ಸಂಧಾನಕ್ಕೆ ಬರಬೇಡಿ, ಏನೇ ಆದ್ರೂ ನಾವು ಸುಮಲತಾರನ್ನ ಬೆಂಬಲಿಸುತ್ತೇವೆ: ಕೈ ನಾಯಕ ಸಚ್ಚಿದಾನಂದ

Public TV
2 Min Read

– ನಾವೇ ಉಳಿಸಬೇಕು, ನಾವೇ ಬೆಳೆಸಬೇಕು
– ಪಕ್ಷಕ್ಕೆ ಕಾರ್ಯಕರ್ತರ ಬಗ್ಗೆ ಗೌರವ ಇಲ್ಲ

ಮಂಡ್ಯ: ಲೋಕಸಭೆ ಚುನಾವಣೆಯಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರೆಲ್ಲರೂ ಸುಮಲತಾರನ್ನ ಬೆಂಬಲಿಸುತ್ತೇವೆ. ಸಂಧಾನಕ್ಕೆ ಪಕ್ಷದ ವರಿಷ್ಠರು ಯಾರೂ ಜಿಲ್ಲೆಗೆ ಆಗಮಿಸುವುದು ಬೇಡ. ನಿಮ್ಮ ಪ್ರಯತ್ನ ಯಶಸ್ವಿಯಾಗುವುದಿಲ್ಲ ಎಂದು ಇಂಡುವಾಳು ಗ್ರಾಮದಲ್ಲಿ ಕೆಪಿಸಿಸಿ ಸದಸ್ಯ ಸಚ್ಚಿದಾನಂದ ಸುಮಲತಾ ಪರ ಬ್ಯಾಟಿಂಗ್ ಮಾಡಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಏನೇ ಆದರೂ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸುಮಲತಾ ಅವರಿಗೆ ಬೆಂಬಲ ನೀಡುತ್ತೇವೆ. ನಿಮ್ಮ ಬಗ್ಗೆ ನಮಗೆ ಅಪಾರವಾದ ಪ್ರೀತಿ ವಿಶ್ವಾಸವಿದೆ, ದಯವಿಟ್ಟು ಸಂಧಾನ ಮಾಡಲು ಮಂಡ್ಯಕ್ಕೆ ಬರಬೇಡಿ. ನಾವು ನಮ್ಮ ನಿರ್ಧಾರ ಬದಲಾಯಿಸುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.

ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನ ನಾವೇ ಕಟ್ಟಬೇಕು, ನಾವೇ ಉಳಿಸಬೇಕು, ನಾವೇ ಬೆಳೆಸಬೇಕು. ಏನಾದರೂ ಆದ್ರೆ ನಾವೇ ಅನುಭವಿಸಬೇಕು. ದಯಮಾಡಿ ಯಾವುದೇ ರಾಜ್ಯ ನಾಯಕರು ಸಂಧಾನಕ್ಕೆ ಬರಬೇಡಿ. ಬಂದರೂ ಅದರಲ್ಲಿ ನೀವು ಯಶಸ್ವಿಯಾಗಲ್ಲ. ನಾನು ದೊಡ್ಡವನಲ್ಲ, ನನ್ನ ಯಾರೂ ಸಂಧಾನಕ್ಕೆ ಕರೆದು ಮಾತನಾಡ್ತಾರೆ ಎಂದುಕೊಂಡಿಲ್ಲ. ಆದ್ರೆ ದೊಡ್ಡ ನಾಯಕರನ್ನ ಕರೆದು ಮಾತನಾಡಿದರೂ ಅದು ಅಲ್ಲಿನ ಮಾತಿಗಷ್ಟೇ ಸೀಮಿತ ಎಂದಿದ್ದಾರೆ.

ಯಾವ ಮಂಡ್ಯ ನಾಯಕರು ಇಲ್ಲಿ ಬಂದು ಹೇಳುವುದಿಲ್ಲ. ಯಾಕೆಂದರೆ ನಾಯಕರಿಗೆ ಕಾರ್ಯಕರ್ತರೆ ಮುಖ್ಯ. ಕಾರ್ಯಕರ್ತರೆಲ್ಲರೂ ಈಗ ಸುಮಲತಾ ಪರ ಇರಬೇಕೆಂದು ನಿರ್ಧರಿಸಿದ ಮೇಲೆ ನಾನಾಗಲಿ ನನ್ನ ಮೇಲ್ಮಟ್ಟದವರಾಗಿ ಏನು ಮಾಡಲು ಸಾಧ್ಯವಿಲ್ಲ. ದಯವಿಟ್ಟು ವರಿಷ್ಠರು ಸಂಧಾನಕ್ಕೆ ಬಾರದೇ ಅವರ ಘನತೆಯನ್ನ ಹೆಚ್ಚಿಸಿಕೊಳ್ಳಲಿ. ನಾವು ಸುಮಲತಾ ಪರವಾಗಿ ಇರುತ್ತೇವೆ ಎಂದರು.

ನಾವು ಪಕ್ಷದ ಬಗೆಗೆ ಗೌರವ ಇಟ್ಟುಕೊಂಡಿರೋರು ಆದ್ರೆ, ಪಕ್ಷದವರಿಗೆ ಕಾರ್ಯಕರ್ತರ ಬಗ್ಗೆ ಗೌರವ ಇಲ್ಲ. ಕಾರ್ಯಕರ್ತರ ಭಾವನೆಗಳನ್ನ ಅರ್ಥ ಮಾಡಿಕೊಳ್ಳದವರೇ ಇರೋದ್ರಿಂದ ನಾವು ಸುಮಲತಾ ಪರ ಇರುತ್ತೇವೆ. ನಾನೊಬ್ಬನೇ ಅಲ್ಲ ಮುಂದೆ ಬಾರದೇ ಇರುವ ಹಲವು ಜನರು ಸುಮಲತಾರನ್ನು ಬೆಂಬಲಿಸಿದ್ದಾರೆ ಎಂದು ತಿಳಿಸಿದರು.

ನಾವು ಜೆಡಿಎಸ್ ಪಕ್ಷವನ್ನು ಬೆಂಬಲಿಸುವ ಸಾಧ್ಯತೇ ಇಲ್ಲ. ಜಿಲ್ಲೆಯಲ್ಲಿ ಪಕ್ಷದ ಅಳಿವು ಉಳಿವಿಗಾಗಿ ಅಂಬರೀಶ್ ಸಹ ದುಡಿದಿದ್ದಾರೆ. ಅವರಿಲ್ಲದ ವೇಳೆಯಲ್ಲಿ ನಾವು ಅವರ ಕುಟುಂಬದ ಜೊತೆ ನಿಲ್ಲಬೇಕು. ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧರಾಗಿರುವ ಸುಮಲತಾ ಅವರ ಗೆಲುವಿಗೆ ಶ್ರಮ ಹಾಕಬೇಕಿದೆ ಎಂದು ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *