200 ಯೂನಿಟ್ ಫ್ರೀ ಅಂದಿಲ್ಲವೆಂದ್ರು ಜಾರ್ಜ್- ಗ್ಯಾರಂಟಿ ಬೆನ್ನಲ್ಲೇ ವಿದ್ಯುತ್ ಹೊಂದಾಣಿಕೆ ಶುಲ್ಕ ಹೆಚ್ಚಳ

Public TV
2 Min Read

– ಬಾಡಿಗೆ ಮನೇಲಿದ್ರೂ ಗೃಹಜ್ಯೋತಿ ಎಂದ ಡಿಕೆ

ಬೆಂಗಳೂರು: ಗ್ಯಾರಂಟಿ ಪಾಲಿಟಿಕ್ಸ್ ಮುಂದುವರಿದಿದೆ. ಬಾಡಿಗೆ ಮನೆ ಇರಲಿ, ಸ್ವಂತ ಮನೆ ಇರಲಿ. ನಮ್ಮ ಮಾತು ಖಚಿತ, ವಿದ್ಯುತ್ ಉಚಿತ ಎಂದು ಡಿಕೆ ಶಿವಕುಮಾರ್ (D.K Shivakumar) ಸ್ಪಷ್ಟಪಡಿಸಿದ್ದಾರೆ. ಆದರೆ ಇಂಧನ ಸಚಿವ ಕೆ.ಜೆ. ಜಾರ್ಜ್ (K.J George) ಮಾತ್ರ, 200 ಯೂನಿಟ್ ಫ್ರೀ ಅಂತಾ ಹೇಳಿಲ್ಲ. 200 ಯೂನಿಟ್ (200 Unit) ತನಕ ಎಂದಿದ್ದೇವೆ ಅಂತಾ ಸಮಜಾಯಿಷಿ ನೀಡಿದ್ದಾರೆ.

ಯಾರು ಜಾಸ್ತಿ ವಿದ್ಯುತ್ ಬಳಸ್ತಾರೋ ಅವರು ಕಟ್ತಾರೆ ಬಿಡಿ. ಮೊಸ್ರಲ್ಲಿ ಕಲ್ಲು ಹುಡುಕ್ಬೇಡಿ ಅಂತಲೂ ಜಾರ್ಜ್ ಹೇಳಿದ್ದಾರೆ. ಇನ್ನೂ ಗ್ಯಾರಂಟಿ ಯೋಜನೆಗಳ ಜಾರಿಯಾದ ಹೊತ್ತಲ್ಲಿಯೇ ಇಂಧನ ಇಲಾಖೆ ಸದ್ದಿಲ್ಲದೇ ವಿದ್ಯುತ್ ಶುಲ್ಕ ಹೆಚ್ಚಿಸಿ ಆದೇಶ ಹೊರಡಿಸಿದೆ. ಬೆಸ್ಕಾ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಮೇಲೆ ಹೆಚ್ಚುವರಿಯಾಗಿ 51 ಪೈಸೆ ಹೊಂದಾಣಿಕೆ ಶುಲ್ಕವನ್ನು ವಿಧಿಸಲಾಗಿದೆ. ಇದು ಜುಲೈನಿಂದ ಸೆಪ್ಟೆಂಬರ್‍ವರೆಗೆ ಮಾತ್ರ ಅಕ್ಟೋಬರ್‍ನಿಂದ ಮತ್ತೆ ಈ ಶುಲ್ಕವನ್ನು ಪರಿಷ್ಕರಣೆ ಮಾಡಲಾಗುತ್ತದೆ. ಇದನ್ನೂ ಓದಿ: 200 ಯೂನಿಟ್‌ ವಿದ್ಯುತ್‌ ಫ್ರೀ – ಷರತ್ತುಗಳು ಅನ್ವಯ

ಆಗ 50 ಪೈಸೆಗೆ ಈ ಶುಲ್ಕ ಇಳಿಯಲಿದೆ. ಅದೇ ರೀತಿ, ಮೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‍ಗೆ ಹೆಚ್ಚುವರಿಯಾಗಿ 47 ಪೈಸೆ, ಚೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‍ಗೆ 41 ಪೈಸೆ, ಹೆಸ್ಕಾಂ ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್‍ಗೆ 50 ಪೈಸೆ, ಜೆಸ್ಕಾಂ ವ್ಯಾಪ್ತಿಯಲ್ಲಿ 34 ಪೈಸೆ ಹೆಚ್ಚಳ ಮಾಡಲಾಗಿದೆ. ಆದರೆ ಗೃಹಜ್ಯೋತಿ ಯೋಜನೆಗೂ ಇದಕ್ಕೂ ಸಂಬಂಧವಿಲ್ಲ. ಕಲ್ಲಿದ್ದಲು ಖರೀದಿಯ ವೆಚ್ಚವನ್ನು ಹೊಂದಾಣಿಕೆ ಮಾಡಲಾಗಿದೆ ಅಷ್ಟೇ ಗೃಹಜ್ಯೋತಿ ಫಲಾನುಭವಿಗಳ ಮೇಲೆ ಇದು ಪರಿಣಾಮ ಕೂಡ ಬೀರಲ್ಲ ಎಂದು ಇಂಧನ ಇಲಾಖೆ ಸ್ಪಷ್ಟಪಡಿಸಿದೆ. ಇದನ್ನೂ ಓದಿ: ಸರ್ಕಾರದಿಂದ ಕರ್ನಾಟಕ ಯುವ ನಿಧಿ ಯೋಜನೆ ಜಾರಿ- ಷರತ್ತುಗಳೇನು?

ಇತ್ತ ಇನ್ನು ಅಕ್ಕಿ ಜೊತೆ ರಾಗಿ, ಗೋಧಿ ಕೊಡ್ತೀವಿ ಎಂದು ಆಹಾರ ಮಂತ್ರಿ ಕೇಳ್ತಿದ್ದಾರೆ. ಪ್ರತಾಪ್ ಸಿಂಹ ಮಾತ್ರ ಗೃಹಲಕ್ಷ್ಮಿ ವಿಚಾರದಲ್ಲಿ ತಗಾದೆ ತೆಗೆದಿದ್ದಾರೆ. ಮುಸ್ಲಿಮರ ಮನೆಲಿ ಇಬ್ರು ಮೂವರು ಪತ್ನಿಯರಿದ್ರೆ ಏನು ಮಾಡ್ಬೇಕು. ಕುಟುಂಬದೊಳಗೆ ತಂದಿಡೊ ಕೆಲಸ ಮಾಡ್ತಿದ್ದೀರಿ ಎಂದು ಟೀಕಿಸಿದ್ದಾರೆ. ಇತ್ತ ಡಕೋಟಾ ಬಸ್‍ಗಳಲ್ಲಿ ಮಾತ್ರ ಹೆಣ್ಮಕ್ಕಳು ಫ್ರೀಯಾಗಿ ಓಡಾಡ್ಬೇಕಾ ಎಂದು ಕೇಂದ್ರ ಮಂತ್ರಿ ನಾರಾಯಣಸ್ವಾಮಿ ಪ್ರಶ್ನಿಸಿದ್ದಾರೆ.

Share This Article