ನಾವೆಲ್ಲಾ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ- ಬಿಜೆಪಿ ಕುರಿತು ನಟ ಜಗ್ಗೇಶ್ ಹೇಳಿದ್ದಿಷ್ಟು

Public TV
2 Min Read

ಬೆಂಗಳೂರು: ಚುನಾವಣೆ ಗೆಲ್ಲಲು ಬಿಜೆಪಿ ಪ್ಲಾನ್ ಮಾಡುವುದು ಏನೂ ಇಲ್ಲ. ಬಿಜೆಪಿ ಕಾರ್ಯಕರ್ತರು ತಳಮಟ್ಟದಿಂದ ರಾಷ್ಟ್ರಮಟ್ಟದವರೆಗೂ ಬಲಿಷ್ಠರಾಗಿದ್ದಾರೆ. ನಾವೆಲ್ಲ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ ಅಷ್ಟೇ ಎಂದು ನಟ ಹಾಗೂ ಬಿಜೆಪಿ ರಾಜ್ಯಸಭಾ ಅಭ್ಯರ್ಥಿ ಜಗ್ಗೇಶ್ ಹೇಳಿದ್ದಾರೆ.

ಬಿಜೆಪಿಯಿಂದ ರಾಜ್ಯಸಭಾ ಅಭ್ಯರ್ಥಿಯಾಗಿ ಆಯ್ಕೆಯಾದ ಬೆನ್ನಲ್ಲೇ ಪಬ್ಲಿಕ್ ಟಿವಿಯೊಂದಿಗೆ ಅವರು ಮಾತನಾಡಿದ ಅವರು, ನಾಳೆ ನಾಮಪತ್ರ ಸಲ್ಲಿಸ್ತೇನೆ ಎಂದು ಹೇಳಿದರು. ಇದನ್ನೂ ಓದಿ: ರಾಜಭವನದಲ್ಲಿ ಡಾ.ಅಂಬೇಡ್ಕರ್ ಪುತ್ಥಳಿ ಅನಾವರಣ – ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ

ಈ ವೇಳೆ ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಕ ಸಮುದಾಯವನ್ನು ಸೆಳೆಯುವ ಸಲುವಾಗಿ ನಿಮಗೆ ಟಿಕೆಟ್ ನೀಡಲಾಗಿದೆ ಎನ್ನುವ ಪ್ರಶ್ನೆಗೆ ಉತ್ತರಿಸಿ, ಬಿಜೆಪಿ ಪ್ಲಾನ್ ಮಾಡುವುದೇನೂ ಇಲ್ಲ. ಕಾರ್ಯಕರ್ತರು ತಳಮಟ್ಟದಿಂದ ರಾಷ್ಟ್ರಮಟ್ಟದ ವರೆಗೂ ಬಲಿಷ್ಠವಾಗಿದ್ದಾರೆ. ಇದೊಂದು ಬ್ಯೂಟಿಫುಲ್ ಪೋಸ್ಟ್‌ಮ್ಯಾನ್‌ ಹುದ್ದೆ ನಾವೆಲ್ಲ ಪೋಸ್ಟ್ ಮ್ಯಾನ್ ಕೆಲಸ ಮಾಡ್ತೇವೆ. ಏನೋ ಮಾಡ್ತೀವಿ ಅನ್ನೋ ಕಲ್ಪನೆಯಲ್ಲಿ ನಾನಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ : ಪ್ರಭುದೇವ್ ನಟನೆಯ ಪ್ಯಾನ್ ಇಂಡಿಯಾ ಸಿನಿಮಾಗೆ ಸಂದೇಶ್ ನಾಗರಾಜ್ ನಿರ್ಮಾಪಕ

ರಾಜ್ಯಸಭೆಗೆ ಟಿಕೆಟ್ ಸಿಗುತ್ತೆ ಅನ್ನೋ ನಿರೀಕ್ಷೆ ಇರ್ಲಿಲ್ಲ. ಆದರೂ ಗುರುತಿಸಿರುವುದು ತುಂಬಾ ಸಂತೋಷವಾಗಿದೆ. ತಾಳ್ಮೆ, ನಂಬಿಕೆ, ಸೇವಾ ಮನೋಭಾವ ಇದ್ರೆ ಎಲ್ಲವೂ ಸಾಧ್ಯ. ಈ ಗುಣಗಳಿದ್ರೆ ಬಿಜೆಪಿಯಲ್ಲಿ ಕಾರ್ಯಕರ್ತರು ಬಹಳ ಎತ್ತರಕ್ಕೆ ಹೋಗಬಹುದು. ಅದನ್ನು ಬಿಟ್ಟು ನನಗೆ ಅದು ಸಿಕ್ಕಿಲ್ಲ ಇದು ಸಿಕ್ಕಿಲ್ಲ, ಸಿಗದಿದ್ರೆ ಮುನಿಸ್ಕೊಳ್ತೀನಿ, ಬಿಟ್ಟು ಹೋಗ್ತೀನಿ ಅನ್ನೋದಕ್ಕೆ ಹೋಗಬಾರದು ಎಂದು ಸಲಹೆ ನೀಡಿದರು.

JAGGESH

ಹಳೇ ಮೈಸೂರು ಭಾಗ ಅನ್ನೋದಕ್ಕಿಂತ ಇಡೀ ಕರ್ನಾಟಕದಲ್ಲಿ ನನ್ನನ್ನು ಮನೆಮಗನಂತೆ ಪ್ರೀತಿಸ್ತಾರೆ. ರಾಜ್ಯಸಭೆಗೆ ಹೋದ ಮೇಲೆ ಅನೇಕ ಗುರಿಗಳಿವೆ. ನಾನು ಶಾಸಕ, ಎಮ್ಮೆಲ್ಸಿ ಆದಾಗಲೂ ಬಹಳ ಪ್ರಶ್ನೆಗಳನ್ನು ಕೇಳಿದ್ದೆ. ರಾಜ್ಯಸಭೆಯಲ್ಲೂ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡ್ತೇನೆ ಎಂದು ಹೇಳಿದರು.

ಇನ್ನೂ ಭಾಷೆಯ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ನವರಸ ನಾಯಕ ಜಗ್ಗೇಶ್, ನನಗೆ ಭಾಷೆ ಸಮಸ್ಯೆ ಅಲ್ಲ. ನಾನು ಹಿಂದಿ, ಇಂಗ್ಲಿಷ್, ಕನ್ನಡ ತಮಿಳ್ ಈ ಎಲ್ಲಾ ಭಾಷೆ ಮಾತನಾಡುತ್ತೇನೆ. ಸ್ವಲ್ಪ ಓದಿ ತಿಳಿದುಕೊಂಡಿದ್ದೇನೆ. ಹೆಚ್ಚಿನ ವಿಚಾರ ತಿಳಿದುಕೊಳ್ಳಲು ಹಿರಿಯರ ಸಲಹೆ ಪಡೆಯುತ್ತೇನೆ. ಕಾಯಾ ವಾಚಾ ಮನಸಾ ಕನ್ನಡದ ಡಿಂಡಿಮವನ್ನು ಖಂಡಿತವಾಗಿ ರಾಷ್ಟ್ರ ಮಟ್ಟದಲ್ಲಿ ಮುಟ್ಟಿಸುವ ಕೆಲಸ ಮಾಡುತ್ತೇನೆ. ಒಳ್ಳೆಯ ಕೆಲಸಕ್ಕೆ ಹೋಗುತ್ತಿದ್ದೇನೆ, ಎಲ್ರೂ ಹಾರೈಸಿ ಎಂದು ಮನವಿ ಮಾಡಿದರು.

ಟಿಕೆಟ್‌ಗಾಗಿ ನಾನು ಯಾವುದೇ ಪ್ರಯತ್ನ ಮಾಡಿಲ್ಲ. ಯಾವ ಹುದ್ದೆಯನ್ನೂ ಕೇಳಿಲ್ಲ. ಕಳೆದ ಬಾರಿ ಕಡೆಗಳಿಗೆಯಲ್ಲಿ ಯಶವಂತಪುರದಲ್ಲಿ ನಿಲ್ಲಲು ಹೇಳಿದ್ರು. ಆಗ ನಾನು ಬೇಡ ಅಂದಿದ್ದೆ. ಏಕೆಂದರೆ ನಾವು ವಿಧಾನಸಭೆಗೆ ಸ್ಪರ್ಧೆ ಮಾಡಬೇಕಾದರೆ ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಿರಬೇಕು. ಆವತ್ತು ನನ್ನ ಮೇಲೆ ವಿಶ್ವಾಸ ಇತ್ತು. 12 ಸಾವಿರ ಇದ್ದ ಮತಗಳನ್ನು 61ಸಾವಿರ ಮತಕ್ಕೆ ತಂದಿದ್ದೆ. ನನಗೂ ಆಶ್ಚರ್ಯವಾಗಿತ್ತು. ಇದರಿಂದ ನನಗೆ ಮುಂದಿನ ದಿನಗಳಲ್ಲಿ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಹೀಗಾಗಿ ನನ್ನ ವೃತ್ತಿಯಲ್ಲಿ ಮುಂದುವರೆಯುತ್ತಿದ್ದೆ ಎಂದು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *