ಅಮೆರಿಕದಲ್ಲಿ ವಾರ್-2 ಚಿತ್ರಕ್ಕೆ ಭಾರೀ ಡಿಮ್ಯಾಂಡ್

Public TV
1 Min Read

ಹೃತಿಕ್ ರೋಷನ್ (Hrithik Roshan), ಜೂ.ಎನ್‌ಟಿಆರ್ (Jr NTR) ಹಾಗೂ ಕಿಯಾರ ಅಡ್ವಾಣಿ (Kiara Advani) ಮುಖ್ಯ ಪಾತ್ರದಲ್ಲಿ ನಟಿಸಿರುವ ಹೈ-ವೊಲ್ಟೇಜ್ ವಾರ್-2 (War 2) ಸಿನಿಮಾ ಇದೇ ಆಗಸ್ಟ್‌ 14ರಂದು ವಿಶ್ವದಾದ್ಯಂತ ತೆರೆಗೆ ಬರಲು ರೆಡಿಯಾಗಿದೆ. ಈ ಸಿನಿಮಾ ಆಗಸ್ಟ್‌ 13 ರಂದು ಉತ್ತರ ಅಮೆರಿಕದಲ್ಲಿ ಪ್ರೀಮಿಯರ್ ಆಗಲಿವೆ. ಹೀಗಾಗಿ ಸಿನಿಮಾಗೆ ಈಗಿನಿಂದಲೇ ಅಡ್ವಾನ್ಸ್ ಬುಕ್ಕಿಂಗ್ ಶುರುವಾಗಿದ್ದು, ಬರೋಬ್ಬರಿ 80 ಸಾವಿರ ಡಾಲರ್  ಟಿಕೆಟ್ ಬುಕ್ಕಿಂಗ್ ಆಗಿದೆ. ಇದನ್ನೂ ಓದಿ: ಕನ್ನಡ, ತೆಲುಗಿನಲ್ಲಿ ಏಕಕಾಲದಲ್ಲಿ ಚಿತ್ರೀಕರಣವಾಗಲಿದೆ ರಿಷಬ್ ಶೆಟ್ಟಿ ಹೊಸ ಚಿತ್ರ

ಅಯಾನ್ ಮುಖರ್ಜಿ ನಿರ್ದೇಶನದ ಬಹು ನಿರೀಕ್ಷಿತ ಸಿನಿಮಾ ವಾರ್-2 ಟೀಸರ್ ಹಾಗೂ ಟ್ರೇಲರ್ ಮೂಲಕವೇ ಗಮನಸೆಳೆದಿದೆ. ಅಮೆರಿಕದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಸಿನಿಮಾ 80 ಸಾವಿರ ಡಾಲರ್ ಟಿಕೆಟ್ ಬುಕ್ಕಿಂಗ್ ಆಗಿರೋದು ಸಿನಿಮಾ ಮೇಲಿನ ಕ್ರೇಜ್ ನ ಮತ್ತಷ್ಟು ಹೆಚ್ಚಿಸಿದೆ. ಜೂ.ಎನ್ ಟಿಆರ್ ಹಾಗೂ ಹೃತಿಕ್ ರೋಶನ್ ಮೊದಲ ಬಾರಿಗೆ ಒಟ್ಟಿಗೆ ಕಾಣಿಸಿಕೊಳ್ತಿರುವ ಸಿನಿಮಾ ಇದಾಗಿದ್ದು, ಸಹಜವಾಗಿಯೇ ಸಿನಿಮಾ ಮೇಲೆ ನಿರೀಕ್ಷೆಗಳಿವೆ.

 

ವಾರ್ – 2 ಸಿನಿಮಾ ಅಮೆರಿಕ ಹಾಗೂ ಕೆನಡಾದಲ್ಲಿ ಅತಿಹೆಚ್ಚು ಸ್ಕ್ರೀನ್ ಗಳನ್ನ ಪಡೆದುಕೊಂಡಿದೆ. ಅಲ್ಲದೇ ಸಿನಿಮಾ ರಿಲೀಸ್ ಗೆ ಎರಡು ವಾರ ಬಾಕಿ ಇರುವಾಗಲೇ ಬೇಡಿಕೆ ಹೆಚ್ಚಾಗಿದೆ. ವಾರ್ ಮೊದಲ ಭಾಗ ತೆರೆಕಂಡು ಪ್ರೇಕ್ಷಕರ ಮನಸೊರೆ ಮಾಡಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಮೊತ್ತವನ್ನೇ ಕಲೆ ಹಾಕಿತ್ತು. ಹೀಗಾಗಿ ಸಿನಿಮಾ ತೆರೆಗೆ ಬರೋದನ್ನೇ ಅಭಿಮಾನಿ ಬಳಗ ಕಾಯುತ್ತಿದೆ.

Share This Article