ಮದ್ವೆ ಬಳಿಕ ಕೇಪ್‍ಟೌನ್ ನಲ್ಲಿ ವಿರುಷ್ಕಾ ಮೋಜು ಮಸ್ತಿ- ವಿರಾಟ್, ಶಿಖರ್ ಧವನ್ ಡ್ಯಾನ್ಸ್ ಮೋಡಿ

Public TV
1 Min Read

ಮುಂಬೈ: ಮದುವೆಗೂ ಮುಂಚೆ ಕದ್ದು-ಮುಚ್ಚಿ ಖಾಸಗಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದ ವಿರಾಟ್ ಮತ್ತು ಅನುಷ್ಕಾ ಶರ್ಮಾ, ಮದುವೆ ಬಳಿಕ ಸದ್ಯ ಕೇಪ್‍ಟೌನ್ ನಲ್ಲಿ ಸಖತ್ ಜಾಲಿ ಮೂಡ್ ನಲ್ಲಿದ್ದಾರೆ.

ಇಟಲಿಯಲ್ಲಿ ಆಪ್ತ ಬಂಧುಗಳ ಸಮ್ಮುಖದಲ್ಲಿ ಮದುವೆಯಾದ ವಿರುಷ್ಕಾ, ನಂತರ ದೆಹಲಿ ಮತ್ತು ಮುಂಬೈನಲ್ಲಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಆರತಕ್ಷತೆ ಬಳಿಕ ವಿರಾಟ್ ದಕ್ಷಿಣ ಆಫ್ರಿಕಾ ಟೆಸ್ಟ್‍ನಲ್ಲಿ ಭಾಗಿಯಾಗಲು ಕೇಪ್‍ಟೌನ್ ಗೆ ತೆರಳಿದ್ದಾರೆ. ಅನುಷ್ಕಾ ಸಹ ಪತಿಯೊಂದಿಗೆ ಕೇಪ್‍ಟೌನ್ ನಗರಕ್ಕೆ ತೆರಳಿದ್ದಾರೆ. ಶಿಖರ್ ಧವನ್ ಮತ್ತು ಕುಟುಂಬ ಕೂಡ ಇವರಿಗೆ ಜೊತೆಯಾಗಿದ್ದಾರೆ.

ಪಂದ್ಯದ ಬಿಡುವಿನ ವೇಳೆಯಲ್ಲಿ ನವಜೋಡಿ ನಗರದಲ್ಲೆಲ್ಲಾ ಸುತ್ತಾಡುತ್ತಿದ್ದು, ಇವರ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡ್ತಿದೆ. ದಕ್ಷಿಣ ಆಫ್ರಿಕಾದಲ್ಲಿ ಹಾಲಿಡೇ ಎಂಜಾಯ್ ಮಾಡುತ್ತಿರುವ ವಿರಾಟ್ ಶಿಖರ್ ಧವನ್ ಜೊತೆಗೆ ಕೇಪ್ ಟೌನ್ ಸಿಟಿಯ ರಸ್ತೆಯೊಂದರಲ್ಲಿ ಎರಡು ಸ್ಟೆಪ್ಸ್ ಹಾಕಿ ಮನರಂಜನೆ ನೀಡಿದ್ದಾರೆ. ಇನ್ನೂ ಅನುಷ್ಕಾ ಚಿಕ್ಕಮಕ್ಕಳೊಂದಿಗೆ ನೀರಿನ ಗುಳ್ಳೆಗಳನ್ನು ಒಡೆಯುವ ವಿಡಿಯೋ ಕೂಡ ವೈರಲ್ ಆಗಿದೆ.

ಒಟ್ಟಿನಲ್ಲಿ ಕೆಲಸದ ಒತ್ತಡದ ನಡುವೆಯೂ ವಿರಾಟ್ ಮತ್ತು ಅನುಷ್ಕಾ ಮೋಜು ಮಸ್ತಿಯಲ್ಲಿ ತೊಡಗಿಕೊಂಡಿದ್ದಾರೆ.

https://www.instagram.com/p/BdcE2hlhBJQ/?taken-by=its_virat_lover

https://www.instagram.com/p/BdcyB9VFlyb/?taken-by=anushkasharma.club

https://www.instagram.com/p/Bdb6s7qFBqP/?taken-by=anushkasharma.club

https://www.instagram.com/p/BdaYHLchHXR/?taken-by=its_virat_lover

https://www.instagram.com/p/BdXEUVshhaL/?taken-by=its_virat_lover

https://www.instagram.com/p/BdZ4EbNhdHr/?taken-by=its_virat_lover

https://www.instagram.com/p/BdZS__3hFRq/?taken-by=its_virat_lover

https://www.instagram.com/p/BdZW-37hNxf/?taken-by=its_virat_lover

https://www.instagram.com/p/BdcyGIHhYpJ/?taken-by=its_virat_lover

https://www.instagram.com/p/BdiiZXgh9Au/?taken-by=its_virat_lover

Share This Article
Leave a Comment

Leave a Reply

Your email address will not be published. Required fields are marked *