ಬಾಲ್ಯದಲ್ಲಿ ನನ್ನ ತಂದೆಯಿಂದಲೇ ಲೈಂಗಿಕ ದೌರ್ಜನ್ಯ ಅನುಭವಿಸಿದ್ದೆ – ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ

Public TV
2 Min Read

ನವದೆಹಲಿ: ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ (NCW) ಸದಸ್ಯೆ ಖುಷ್ಬೂ ಸುಂದರ್ ಅವರು ಬಾಲ್ಯದಲ್ಲಿ ತನ್ನ ತಂದೆಯಿಂದ ಲೈಂಗಿಕ ಕಿರುಕುಳಕ್ಕೊಳಗಾದ ಬಗ್ಗೆ ಹೇಳಿಕೊಂಡ ಬೆನ್ನಲ್ಲೇ, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಲಿವಾಲ್ (Swati Maliwal) ತಮಗಾದ ದೌರ್ಜನ್ಯದ ಬಗ್ಗೆ ಮಾತನಾಡಿದ್ದಾರೆ.

“ನಾನು ಚಿಕ್ಕ ಹುಡುಗಿಯಾಗಿದ್ದಾಗ ನನ್ನ ತಂದೆಯೇ ನನಗೆ ಮೇಲೆ ಲೈಂಗಿಕ ಕಿರುಕುಳ ನೀಡುತ್ತಿದ್ದರು. ಅವರು ನನ್ನನ್ನು ತುಂಬಾ ಥಳಿಸುತ್ತಿದ್ದರು. ಅವರು ಮನೆಗೆ ಬಂದಾಗ ನಾನು ಭಯಭೀತಳಾಗುತ್ತಿದ್ದೆ. ಆಗಾಗ್ಗೆ ಹಾಸಿಗೆಯ ಕೆಳಗೆ ಅಡಗಿಕೊಳ್ಳುತ್ತಿದ್ದೆ” ಎಂದು ತಮ್ಮ ಮೇಲಾದ ಲೈಂಗಿಕ ದೌರ್ಜನ್ಯದ ಕರಾಳ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಗಿಲ್‌ ಶತಕದ ಮಿಂಚು, ಬ್ಯಾಟಿಂಗ್‌ ಲಯಕ್ಕೆ ಮರಳಿದ ಕೊಹ್ಲಿ ಅರ್ಧ ಶತಕ – ಉತ್ತಮ ಸ್ಥಿತಿಯಲ್ಲಿ ಭಾರತ

ಮಹಿಳೆಯರಿಗೆ ತಮ್ಮ ಹಕ್ಕುಗಳನ್ನು ಪಡೆಯಲು ಹೇಗೆ ಸಹಾಯ ಮಾಡಬೇಕು ಎಂದು ಯೋಚಿಸುತ್ತೇನೆ. ಹೆಣ್ಣುಮಕ್ಕಳನ್ನು ಶೋಷಿಸುವಂತಹ ಪುರುಷರಿಗೆ ಪಾಠ ಕಲಿಸುವ ಕೆಲಸ ಮಾಡುತ್ತೇವೆ. ಆದರೆ ನನ್ನ ಬಾಲ್ಯದಲ್ಲಿ ನಾನು ಕೂಡ ಲೈಂಗಿಕ ದೌರ್ಜನ್ಯದ ಕರಾಳತೆಯನ್ನು ಎದುರಿಸಿದ್ದೆ ಎಂದು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ವಧುದಕ್ಷಿಣೆ ಕಡಿಮೆ ಆಯ್ತು ಅಂತಾ ಮದುವೆ ಬೇಡವೆಂದ ಯುವತಿ – ಪ್ರಕರಣ ದಾಖಲಿಸದ ಪೊಲೀಸರು

ತಂದೆ ನನ್ನ ತಲೆಯನ್ನು ಹಿಡಿದು ಗೋಡೆಗೆ ಹೊಡೆಸಿ ಹಲ್ಲೆ ಮಾಡಿದ್ದರು. ತಲೆಯಿಂದ ರಕ್ತಸ್ರಾವವಾಗಿ ನೋವು ಅನುಭವಿಸಿದ್ದೆ. ಯಾರೇ ಆಗಲಿ, ದೌರ್ಜನ್ಯಗಳನ್ನು ಅನುಭವಿಸಿದಾಗ ಮಾತ್ರ ಇತರರ ನೋವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಇಡೀ ವ್ಯವಸ್ಥೆಯನ್ನು ಅಲುಗಾಡಿಸುವ ಜಾಗೃತರಾಗುತ್ತಾರೆ ಎಂದು ನಾನು ನಂಬುದ್ದೇನೆ ಎಂದಿದ್ದಾರೆ.

ತಂದೆಯಿಂದ ನಾನು ಲೈಂಗಿಕ ಕಿರುಕುಳ ಅನುಭವಿಸಿದ್ದೆ ಎಂದು ಈಚೆಗಷ್ಟೇ ಖುಷ್ಬೂ ಸುಂದರ್‌ ಅವರು ತಮ್ಮ ಬಾಲ್ಯದ ಕೆಲವು ದುರಂತ ಸನ್ನಿವೇಶಗಳ ಬಗ್ಗೆ ಹೇಳಿಕೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *