ನಮ್ಮ ಸರ್ಕಾರ 5 ವರ್ಷ ಬಂಡೆ ರೀತಿ ಇರುತ್ತೆ: ಒಟ್ಟಾಗಿಯೇ ಇದ್ದೇವೆ ಎಂದು ಹೇಳಿ ಡಿಕೆಶಿಯ ಕೈ ಎತ್ತಿದ ಸಿಎಂ

By
1 Min Read

ಮೈಸೂರು: ಸೆಪ್ಟೆಂಬರ್‌ನಲ್ಲಿ ಕ್ರಾಂತಿ ನಡೆಯಲಿದೆ ಎಂಬ ಬಿರುಗಾಳಿ ಎದ್ದ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ (CM Siddaramaiah)  ನಾನು ಮತ್ತು ಡಿಕೆ ಶಿವಕುಮಾರ್‌ (DK Shivakumar) ಒಟ್ಟಾಗಿಯೇ ಇದ್ದೇವೆ. ನಮ್ಮ ಸರ್ಕಾರ ಬಂಡೆ ರೀತಿ 5 ವರ್ಷ ಇರಲಿದೆ ಎಂದು ಹೇಳಿದರು.

ಮಾಧ್ಯಮಗಳ ಜೊತೆ ಡಿಕೆಶಿ ಕೈ ಹಿಡಿದು ಮಾತನಾಡಿದ ಅವರು, ನಮ್ಮಿಬ್ಬರ ಮಧ್ಯೆ ತಂದಿಡುವ ಪ್ರಯತ್ನವನ್ನು ಮಾಡಿದರೂ ಅದು ಆಗುವುದಿಲ್ಲ. ನಮ್ಮ ಬಗ್ಗೆ ಮಾತನಾಡುವ ಶ್ರೀರಾಮಲು ಎಷ್ಟು ಚುನಾವಣೆ ಸೋತಿದ್ದಾನೆ ಹೇಳಿ. ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸಿಮರು ಎಂದರು.  ಇದನ್ನೂ ಓದಿ: ಹಾಸನ| ಇಂದು ಒಂದೇ ದಿನ ಗೃಹಿಣಿ, ಪ್ರೊಫೆಸರ್‌, ಸರ್ಕಾರಿ ನೌಕರ ಹೃದಯಾಘಾತಕ್ಕೆ ಬಲಿ

ನಾನೇ ದಸರಾ (Dasara) ಉದ್ಘಾಟನೆ ಮಾಡುತ್ತೇನೆ ಎಂದು ಮಾಧ್ಯಮದವರಿಗೆ ಅನಿಸಿದೆ ಅಲ್ವಾ. ಅದೇ ಸತ್ಯ ಎಂದು ಹೇಳುವ ಮೂಲಕ ಈ ಬಾರಿ ಸಿದ್ದರಾಮಯ್ಯ ದಸರಾ ಉದ್ಘಾಟನೆ ಮಾಡುವುದಿಲ್ಲ ಎಂದಿದ್ದ ಅಶೋಕ್‌ಗೆ (Ashok) ತಿರುಗೇಟು ನೀಡಿದರು.

ಸುರ್ಜೇವಾಲಾ ಅವರು ಈ ರಾಜ್ಯದ ಕಾಂಗ್ರೆಸ್ ಉಸ್ತುವಾರಿ. ಕಾಂಗ್ರೆಸ್ ಶಾಸಕರ ಕಷ್ಟ ಸುಖ ಕೇಳುತ್ತಾರೆ. ಪಕ್ಷ ಸಂಘಟನೆ ಬಗ್ಗೆ ಸಲಹೆ ಕೊಡುತ್ತಾರೆ. ಅದು ಅವರ ಕೆಲಸ, ಇದರಲ್ಲಿ ಬೇರೆ ಏನು ವಿಶೇಷ ಇಲ್ಲ ಎಂದರು.

Share This Article