ಕೇರಳ ಸಿಎಂ ನಿವಾಸದಲ್ಲಿ ಚಾಕು ಹಿಡಿದು ಪ್ರತಿಭಟಿಸಿದ ವ್ಯಕ್ತಿ!

Public TV
1 Min Read

ನವದೆಹಲಿ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದೆಹಲಿ ನಿವಾಸದ ಮುಂದೆ ಚಾಕು ಹಿಡಿದು ಪ್ರತಿಭಟನೆ ಮಾಡುತ್ತಿದ್ದ ವ್ಯಕ್ತಿಯೊಬ್ಬರನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.

ಭಾರೀ ಭದ್ರತೆಯ ನಡುವೆಯೇ ಮುಖ್ಯಮಂತ್ರಿ ನಿವಾಸದ ಒಳಗೆ ಚಾಕು ಹಿಡಿದು ಬಂದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಹಿಡಿಯಲು ಮುಂದಾದರು. ಆದರೆ ವ್ಯಕ್ತಿ ನಾನು ಯಾರಿಗೆ ಏನು ಮಾಡುವುದಿಲ್ಲ. ನೀವು ಹಿಂದಕ್ಕೆ ಹೋಗಿ ಎಂದು ಅಧಿಕಾರಿಯೊಬ್ಬರಿಗೆ ತಾಕೀತು ಮಾಡುತ್ತಿದ್ದರು.

ನನಗೆ ಮುಖ್ಯಮಂತ್ರಿಯ ಬಳಿ ಯಾವುದೇ ಕೆಲಸವಿಲ್ಲ ಎನ್ನುತ್ತ, ಮನವಿ ಪತ್ರಗಳನ್ನು ತೋರಿಸಿ ನಾನು ಉನ್ನತ ಅಧಿಕಾರಿಗಳವರೆಗೆ ಹೋದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ. ವ್ಯಕ್ತಿಯ ವರ್ತನೆಯಿಂದ ವಿಚಲಿತರಾದ ಭದ್ರತಾ ಸಿಬ್ಬಂದಿ, ಆತನ ಜೊತೆಗೆ ಒಬ್ಬ ಅಧಿಕಾರಿ ಮಾತನಾಡುವಂತೆ ನಿಂತಿದ್ದಾರೆ. ಉಳಿದ ಕೆಲ ಭದ್ರತಾ ಸಿಬ್ಬಂದಿ ವ್ಯಕ್ತಿಯ ಹಿಂಬದಿಯಿಂದ ಗಟ್ಟಿಯಾಗಿ ಹಿಡಿದು, ಚಾಕು ಕಸಿದುಕೊಂಡಿದ್ದಾರೆ. ಬಳಿಕ ಆತನನ್ನು ವಶಕ್ಕೆ ಪಡೆದಿದ್ದಾರೆ. ಘಟನೆಯ ವೇಳೆ ಸಿಎಂ ಪಿಣರಾಯಿ ವಿಜಯನ್ ಅಲ್ಲಿಯೇ ಇದ್ದರೂ, ಸ್ಥಳಕ್ಕೆ ಬಂದು ವಿಚಾರಿಸಲಿಲ್ಲ ಎಂದು ವರದಿಯಾಗಿದೆ.

ಇಂತಹದ್ದೇ ಘಟನೆ ಇಂದು ಜಮ್ಮುದಲ್ಲಿ ನಡೆದಿದ್ದು, ಜಮ್ಮು ಕಾಶ್ಮಿರ್ ಮುಖ್ಯಮಂತ್ರಿ ಫಾರುಕ್ ಅಬ್ದುಲ್ ಅವರ ನಿವಾಸಕ್ಕೆ ವ್ಯಕ್ತಿಯೊಬ್ಬ ಕಾರು ನುಗ್ಗಿಸಿದ್ದರಿಂದ ಭದ್ರತಾ ಸಿಬ್ಬಂದಿ ಆತನ ಮೇಲೆ ಗುಂಡು ಹಾರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

Share This Article
Leave a Comment

Leave a Reply

Your email address will not be published. Required fields are marked *