ಕಾನೂನುಬಾಹಿರವಾಗಿ ರೈತರ ಒಂದಿಂಚು ಜಾಗವನ್ನು ವಕ್ಫ್ ವಶಪಡಿಸಿಕೊಳ್ಳಲು ಬಿಡಲ್ಲ: ಎಂ.ಬಿ ಪಾಟೀಲ್

Public TV
1 Min Read

– ಬಿಜೆಪಿ ಪ್ರತಿಭಟನೆ ರಾಜಕೀಯ ಪ್ರೇರಿತ

ಬೆಂಗಳೂರು: ರೈತರ (Farmers) ಒಂದಿಂಚು ಜಾಗವನ್ನ ಕಾನೂನುಬಾಹಿರವಾಗಿ ವಕ್ಫ್ (Waqf) ವಶಪಡಿಸಿಕೊಳ್ಳಲು ನಾನು ಬಿಡೋದಿಲ್ಲ ಎಂದು ಸಚಿವ ಎಂಬಿ ಪಾಟೀಲ್ (MB Patil) ತಿಳಿಸಿದ್ದಾರೆ.

ವಕ್ಫ್ ವಿಚಾರವಾಗಿ ಬಿಜೆಪಿ ಪ್ರತಿಭಟನೆಗೆ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ವಿಚಾರವಾಗಿ ಬಿಜೆಪಿ (BJP) ಪ್ರತಿಭಟನೆ ಮಾಡಿ ರಾಜಕೀಯ ಮಾಡುತ್ತಿದ್ದಾರೆ. ಬೊಮ್ಮಾಯಿ ಸಿಎಂ ಆಗಿದ್ದಾಗ ಏನು ಹೇಳಿದ್ದಾರೆ ಎಲ್ಲಾ ನೋಡಿದ್ದಾರೆ. ಬಿಜೆಪಿ ಅವಧಿಯಲ್ಲಿ ನೋಟಿಸ್ ಕೊಟ್ಟಿದ್ದಾರೆ. ಬಿಜೆಪಿ ಅವಧಿಯಲ್ಲಿ ವಕ್ಫ್ ಆಸ್ತಿ ಎಂದು ಹೆಸರು ಬಂದಿತ್ತು. ಈಗಾಗಲೇ ಸಿಎಂ ಕ್ಲಿಯರ್ ಮಾಡಿದ್ದಾರೆ. ಯಾವ ರೈತರ ಜಮೀನು ಸರ್ಕಾರ ಪಡೆಯೋದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: Kalaburagi | ನಿಂತಿದ್ದ ವೃದ್ಧೆಗೆ ಡೀಸೆಲ್ ಟ್ಯಾಂಕರ್ ಡಿಕ್ಕಿ – ಸ್ಥಳದಲ್ಲೇ ಸಾವು

ನಮ್ಮ ಜಿಲ್ಲೆಯಲ್ಲಿ ಟಾಸ್ಕ್ ಫೋರ್ಸ್ ಮಾಡಿದ್ದೇವೆ. ಎಲ್ಲಾ ದಾಖಲಾತಿ ತೆಗೆದು ರೈತರ ಜಾಗ ಇದ್ದರೆ ರೈತರಿಗೆ ಕೊಡುತ್ತೇವೆ. ವಕ್ಫ್ ಆಸ್ತಿ ಇದ್ದರೆ ಅವರಿಗೆ ಕೊಡುತ್ತೇವೆ. ಸರ್ಕಾರದ ಜಾಗ ಇದ್ದರೆ ಸರ್ಕಾರ ಪಡೆಯುತ್ತದೆ. ಬಿಜೆಪಿ ಅವರು ಜನರನ್ನು ಕೆರಳಿಸುವ ಕೆಲಸ ಮಾಡುತ್ತಿದ್ದಾರೆ. ಒಂದು ಇಂಚು ರೈತರ ಆಸ್ತಿ ಕಾನೂನುಬಾಹಿರವಾಗಿ ವಕ್ಫ್ ಆಸ್ತಿ ಆಗಲು ನಾನು ಬಿಡೋದಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಚುನಾವಣೆಗಾಗಿ ಪದೇ ಪದೇ ಕಣ್ಣೀರು ಹಾಕೋದು ಸರಿಯಲ್ಲ: ಮಹದೇವಪ್ಪ

ಶಾಸಕ ಯತ್ನಾಳ್ ಅವರಿಂದ ಅಹೋರಾತ್ರಿ ಧರಣಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಮೊದಲು ಜೆಡಿಎಸ್‌ನಲ್ಲಿ ಇದ್ದವರು. ಯತ್ನಾಳ್ ಹಿಂದೆ ಟಿಪ್ಪು ಸುಲ್ತಾನ್ ಡ್ರೆಸ್ ಹಾಕಿದ್ದರು. ನಮ್ಮ ಜೊತೆಗೆ ದರ್ಗಾಗೆ ಬಂದಿದ್ದಾರೆ. ನಾವು ರಾಜಕೀಯ ಮಾಡಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ. ನಾವು ಯಾವುದೇ ಧರ್ಮದವರು, ಜಾತಿಯವರು ಇದ್ದರೂ ಯಾರಿಗೂ ಅನ್ಯಾಯ ಮಾಡಲು ಬಿಡಲ್ಲ. ಈಗಾಗಲೇ ಸಿಎಂ ಅವರು ಹೇಳಿದ್ದಾರೆ. ನಾನು ಹೇಳಿದ್ದೇನೆ, ಕಂದಾಯ ಸಚಿವರು ಹೇಳಿದ್ದಾರೆ ಎಂದರು. ಇದನ್ನೂ ಓದಿ: ಸಿದ್ದರಾಮಯ್ಯ ಇರೋವರೆಗೂ ಸಿಎಂ ಬದಲಾವಣೆ ಚರ್ಚೆ ಇಲ್ಲ: ಮಹದೇವಪ್ಪ

Share This Article