ಮಳೆಯಿಂದ ಭಾರತ ಮಂಟಪದಲ್ಲಿ ನಿಂತಿದ್ದ ನೀರನ್ನು ಕೂಡಲೇ ತೆರವುಗೊಳಿಸಲಾಗಿತ್ತು: PIB

Public TV
2 Min Read

ನವದೆಹಲಿ: ಜಿ20 ಶೃಂಗಸಭೆಯ (G20 Summit) ವೇದಿಕೆಯಾಗಿದ್ದ ಭಾರತ ಮಂಟಪ (Bharat Mandapam) ಹಾಗೂ ದೆಹಲಿಯ (Delhi) ಕೆಲವು ಪ್ರದೇಶಗಳು ಮಳೆಯಿಂದಾಗಿ ಜಲಾವೃತವಾಗಿತ್ತು. ನೀರು ನಿಂತಿದ್ದ ಪ್ರದೇಶಗಳನ್ನು ತೆರವುಗೊಳಿಸಲು ರಾತ್ರಿಯಿಡೀ ಸಿಬ್ಬಂದಿ ಶ್ರಮಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ.

ಜಿ20 ಶೃಂಗಸಭೆಯ ಸ್ಥಳದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಆಯೋಜಿಸಿದ್ದ ಔತಣಕೂಟದ ವೇಳೆ ಮಳೆ ಪ್ರಾರಂಭವಾಗಿತ್ತು. ಸಭೆಯ ಮುಖ್ಯ ಸ್ಥಳ ಹಾಗೂ ಇತರ ಪ್ರದೇಶಗಳಲ್ಲಿ ನಿಂತಿದ್ದ ನೀರನ್ನು 15 ನಿಮಿಷಗಳಲ್ಲಿ ಹೊರಹಾಕಲು ರಾಜ್ ನಿವಾಸ್ ಅಧಿಕಾರಿಗಳು ಸಿಬ್ಬಂದಿಗೆ ಹೇಳಿದ್ದಾರೆ. ಮರುದಿನ ಬೆಳಗ್ಗೆ ಮತ್ತೆ ಐಟಿಪಿಒ ಕಾಂಪ್ಲೆಕ್ಸ್‌ನ ಮುಖ್ಯ ದ್ವಾರದ ಬಳಿ ನೀರು ಸಂಗ್ರಹವಾಗಿತ್ತು.

ಕಟ್ಟಡವನ್ನು ಸರ್ಕಾರಿ ಸ್ವಾಮ್ಯದ ನಿರ್ಮಾಣ ಸಂಸ್ಥೆ ಕಟ್ಟಿದ್ದು, ರಾತ್ರಿಯ ಮಳೆಯಿಂದಾಗಿ ಜಲಾವೃತವಾಗಿದೆ. ಬೆಳಗ್ಗೆ 6 ಗಂಟೆ ವೇಳೆಗೆ ಎಲ್ಲಾ ನೀರು ಬರಿದಾಗಿದೆ. ಒಳಚರಂಡಿಗೆ ಯಾವುದೇ ಅಡೆತಡೆ ಅಥವಾ ಯಾವುದೇ ಸಮಸ್ಯೆಗಳಾಗಿಲ್ಲ ಎಂದು ರಾಷ್ಟ್ರೀಯ ಕಟ್ಟಡ ನಿರ್ಮಾಣ ನಿಗಮದ (NBCC ಭಾರತ) ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: Bengaluru Bandh – ಇಂದು ರಾಜ್ಯ ಸರ್ಕಾರದ ವಿರುದ್ಧ ಖಾಸಗಿ ಸಮರ

ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಕಿಡಿ:
ಭಾರತ ಮಂಟಪದೊಳಗೆ ನೀರು ತುಂಬಿದ್ದ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದ ವಿರೋಧ ಪಕ್ಷಗಳು ಸರ್ಕಾರದ ವಿರುದ್ಧ ಕಿಡಿ ಕಾರಿವೆ. ಇದು ಮೋದಿ ಸರ್ಕಾರದ ಟೊಳ್ಳು ಅಭಿವೃದ್ಧಿಯನ್ನು ಬಹಿರಂಪಡಿಸಿದೆ ಎಂದು ಟೀಕಿಸಿವೆ.

ಆದರೆ ಈ ಬಗ್ಗೆ ಎಕ್ಸ್‌ನಲ್ಲಿ ಬರೆದಿರುವ ಪಿಐಬಿ ಫ್ಯಾಕ್ಟ್ ಚೆಕ್, ಈ ಮಾಹಿತಿ ತಪ್ಪಾಗಿದ್ದು, ಗೊಂದಲಕ್ಕೀಡುಮಾಡುತ್ತಿದೆ ಎಂದು ತಿಳಿಸಿದೆ. ಮಳೆಯಿಂದಾಗಿ ಭಾರತ ಮಂಟಪದ ತೆರೆದ ಪ್ರದೇಶದಲ್ಲಿಷ್ಟೇ ಸಣ್ಣ ಪ್ರಮಾಣದಲ್ಲಿ ನೀರು ನಿಂತಿತ್ತು. ಅದನ್ನು ಪಂಪ್‌ಗಳ ಮೂಲಕ ತಕ್ಷಣವೇ ತೆರವುಗೊಳಿಸಲಾಗಿದೆ. ಪ್ರಸ್ತುತ ಪ್ರದೇಶದಲ್ಲಿ ನೀರು ನಿಲ್ಲದಂತೆ ಮಾಡಲಾಗಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಇಂಡಿಯಾ ಪಾಕ್ ಪಂದ್ಯಕ್ಕೆ ಮಳೆ ಕಾಟ – ಅಲ್ಲಾ ನಮ್ಮನ್ನು ಕಾಪಾಡಿದ ಎಂದ ಅಖ್ತರ್

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್