ಮೇ 15ಕ್ಕೆ ದೆಹಲಿಗೆ ಹೋಗ್ತಿನಿ, 17ಕ್ಕೆ ಪ್ರಮಾಣ ವಚನ ಸ್ವೀಕರಿಸ್ತಿನಿ: ಬಿ.ಎಸ್ ವೈ

Public TV
1 Min Read

ಬೆಂಗಳೂರು: ಬಿಜೆಪಿ 125-130 ಸ್ಥಾನ ಪಡೆಯೋದು ಖಚಿತ. ನಾವೇ ಈ ಬಾರಿ ಕರ್ನಾಟಕದಲ್ಲಿ ಸರ್ಕಾರ ರಚಿಸೋದು. ಈ ಎರಡು ದಿನ ಕಾರ್ಯಕರ್ತರನ್ನು ಭೇಟಿ ಮಾಡಿ ವರದಿ ಪಡೆದುಕೊಂಡು ಮೇ 15 ರಂದು ದೆಹಲಿಗೆ ಹೋಗಿ 17ರಂದು ಪ್ರಮಾಣ ವಚನಕ್ಕೆ ದಿನಾಂಕ ಫಿಕ್ಸ್ ಮಾಡಿಕೊಂಡು ಬರ್ತೀನಿ ಅಂತಾ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಮತದಾನ ಮಾಡಿದ ರಾಜ್ಯದ ಜನತೆಗೆ ವಿನಯ ಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ. ರಾಜ್ಯದ ಜನತೆ ಈ ಬಾರಿ ಪರಿವರ್ತನೆಗಾಗಿ ಮತ ಚಲಾಯಿಸಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ನಮಗೆ ಪೂರಕ ಪ್ರತಿಕ್ರಿಯೆ ಲಭ್ಯವಾಗಿದೆ. ಸಿದ್ದರಾಮಯ್ಯ ಸರ್ಕಾರದ ವೈಫಲ್ಯಗಳನ್ನು ಜನ ಕ್ಷಮಿಸೊಲ್ಲ. ಹೀಗಾಗಿ ಕಾಂಗ್ರೆಸ್ 70 ಸೀಟ್‍ಗಿಂತ ಹೆಚ್ಚು ಗೆಲ್ಲೊಲ್ಲ ಅಂದ್ರು.

ಪ್ರಾದೇಶಿಕ ಪಕ್ಷ ಜೆಡಿಎಸ್‍ಗೆ 20-25 ಸೀಟ್ ಬರಬಹುದು. ನಮಗೆ 130 ಕ್ಷೇತ್ರಗಳಲ್ಲಿ ಗೆಲುವು ಖಂಡಿತ, ಬೇಕಾದ್ರೆ ಯಾವ ಯಾವ ಕ್ಷೇತ್ರಗಳು ಅಂತಾ ಬೇಕಾದ್ರೂ ಹೇಳಬಲ್ಲೆ ಎಂದು ಆಗಾಧ ಆತ್ಮ ವಿಶ್ವಾಸ ವ್ಯಕ್ತಪಡಿಸಿದ್ರು.

ನಮ್ಮ ಪ್ರಣಾಳಿಕೆ ಶೇ.3 ರಷ್ಟು ಮತಗಳನ್ನು ಹೆಚ್ಚಳ ಮಾಡಿದ್ದು, ಎಕ್ಸಿಟ್ ಪೋಲ್‍ಗಳ ಬಗ್ಗೆ ಮಾತನಾಡಲ್ಲ. ಈ ಹಿಂದೆ ಉತ್ತರ ಪ್ರದೇಶದ ರಿಸಲ್ಟ್ ಏನಾಯ್ತು. ಇದೇ ರೀತಿ ಕರ್ನಾಟಕದಲ್ಲಿ ಫಲಿತಾಂಶ ಬರಲಿದೆ. ಇನ್ನು ಎರಡು ದಿನ ಕಾದು ನೋಡಿ, ನೂರಕ್ಕೆ ನೂರು ಬಿಜೆಪಿ ಸರ್ಕಾರ ರಚನೆ ಮಾಡಲಿದೆ. ಸಿದ್ದರಾಮಯ್ಯ ಮೆಂಟಲಿ ಅಪ್ಸೆಟ್ ಆಗಿದ್ದಾರೆ. ಅದಕ್ಕೆ ಅವರು ಹಾಗೇ ಮಾತಾಡ್ತಾರೆ ಎಂದು ವಿಕ್ಟರಿ ಸಿಂಬಲ್ ತೋರಿಸಿದ್ರು.

Share This Article
Leave a Comment

Leave a Reply

Your email address will not be published. Required fields are marked *