ಮತ್ತೆ ಚರ್ಚೆಗೆ ಗ್ರಾಸವಾಯ್ತು ಕಾರ್ತಿಕ್‌ ಆರ್ಯನ್‌, ಶ್ರೀಲೀಲಾ ಡೇಟಿಂಗ್ ವಿಚಾರ- ವಿಡಿಯೋ ವೈರಲ್

Public TV
1 Min Read

ವೇವ್ಸ್ ಸಮ್ಮೇಳನದಲ್ಲಿ (World Audio Visual and Entertainment Summit) ಕಾರ್ತಿಕ್ ಆರ್ಯನ್ (Karthik Aryna) ತಾಯಿಯೊಂದಿಗೆ ಶ್ರೀಲೀಲಾ ಕಾಣಿಸಿಕೊಂಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಕಾರ್ತಿಕ್ ಜೊತೆಗಿನ ನಟಿಯ ಡೇಟಿಂಗ್ ಸುದ್ದಿ ಮತ್ತೆ ಚರ್ಚೆಗೆ ಗ್ರಾಸವಾಗಿದೆ. ಇದನ್ನೂ ಓದಿ:ಕನ್ನಡಿಗರಲ್ಲಿ ಕ್ಷಮೆಯಾಚಿಸಿ: ಸೋನು ನಿಗಮ್ ವಿವಾದಾತ್ಮಕ ಹೇಳಿಕೆಗೆ ಕನ್ನಡ ನಿರ್ಮಾಪಕನ ಆಕ್ರೋಶ

 

View this post on Instagram

 

A post shared by Snehkumar Zala (@snehzala)

ನಿನ್ನೆ (ಮೇ.1) ಶ್ರೀಲೀಲಾ (Sreeleela) ವೇವ್ಸ್ ಸಮ್ಮೇಳನದಲ್ಲಿ ಭಾಗಿಯಾಗಿದ್ದರು. ಈ ವೇಳೆ, ಕಾರ್ತಿಕ್ ಆರ್ಯನ್ ತಾಯಿಯೊಂದಿಗೆ (Mother) ನಟಿ ಮಾತನಾಡುತ್ತಿರುವ ವಿಡಿಯೋ ನೆಟ್ಟಿಗರ ಗಮನ ಸೆಳೆದಿದೆ. ಈ ಹಿಂದೆ ನಟನ ತಾಯಿ, ‘ನಮ್ಮನೆಗೆ ಡಾಕ್ಟರ್ ಸೊಸೆ ಬೇಕು’ ಎಂದಿದ್ದ ಹೇಳಿಕೆ ಮತ್ತೆ ಮುನ್ನೆಲೆಗೆ ಬಂದಿದೆ. ಇದನ್ನೂ ಓದಿ: ಕನ್ನಡ.. ಕನ್ನಡ ಇದಕ್ಕೇನೇ ಭಯೋತ್ಪಾದಕ ದಾಳಿ ನಡೆದಿದ್ದು – ವಿವಾದ ಮೈಮೇಲೆಳೆದುಕೊಂಡ ಸೋನು ನಿಗಮ್

ಇತ್ತೀಚೆಗೆ ಅವಾರ್ಡ್ ಫಂಕ್ಷನ್‌ವೊಂದರಲ್ಲಿ ಕಾರ್ತಿಕ್ ಆರ್ಯನ್ ತಾಯಿಗೆ ಯಾವ ಥರದ ಸೊಸೆ ಬೇಕು ಎಂದು ಕರಣ್ ಜೋಹರ್ ಕೇಳಿದರು. ಅದಕ್ಕೆ ನಟನ ತಾಯಿ, ಡಾಕ್ಟರ್ ಆಗಿರುವ ಸೊಸೆ ಬೇಕು ಎಂದಿದ್ದರು. ಎಲ್ಲರಿಗೂ ಗೊತ್ತಿರುವಂತೆ ಶ್ರೀಲೀಲಾ ಅವರು ಎಂಬಿಬಿಎಸ್ ಓದಿಕೊಂಡಿದ್ದಾರೆ. ಅಲ್ಲಿ ಕಾರ್ತಿಕ್ ತಾಯಿ ಡಾಕ್ಟರ್ ಸೊಸೆ ಬೇಕು ಎಂದ ಕೂಡಲೇ ಎಲ್ಲರ ಕಣ್ಣು ಶ್ರೀಲೀಲಾ ಮೇಲೆ ಬಿದ್ದಿತ್ತು.

ಅಂದಿನ ಆ ಹೇಳಿಕೆ ನಂತರ ಇದೀಗ ಕಾರ್ತಿಕ್ ಆರ್ಯನ್ ತಾಯಿ ಮತ್ತು ಶ್ರೀಲೀಲಾ ಒಟ್ಟಿಗೆ ಕಾಣಿಸಿಕೊಂಡಿರೋದು ಗಾಸಿಪ್ ಪ್ರಿಯರ ಬಾಯಿಗೆ ಆಹಾರವಾಗಿದೆ.

ಅಂದಹಾಗೆ, ಅನುರಾಗ್ ಬಸು ನಿರ್ದೇಶನದ ‘ಆಶಿಕಿ 3’ ಸಿನಿಮಾದಲ್ಲಿ ಕಾರ್ತಿಕ್ ಆರ್ಯನ್‌ಗೆ ಶ್ರೀಲೀಲಾ ನಾಯಕಿಯಾಗಿದ್ದಾರೆ. 2025ರ ದೀಪಾವಳಿಯಂದು ಈ ಸಿನಿಮಾ ರಿಲೀಸ್ ಆಗಲಿದೆ.

Share This Article