ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಲುಕಿ ಬೈಕ್‍ಗೆ ಡಿಕ್ಕಿ ಹೊಡೆದ ಕಾರು!

Public TV
1 Min Read

ಮಂಗಳೂರು: ಕಾರಿನ ಬ್ರೇಕ್ ಕೆಳಗೆ ವಾಟರ್ ಬಾಟ್ಲಿ ಸಿಕ್ಕಿ ಬೈಕ್‍ಗೆ ಡಿಕ್ಕಿ ಹೊಡೆದ ಘಟನೆ ಮಂಗಳೂರಿನ ಉರ್ವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಉರ್ವಾದ ಚಿಲಿಂಬಿ- ಮಠದಕಣಿ ಕ್ರಾಸ್ ರೋಡ್ ನಲ್ಲಿ ಈ ಅವಘಡ ಸಂಭವಿಸಿದ್ದು, ಅಪಘಾತದ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕಾರನ್ನು ವಿವೇಕಾನಂದ ಶೆಣೈ (63) ಎಂಬವರು ಚಲಾಯಿಸುತ್ತಿದ್ದರು.

ಕಾರಿನ ಬ್ರೇಕ್ ಪೆಡಲ್ ಅಡಿ ನೀರಿನ ಬಾಟ್ಲಿ ಸಿಲುಕಿದ್ದರಿಂದ ಬ್ರೇಕ್ ಪೆಡಲ್ ವರ್ಕ್ ಆಗದೆ ನಿಯಂತ್ರಣ ಕಳೆದುಕೊಂಡು ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರನಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಇದನ್ನೂ ಓದಿ: ನಾಳೆಯಿಂದ ಥಿಯೇಟರ್‌ ಹೌಸ್‌ ಫುಲ್‌- ಸರ್ಕಾರದಿಂದ ಅನುಮತಿ

ಘಟನೆಯಲ್ಲಿ 2 ಕಾರು ಹಾಗೂ ದ್ವಿಚಕ್ರ ವಾಹನ ಜಖಂ ಆಗಿದ್ದು, ಸ್ಪಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ. ಕಾರು ಚಾಲಕ ವಿವೇಕಾನಂದ ಶೆಣೈ ವಿರುದ್ಧ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಸಂಬಂಧ ಮಂಗಳೂರಿನ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *