ಕಬ್ಬಿಣದ ರಾಡ್‍ನಿಂದ ತಲೆಗೆ ಹೊಡೆದು ಯೋಗಶಿಕ್ಷಕನ ಬರ್ಬರ ಹತ್ಯೆ!

Public TV
1 Min Read

ಹೈದರಾಬಾದ್: ಯೋಗ ಶಿಕ್ಷಕರೊಬ್ಬರನ್ನು ದುಷ್ಕರ್ಮಿಗಳಿಬ್ಬರು ಮನಸೋ ಇಚ್ಚೆ ಕಬ್ಬಿಣದ ರಾಡ್ ನಿಂದ ಹೊಡೆದು ಕೊಲೆ ಮಾಡಿದ ಭಯಾನಕ ಘಟನೆ ನಡೆದಿದೆ.

ಯೋಗ ಮಾಸ್ಟರ್ ವೆಂಕಟರಮಣನ್ ಕೊಲೆಯಾದ ವ್ಯಕ್ತಿ. ಶುಕ್ರವಾರ ರಾತ್ರಿ ಸುಮಾರು 10.11ರ ವೇಳೆಗೆ ವಿಶಾಖಪಟ್ಟಣ ನಗರದ ವೂಡ ಕಾಲೋನಿಯಲ್ಲಿ ವೆಂಕಟರಮಣನ್ ಕೊಲೆ ನಡೆದಿದೆ. ವೆಂಕಟರಮಣನ್ ಕೊಲೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ವಿಡಿಯೋದಲ್ಲಿ ಏನಿದೆ?: ಮೊದಲಿಗೆ ವೆಂಕಟರಮಣನ್ ಒಬ್ಬ ವ್ಯಕ್ತಿಯ ಜೊತೆ ಕಾಣಿಸಿಕೊಳ್ಳುತ್ತಾರೆ. ಕ್ಷಣಾರ್ಧದಲ್ಲಿ ವೆಂಕಟರಮಣನ್ ಜೊತೆಗಿರುವ ವ್ಯಕ್ತಿ ಅವಸರವಾಗಿ ಮುಂದೆ ಹೋಗುತ್ತಾನೆ. ರಸ್ತೆಯಲ್ಲಿ ಒಂಟಿಯಾಗಿ ವೆಂಕಟರಮಣನ್ ನಿಂತಾಗ ಹಿಂದಿನಿಂದ ಬಂದ ದುಷ್ಕರ್ಮಿ ತನ್ನ ಕೈಯಲ್ಲಿರುವ ಕಬ್ಬಿಣದ ರಾಡ್ ನಿಂದ ತಲೆಯ ಭಾಗಕ್ಕೆ ಹಲ್ಲೆ ಮಾಡುತ್ತಾನೆ. ಹಲ್ಲೆಗೊಳಗಾದ ವೆಂಕಟರಮಣನ್ ಸ್ಥಳದಲ್ಲೇ ಕುಸಿದು ಬೀಳುತ್ತಾರೆ. ಕೂಡಲೇ ಈ ಮೊದಲು ವೆಂಕರಮಣನ್ ಜೊತೆಗಿದ್ದ ವ್ಯಕ್ತಿ ಬಂದು, ಅವನು ಕೂಡ ಹಲ್ಲೆ ಮಾಡುತ್ತಾನೆ. ಹೀಗೆ ಇಬ್ಬರು ದುಷ್ಕರ್ಮಿಗಳು ಮೂರು ಬಾರಿ ಹಲ್ಲೆ ನಡೆಸಿದ್ದಾರೆ.

ಈ ಸಂಬಂಧ ನಗರದ ವಿಮಾನ ನಿಲ್ದಾಣದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಆರೋಪಿಗಳ ಪತ್ತೆಗಾಗಿ ವಿಶೇಷ ಜಾಲ ಬೀಸಿದ್ದಾರೆ. 2017ರಲ್ಲಿ ವಿಶಾಖಪಟ್ಟಣ ನಗರವೊಂದರಲ್ಲಿಯೇ 40 ಕೊಲೆಗಳು ನಡೆದಿವೆ ಎಂದು ಅಂಕಿ ಅಂಶಗಳು ಹೇಳುತ್ತವೆ. 2018 ಜನವರಿ ಒಂದೇ ತಿಂಗಳಲ್ಲಿ 4 ಕೊಲೆಗಳು ನಡೆದಿವೆ.

https://www.youtube.com/watch?v=Mracbur3XWQ

Share This Article
Leave a Comment

Leave a Reply

Your email address will not be published. Required fields are marked *