷವಾಗಿ ರಕ್ಷಕ್‌ಗೆ ಕಿಚ್ಚ ತಿರುಗೇಟು ನೀಡಿದ್ದಾರೆ.

Share This Article