ವಯನಾಡು ಸಂತ್ರಸ್ತರಿಗೆ ಕರ್ನಾಟಕದಿಂದ 100 ಮನೆ ನಿರ್ಮಾಣ: ಸಿದ್ದರಾಮಯ್ಯ ಘೋಷಣೆ

Public TV
1 Min Read

ಬೆಂಗಳೂರು: ವಯನಾಡು ಸಂತ್ರಸ್ತರಿಗೆ (Wayanad Landslides) 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ (Karnataka Government) ಘೋಷಿಸಿದೆ.

ಸಿಎಂ ಸಿದ್ದರಾಮಯ್ಯನವರು (CM Siddaramaiah) ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ ಈ ಮಹತ್ವದ ನಿರ್ಧಾರ ತಿಳಿಸಿದ್ದಾರೆ. ಇದನ್ನೂ ಓದಿ: Wayanad landslides | ಪ್ರತಿ ವರ್ಷ ಮೆಪ್ಪಾಡಿಯಲ್ಲಿ ತಲೆ ಎತ್ತುತ್ತಿವೆ 380 ಹೊಸ ಕಟ್ಟಡಗಳು

ಪೋಸ್ಟ್‌ನಲ್ಲಿ ಏನಿದೆ?
ವಯನಾಡಿನಲ್ಲಿ ಸಂಭವಿಸಿದ ದುರಂತ ಭೂಕುಸಿತದ ಬೆಳಕಿನಲ್ಲಿ, ಕರ್ನಾಟಕವು ಕೇರಳದೊಂದಿಗೆ (Kerala) ಒಗ್ಗಟ್ಟಿನಿಂದ ನಿಂತಿದೆ. ನಾನು ಕೇರಳ ಸಿಎಂ ಪಿಣರಾಯಿ ವಿಜಯನ್‌ ಜೊತೆ ಮಾತನಾಡಿ ಬೆಂಬಲ ವ್ಯಕ್ತಪಡಿಸಿದ್ದೇನೆ. ಕರ್ನಾಟಕವು ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿ ಕೊಡಲಿದೆ. ಒಟ್ಟಾಗಿ ನಾವು ಪುನರ್‌ ನಿರ್ಮಾಣ ಮಾಡುತ್ತೇವೆ ಮತ್ತು ಭರವಸೆಯನ್ನು ಪುನಃಸ್ಥಾಪಿಸುತ್ತೇವೆ.

Share This Article