ತ್ಯಾಜ್ಯವನ್ನು ಪೈಪ್‍ಲೈನ್‍ಗೆ ಸೇರಿಸಿದ್ರೆ ಹುಷಾರ್ – ನಿಮ್ಮ ವಿರುದ್ಧ ಬೀಳುತ್ತೆ ಕೇಸ್

Public TV
1 Min Read

ಬೆಂಗಳೂರು: ಇನ್ನು ಮುಂದೆ ತಮ್ಮ ತಮ್ಮ ಮನೆ ಮತ್ತು ಅಂಗಡಿ ಮುಂಗಟ್ಟುಗಳ ಕೊಳಚೆಯನ್ನ ಸ್ಯಾನಿಟರಿ ಲೈನ್‍ಗೆ ಬಿಡುವ ಮುನ್ನ ಯೋಚಿಸಿರಿ. ಯಾಕಂದರೆ ಜಲಮಂಡಳಿ ಈಗ ತನ್ನ ಕೆಲ ಗ್ರಾಹಕರಿಗೆ ಬಿಸಿ ಮುಟ್ಟಿಸಲು ಮುಂದಾಗಿದೆ.

ಹೌದು. ಬೆಂಗಳೂರು ಬೆಳೆಯುತ್ತಿದ್ದಂತೆ ಅದರ ಜೊತೆಗೆ ಕಸದ ಸಮಸ್ಯೆನೂ ಹೆಚ್ಚುತ್ತಿದೆ. ಈ ಬಗ್ಗೆ ಬಿಬಿಎಂಪಿ ಮಾತ್ರವಲ್ಲದೇ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‍ಎಸ್‍ಬಿ)ಗೂ ದೂರುಗಳ ಮಹಾಪೂರವೇ ಬರುತ್ತಿವೆ. ಪೈಪ್‍ಲೈನ್‍ಗೆ ಸ್ನಾನ ಮಾಡಿರುವ ನೀರು ಮತ್ತು ಟಾಯ್ಲೆಟ್ ನೀರನ್ನು ಹರಿಸಲಾಗುತ್ತದೆ. ಆದರೆ ಅದು ಬಿಟ್ಟು ನೀರಿನಲ್ಲಿ ಬೆರೆಯದ ಹಲವಾರು ಪದಾರ್ಥಗಳನ್ನ ಅಂದರೆ ಸ್ಯಾನಿಟರಿ ಪ್ಯಾಡ್, ಮೂಳೆಗಳನ್ನು ಹಾಕಿದರೆ ಇನ್ನು ಮುಂದೆ ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಠಾಣೆಯಲ್ಲಿ ಕೇಸ್ ದಾಖಲಿಸಲಾಗುತ್ತದೆ. ಸ್ಯಾನಿಟರಿ ಪೈಪ್‍ಲೈನ್‍ಗಳು ಬ್ಲಾಕ್ ಆಗುತ್ತಿರುವುದರಿಂದ ಜಲಮಂಡಳಿ ಈ ಕ್ರಮಕ್ಕೆ ಮುಂದಾಗಿದೆ.

ನಗರದ ಹಲವಾರು ಏರಿಯಾಗಳಲ್ಲಿ ಮಾಂಸದ ಅಂಗಡಿಯವರು ಸುತ್ತಮುತ್ತಲಿನ ಮೋರಿಗಳಿಗೆ, ತಮ್ಮ ಅಂಗಡಿಗಳಲ್ಲೇ ಇರುವ ಸ್ಯಾನಿಟರಿ ಲೈನ್‍ಗಳಿಗೆ ಮೂಳೆಗಳನ್ನ ಹಾಕುತ್ತಾರೆ. ಇದರಿಂದ ಏರಿಯಾದಲ್ಲಿನ ಸ್ಯಾನಿಟರಿ ಲೈನ್‍ಗಳು ಬ್ಲಾಕ್ ಆಗಿರುವುದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಜಲಮಂಡಳಿ ಬಿಎಂಟಿಎಫ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ ಎಂದು ಜಲಮಂಡಳಿಯ ಪ್ರಧಾನ ಅಭಿಯಂತರ ಡಾ. ಕೆಂಪರಾಮಯ್ಯ ತಿಳಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *