ರೂಮಿನಲ್ಲಿ ಕೆಟ್ಟ ವಾಸನೆ ಬಂದ್ರೆ ಬಿಟ್ಟಿದ್ದು ಯಾರು ಅನ್ನೋದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ: ಸುದೀಪ್‌

2 Min Read

ಕೊಠಡಿಯಲ್ಲಿ ಕೆಟ್ಟ ವಾಸನೆ ಬಂದರೆ ಬಿಟ್ಟದ್ದು ಯಾರು ಎನ್ನುವುದು ಬಿಟ್ಟವನಿಗೆ ಮಾತ್ರ ಗೊತ್ತಿರುತ್ತೆ ಅಲ್ವಾ ಎಂದು ಸುದೀಪ್‌ (Sudeep) ಖಡಕ್‌ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ(Hubballi) ಮಾರ್ಕ್‌ (Mark) ಸಿನಿಮಾದ ಮಾತನಾಡುವಾಗ ಪೈರಸಿ ಹೆಸರನ್ನು ಉಲ್ಲೇಖ ಮಾಡದೇ ಹೇಳಿದ್ದರಿಂದ ಈ ವಿಚಾರ ದೊಡ್ಡದಾಗಿದೆ ಎಂಬ ಮಾಧ್ಯಮಗಳ ಪ್ರಶ್ನೆಗೆ ಸುದೀಪ್‌ ಯುದ್ಧಕ್ಕೆ ಸಿದ್ಧ, ನಾವು ನಮ್ಮ ಮಾತಿಗೆ ಬದ್ಧ ಹೇಳಿಕೆಯನ್ನು ಸಮರ್ಥಿಸಿ ಮತ್ತಷ್ಟು ವಿಚಾರಗಳನ್ನು ತಿಳಿಸಿದ್ದಾರೆ.

ನಾನು ಉದ್ದೇಶಪೂರ್ವಕವಾಗಿಯೇ ಪೈರಸಿ ಪದವನ್ನು ಹೇಳಿಲ್ಲ. ನಾನು ಆ ಪಾಯಿಂಟ್ ಅನ್ನು ಹೇಳಿದ್ದಕ್ಕೆ ನನಗೆ ಖುಷಿಯಿದೆ. ಯಾರಿಗೋ ಎಚ್ಚರಿಕೆ ನೀಡಬೇಕಾದರೆ ಹೇಳಿಯೇ ಹೊಡೆಯಬೇಕು. ಚೆಸ್ ಆಡುವಾಗ ಕದ್ದು ಮುಚ್ಚಿ ಚೆಕ್ ಅನ್ನುವುದಿಲ್ಲ. ನೇರವಾಗಿ ಚೆಕ್‌ ಹೇಳುತ್ತಾರೆ. ಪೈರಸಿ ಅಂತ ಪದ ಹೇಳುವ ಅವಶ್ಯಕತೆ ಇಲ್ಲ. ಈ ರೂಮಿನಲ್ಲಿ ಅಲ್ಲಿ ಕೆಟ್ಟ ಸ್ಮೆಲ್ ಬಂದ್ರೆ ಬಿಟ್ಟಿದ್ದು ಯಾರು ಎನ್ನುವುದು ಬಿಟ್ಟವನಿಗೆ ಗೊತ್ತಾಗುತ್ತೆ ಹಾಗೆ ಇದು ಎಂದು ಪೈರಸಿ ಮಾಡುವವರಿಗೆ ತಿರುಗೇಟು ನೀಡಿದ್ದಾರೆ.  ಇದನ್ನೂ ಓದಿ: `ಯುದ್ಧಕ್ಕೆ ಸಿದ್ಧ.. ನಾವು ನಮ್ಮ ಮಾತಿಗೆ ಬದ್ಧ’ – ಸುದೀಪ್ `ಯುದ್ಧ’ ಸಾರಿದ್ದು ಯಾರ ವಿರುದ್ಧ?

 

ಈ ಬಾರಿ ಬಹಳ ಬಲವಾಗಿ ಬರುತ್ತಿದ್ದೇವೆ. ನನ್ನ ಸಿನಿಮಾವನ್ನು ನಾನು ಕಾಪಾಡಿಕೊಳ್ಳಬೇಕು ಜಿದ್ದಾಜಿದ್ದಿಗೆ ಮಾಡುತ್ತಿಲ್ಲ. ಪೈರಸಿ ಮಾಡುವವರನ್ನು ಕರುಣೆ ಇಲ್ಲದೇ ಒಳಗೆ ಹಾಕಿಸುತ್ತೇನೆ. ನಮ್ಮ ಜೊತೆ ವಕೀಲರ ತಂಡವೇ ಇದೆ. ನಾನು ಯಾರಿಗೆ ಹೇಳಿದ್ದೇನೆ ಎನ್ನುವುದನ್ನು ಹೇಳಿದ್ದೇನೆ. ಯಾರಿಗೆ ತಾಗಬೇಕೋ ತಾಗಿದೆ ಎಂದರು.  ಇದನ್ನೂ ಓದಿ: ಸುದೀಪ್ ಮಾತಿಗೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಟಕ್ಕರ್

ಹುಬ್ಬಳ್ಳಿಯಲ್ಲಿ ನಾನು ಮೊನ್ನೆ ಮಾತನಾಡಿದ್ದು. ಈಗ ಯಾಕೆ ಈ ವಿಚಾರ ಬೆಳಗ್ಗೆಯಿಂದ ವೈರಲ್‌ ಆಗುತ್ತಿದೆ. ಸುದೀಪ್‌ ಅಭಿಮಾನಿಗಳು ವಾರ್‌ ಶುರು ಮಾಡಿದ್ದರೆ ನೆಕ್ಷ್ಟ್‌ ಡೇ ನನ್ನ ಪ್ರಶ್ನೆ ಮಾಡಬೇಕಿತ್ತು. ಶಿವಣ್ಣನ ಪರವಾಗಿ ನಾನು ಮಾತನಾಡಿದ್ದೇನೆ. 45 ಸಿನಿಮಾ ಬಗ್ಗೆ ಹೇಳಿದ್ದೇನೆ. ಯಾಕೆ 45 ಟೀಂ ನವರು ನಮಗೆ ಹೇಳಿದ್ದಾರೆ ಅಂದುಕೊಂಡಿಲ್ಲ. ಗಣೇಶ್, ಧ್ರುವ ಸರ್ಜಾ, ಯಶ್, ರಿಷಬ್, ರಕ್ಷಿತ್‌.. ಎಷ್ಟೋ ಕಲಾವಿದರು ಇದ್ದಾರೆ. ಯಾಕೆ ಅವರ ಅಭಿಮಾನಿಗಳು ನಮಗೆ ಹೇಳಿದ್ದು ಅಂತ ಅಂದುಕೊಂಡಿಲ್ಲ. ಪೈರಸಿ ಬಗ್ಗೆ ಎಚ್ಚರಿಕೆ ನೀಡಿದ್ದು ತಪ್ಪೇ ಎಂದು ಪ್ರಶ್ನಿಸಿದರು.

ಈ ವೇಳೆ ವಿಜಯಲಕ್ಷ್ಮಿ (Vijayalakshmi Darshan) ಹೇಳಿಕೆಯ ಬಗ್ಗೆ ಪ್ರಶ್ನೆ ಕೇಳಿದ್ದಕ್ಕೆ, ಅವರ ಬಳಿಯೇ ನೀವು ಹೋಗಿ ಯಾರಿಗೆ ಈ ಮಾತನ್ನು ಹೇಳಿದ್ದೀರಿ ಅಂತ ಕೇಳಿ. ವೇದಿಕೆಯ ಮೇಲೆ ಮಾತನಾಡಿದ್ದಾರೆ ಅಂದರೆ ಅವರಿಗೆ ಗೊತ್ತಿರುತ್ತದೆ. ಅವರ ನೋವು ಯಾರಿಗೆ ಗೊತ್ತು? ಯಾರ ಹೆಣ್ಣು ಮಕ್ಕಳ ಬಗ್ಗೆ ನಾನು ಮಾತಾಡುವುದಿಲ್ಲ ಎಂದರು.

Share This Article