ಪಾಂಡ್ಯ ಜೊತೆ ಡೇಟಿಂಗ್ ಇದ್ಯಾ: ಕೊನೆಗೂ ಸ್ಪಷ್ಟನೆ ನೀಡಿದ ಪರಿಣೀತಿ

Public TV
1 Min Read

ಮುಂಬೈ: ಕ್ರಿಕೆಟಿಗ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ನಡುವೆ ರೋಮ್ಯಾಂಟಿಕ್ ಟ್ವೀಟ್ ನಂತರ ಎದ್ದ ವದಂತಿಗಳಿಗೆ ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಈಗ ಫುಲ್ ಸ್ಟಾಪ್ ಹಾಕಿದ್ದಾರೆ.

ಸೆಪ್ಟೆಂಬರ್ 3 ರಂದು ಪರಿಣೀತಿ ಸೈಕಲ್ ನ ಫೋಟೋವನ್ನು ಹಾಕಿ ಅದ್ಭುತ ವ್ಯಕ್ತಿ ಜೊತೆ ಅತ್ಯುತ್ತಮ ಪ್ರವಾಸ. ಪ್ರೀತಿಯು ಗಾಳಿಯಲ್ಲಿ ತೇಲಾಡುತ್ತಿದೆ ಎಂದು ಟ್ವೀಟ್ ಮಾಡಿದ್ದರು.

ಅಭಿಮಾನಿಗಳು ಆ ಜೊತೆಗಾರ ಯಾರು ಎಂದು ಯೋಚಿಸುತ್ತಿದ್ದಾಗ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿ ಎಲ್ಲರನ್ನು ಆಶ್ಚರ್ಯ ಪಡುವಂತೆ ಮಾಡಿದ್ದರು. ನಾನು ಇದನ್ನು ಗೆಸ್ ಮಾಡುತ್ತೇನೆ. ಇದು ಬಾಲಿವುಡ್ ಮತ್ತು ಕ್ರಿಕೆಟ್ ನ ಲಿಂಕ್ ಇರಬಹುದಾ ಎಂದು ಹಾರ್ದಿಕ್ ಪಾಂಡ್ಯ ಟ್ವೀಟ್ ಮಾಡಿದ್ದರು.

ಈಗ ಪರಿಣೀತಿ ಟ್ವೀಟ್‍ಗೆ ಸಂಬಂಧಿಸಿದಂತೆ ಬಂದಿರುವ ಎಲ್ಲ ವದಂತಿಗಳಿಗೆ ತೆರೆ ಎಳೆದಿದ್ದಾರೆ. ಟ್ವಿಟ್ಟರ್ ನಲ್ಲಿ ಸೆಲ್ಫಿ ವಿಡಿಯೋ ಪ್ರಕಟಿಸಿ, ಅದ್ಭುತ ವ್ಯಕ್ತಿ ಎಂದರೆ ನನ್ನ ಹೊಸ ಮೊಬೈಲ್. ಈ ವಿಚಾರದ ಬಗ್ಗೆ ಯಾರೂ ಗೊಂದಲವಾಗಬೇಕಿಲ್ಲ ಎಂದು ತಿಳಿಸಿದ್ದಾರೆ.

https://twitter.com/MurlidharR777/status/904400937174745088

 

 

Share This Article
Leave a Comment

Leave a Reply

Your email address will not be published. Required fields are marked *