ಮುಂಬೈ: ಮಂಗಳವಾರ ಪಿಹು ಸಿನಿಮಾದ ಟ್ರೇಲರ್ ರಿಲೀಸ್ ಆಗಿದ್ದು, ಭಾವನಾತ್ಮಕ ವ್ಯಕ್ತಿಯ ಹೃದಯ ಬಡಿತವನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಪಿಹು ಹೊಂದಿದ್ದಾಳೆ. ಕೇವಲ 2 ನಿಮಿಷದ ಟ್ರೇಲರ್ ನೋಡುಗರನ್ನು ನಿಗೂಢ ಲೋಕಕ್ಕೆ ಕರೆದೊಯ್ಯುವಲ್ಲಿ ಯಶಸ್ವಿಯಾಗಿದೆ ಎಂಬ ಪ್ರತಿಕ್ರಿಯೆಗಳು ಲಭ್ಯವಾಗಿವೆ.
ಎರಡು ವರ್ಷದ ಕಂದ ಏಕಾಂಗಿಯಾಗಿ ಮನೆಯಲ್ಲಿದ್ದಾಗ ನಡೆಯುವ ಅನಾಹುತುಗಳು ಏನು? ಬಾಲಕಿಯ ಚಲನವಲನ ಹೇಗಿರುತ್ತೆ ಎಂಬಿತ್ಯಾದಿ ಅಂಶಗಳೆ ಕಥೆಯ ತಿರುಳು. ಈ ಮೊದಲು ಚಿತ್ರದ ಪೋಸ್ಟರ್ ಬಿಡುಗಡೆಯಾದಾಗ ಕುತೂಹಲವನ್ನು ಹುಟ್ಟುಹಾಕಿತ್ತು. ಟ್ರೇಲರ್ ಮತ್ತಷ್ಟು ನೋಡುಗರಿಗೆ ಭಯವನ್ನು ಮುಟ್ಟಿದ ಅನುಭವ ಸಿಗುವಂತೆ ಮಾಡಿದೆ.
ಪಿಹು ಪಾತ್ರದಲ್ಲಿ 2 ವರ್ಷದ ಮೈರಾ ವಿಶ್ವಕರ್ಮ ಎಂಬ ಮಗು ನಟಿಸಿದೆ. ಚಿತ್ರದ ಮೂಲ ಪಾತ್ರವೇ ಪಿಹು. ಒಂದೇ ಪಾತ್ರದ ಸುತ್ತ ತಿರುಗುವ ಸಿನಿಮಾ ಕ್ಷಣ ಕ್ಷಣಕ್ಕೂ ವಿಭಿನ್ನ ಅನುಭವವನ್ನು ನೀಡಲಿದೆ ಅಂತಾ ಚಿತ್ರತಂಡ ತಿಳಿಸಿದೆ.
ಸಿನಿಮಾದ ಕಥೆ ಬರೆದಾಗಲೇ ನಾನು ಸಾಹಸಕ್ಕೆ ಕೈ ಹಾಕಿದ್ದೇನೆ ಎಂದು ನನಗೆ ಅನ್ನಿಸಿತು. ಎರಡು ವರ್ಷದ ಕಂದಮ್ಮ ಹೇಗೆ ನಟಿಸುತ್ತೇ ಎಂಭ ಭಯ ನಮ್ಮಲ್ಲಿ ಹುಟ್ಟಿಕೊಂಡಿತ್ತು. ಕ್ಷಣ ಕ್ಷಣಕ್ಕೂ ಮನಸ್ಸು ಬದಲಾಯಿಸುವ ಪುಟ್ಟ ಕಂದಮ್ಮ ಅಭಿನಯಿಸುವಂತೆ ಮಾಡಿದ್ದೇ ನಮ್ಮ ಯಶಸ್ಸು. ಸಿಹಿ ಪದಾರ್ಥ ಸೇರಿದಂತೆ ಚಾಕಲೇಟ್ ತೋರಿಸಿದಾಗ ಮಾತ್ರ ಮಗು ನಟಿಸುತ್ತಿತ್ತು. ಕಂದಮ್ಮನ ಪ್ರತಿಯೊಂದು ದೃಶ್ಯಗಳು ಅಷ್ಟೇ ನ್ಯಾಚೂರಲ್ ಆಗಿ ಮೂಡಿ ಬಂದಿದೆ ಎಂದು ನಿರ್ದೇಶಕ ವಿನೋದ್ ಕಪ್ರಿ ತಿಳಿಸಿದ್ದಾರೆ.
ಚಿತ್ರ ಮುಂದಿನ ತಿಂಗಳು ನವೆಂಬರ್ 16ರಂದು ಬಿಡುಗಡೆ ಆಗಲಿದೆ. ಆರ್‍ಎಸ್‍ವಿಪಿ ಮತ್ತು ರಾಯ್ ಕಪೂರ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣದಲ್ಲಿ ಮೂಡಿಬಂದಿದೆ. 2017ರ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ನಲ್ಲಿ ಚಿತ್ರ ಪ್ರದರ್ಶನಗೊಂಡಿತ್ತು. ಇಷ್ಟು ಮಾತ್ರವಲ್ಲದೇ ಟ್ರಾನ್ಸ್-ಸಹಾರನ್ ಅಂತರಾಷ್ಟ್ರೀಯ ಫಿಲ್ಮ್ ಫೆಸ್ಟೀವಲ್ ನಲ್ಲಿ ಎರಡು ಪ್ರಶಸ್ತಿಗಳನ್ನು ಪಡೆದುಕೊಂಡಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv