42ನೇ ವಯಸ್ಸಿನಲ್ಲೂ ಎಷ್ಟೊಂದು ಉತ್ಸಾಹ – ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದ ಮಹಿ; ವೀಡಿಯೋ ವೈರಲ್‌

Public TV
2 Min Read

ಚೆನ್ನೈ: ಗುಜರಾತ್‌ ಟೈಟಾನ್ಸ್‌ (Gujarat Titans) ವಿರುದ್ಧದ ಪಂದ್ಯದಲ್ಲಿ ಲೆಜೆಂಡ್‌ ಎಂ.ಎಸ್‌ ಧೋನಿ (MS Dhoni) ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ವೊಂದು ಸೋಶಿಯಲ್‌ ಮೀಡಿಯಾದಲ್ಲಿ ಧೂಳೆಬ್ಬಿಸಿದೆ.

ಹೌದು. ಸಿಎಸ್‌ಕೆ (CSK) ತಂಡದ ಉಸಿರು ಯಾರು ಎಂದು ಕೇಳಿದರೆ ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ (Cricket Fans) ನಿಸ್ಸಂಶಯವಾಗಿ ಧೋನಿ ಹೆಸರನ್ನೇ ಹೇಳುತ್ತಾರೆ. 42 ವರ್ಷದ ಮಹಿ, 2008ರಲ್ಲಿ ಐಪಿಎಲ್‌ ಆರಂಭವಾದಾಗಿನಿಂದ ಚೆನ್ನೈ ತಂಡದ ನಾಯಕನಾಗಿದ್ದಾರೆ. 2013ರಿಂದ 2 ವರ್ಷಗಳ ಕಾಲ ತಂಡವನ್ನು ಅಮಾನತುಗೊಳಿಸಿದ್ದು, ಹೊರತುಪಡಿಸಿ ಉಳಿದ ಎಲ್ಲ ಆವೃತ್ತಿಗಳಲ್ಲೂ ಚೆನ್ನೈ ತಂಡದಿಂದ ಹೊರಬಂದಿಲ್ಲ.

ಎಲ್ಲಾ ಮಾದರಿಯ ಅಂತಾರಾಷ್ಟ್ರೀಯ ಕ್ರಿಕೆಟ್‌ಗೂ ನಿವೃತ್ತಿ ಘೋಷಣೆ ಮಾಡಿರುವ ಎಂ.ಎಸ್‌ ಧೋನಿ ಐಪಿಎಲ್‌ನಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾರೆ. ನಿವೃತ್ತಿಯ ಅಂಚಿನಲ್ಲಿದ್ದರು ಚಿರಯುವಕನಿಗೆ ಸರಿಸಮನಾಗಿ ನಿಂತು ಮೈದಾನದಲ್ಲಿ ಉತ್ಸಾಹದಿಂದ ಪಂದ್ಯವನ್ನಾಡುತ್ತಿದ್ದಾರೆ. ಗುಜರಾತ್‌ ವಿರುದ್ಧ ಮಹಿ ಹಿಡಿದ ಸ್ಟನ್ನಿಂಗ್‌ ಕ್ಯಾಚ್‌ (Stunning Catch) ಇದಕ್ಕೆ ತಾಜಾ ಉದಾಹರಣೆಯಾಗಿದೆ. ಇದನ್ನೂ ಓದಿ: ಐಪಿಎಲ್‌ ಅಂಗಳದಲ್ಲಿ ಕ್ಯಾಪ್ಟನ್ಸಿ ಕಿಚ್ಚು – ಕರ್ಮ ಸುಮ್ಮನೆ ಬಿಡಲ್ಲ; ಪಾಂಡ್ಯ ವಿರುದ್ಧ ಫ್ಯಾನ್ಸ್‌ ಫುಲ್‌ ಗರಂ

ಹೌದು.. 206 ರನ್‌ಗಳ ಬೃಹತ್‌ ಮೊತ್ತದ ಚೇಸಿಂಗ್‌ ಆರಂಭಿಸಿದ ಟೈಟಾನ್ಸ್‌ ಪಡೆ ಆರಂಭದಲ್ಲೇ ಅಗ್ರ ಕ್ರಮಾಂಕದ ಬ್ಯಾಟರ್‌ಗಳನ್ನ ಕಳೆದುಕೊಂಡು ಸಂಷ್ಟಕ್ಕೀಡಾಯಿತು. 8ನೇ ಓವರ್‌ನಲ್ಲಿ ಡೇರಿಲ್‌ ಮಿಚೆಲ್‌ (Daryl Mitchell) ಬೌಲಿಂಗ್‌ ವೇಳೆ ಕ್ರೀಸ್‌ನಲ್ಲಿದ್ದ ವಿಜಯ್‌ ಶಂಕರ್‌ ಸ್ಟ್ರೈಕ್‌ ಮಾಡಲು ಮುಂದಾದರು. ಮಿಚೆಲ್‌ ಎಸೆದ 3ನೇ ಎಸೆತವು ಬ್ಯಾಟ್‌ಗೆ ತಗುಲಿ ಸ್ಲಿಪ್‌ ವಿಭಾಗದಲ್ಲಿ ಬೌಂಡರಿ ತಲುಪುವ ಸಾಧ್ಯತೆ ಇತ್ತು. ಆದ್ರೆ ಮಹಿ ಚಿರತೆಯಂತೆ ನೆಗೆದು ಕ್ಯಾಚ್‌ ಹಿಡಿದರು. ಮಹಿ ಜಿಗಿದ ಅಂತರ ಸುಮಾರು 2.27 ಮೀಟರ್‌ ಉದ್ದವಿತ್ತು ಎಂದು ಹೇಳಲಾಗಿದೆ. ಇದು ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಯಿತು. ಅಲ್ಲದೇ 42ನೇ ವಯಸ್ಸಿನಲ್ಲೂ ಅದೆಂತಹ ಉತ್ಸಾಹ ಎಂದು ಅಚ್ಚರಿಪಟ್ಟರು.

ಮಹಿ ಕ್ಯಾಚ್‌ ಹಿಡಿದ ವೀಡಿಯೋ ತುಣುಕು ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಅಭಿಮಾನಿಗಳು ತಮ್ಮ ಖಾತೆಗಳಲ್ಲಿ ವೀಡಿಯೋ ಹಂಚಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಾರತದಲ್ಲೇ ಐಪಿಎಲ್‌ – ಪೂರ್ಣ ವೇಳಾಪಟ್ಟಿ ಪ್ರಕಟ, ಯಾವ ದಿನ ಯಾವ ಮ್ಯಾಚ್‌?

ಮಂಗಳವಾರ ಚೆನ್ನೈನ ಚೆಪಾಕ್‌ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ್ದ ಸಿಎಸ್‌ಕೆ 20 ಓವರ್‌ಗಳಲ್ಲಿ 206 ರನ್‌ ಬಾರಿಸಿತ್ತು. 207 ರನ್‌ಗಳ ಬೃಹತ್‌ ಮೊತ್ತದ ಗುರಿ ಬೆನ್ನತ್ತಿದ ಟೈಟಾನ್ಸ್‌ ನಿಗದಿತ ಓವರ್‌ಗಳಲ್ಲಿ 143 ರನ್‌ ಗಳಿಸಲಷ್ಟೇ ಸಾಧ್ಯವಾಗಿ ಸೋಲೊಪ್ಪಿಕೊಂಡಿತು. ಇದನ್ನೂ ಓದಿ: ಚೆನ್ನೈ ಸಿಡಿಸಿದ ರನ್‌ ಮಳೆಗೆ ಕೊಚ್ಚಿ ಹೋಯ್ತು ಟೈಟಾನ್ಸ್‌ – ಮೊದಲ ಸ್ಥಾನಕ್ಕೆ ಜಿಗಿದ ಸಿಎಸ್‌ಕೆ 

Share This Article