ವಧು ಬೇಕಾಗಿದ್ದಾಳೆ, ಅಂಗಡಿ ಮುಂದೆ ಬೋರ್ಡ್-ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಬಂತು ಆಫರ್

Public TV
2 Min Read

ತಿರುವನಂತಪುರಂ: ಮದುವೆಗೆ ವಧು ಬೇಕೆಂದು ಅಂಗಡಿ ಮುಂದೆ ಬೋರ್ಡ್ ಹಾಕಿದ ಹಳ್ಳಿ ಹೈದನಿಗೆ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದ ಆಫರ್ ಬಂದಿರುವುದು ಕೇರಳದಲ್ಲಿ ಸುದ್ದಿಯಾಗಿದೆ.

ಕೇರಳದ ವಲ್ಲಾಚಿರ ಎಂಬ ಊರಿನವರಾದ 33 ವರ್ಷದ ಎನ್.ಎನ್. ಉನ್ನಿಕೃಷ್ಣನ್ ಮದುವೆಯಾಗಲು ಹುಡುಗಿಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸಿದ್ದರು. ಆದರೆ ಯಾವ ಹುಡುಗಿಯೂ ಹೊಂದಿಕೆಯಾಗಿರಲಿಲ್ಲ. ವಲ್ಲಾಚಿರದಲ್ಲಿ ತನ್ನದೇ ಆದ ಅಂಗಡಿಯನ್ನು ಇಟ್ಟುಕೊಂಡಿರುವ ಉನ್ನಿಕೃಷ್ಣನ್ ಯಾವುದೇ ಮಧ್ಯವರ್ತಿಯ ಸಹಾಯವಿಲ್ಲದೆ ತಾನೇ ಹುಡುಗಿಯನ್ನು ಹುಡುಕಿಕೊಳ್ಳಲು ನಿರ್ಧರಿಸಿದರು. ಅದಕ್ಕಾಗಿ ತಮ್ಮ ಅಂಗಡಿಯ ಮುಂದೆ ವಧು ಬೇಕಾಗಿದ್ದಾಳೆ ಎಂದು ಬೋರ್ಡ್ ಒಂದನ್ನು ಹಾಕಿ ಅದರ ಕೆಳಗೆ ತಮ್ಮ ನಂಬರನ್ನು ನಮೂದಿಸಿದ್ದಾರೆ. ಇದನ್ನೂ ಓದಿ: ಬೆಲೆ ಏರಿಕೆ ಶಾಕ್ – ಮತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ ಹೆಚ್ಚಳ

ನಾನು ಮದುವೆಯಾಗಲು ಹುಡುಗಿಯನ್ನು ಹುಡುಕುತ್ತಿದ್ದೇನೆ. ಜಾತಿ, ಧರ್ಮ ಯಾವುದಾದರೂ ತೊಂದರೆಯಿಲ್ಲ ಎಂದು ಉನ್ನಿಕೃಷ್ಣನ್ ಫಲಕದಲ್ಲಿ ಬರೆದು, ಅಂಗಡಿ ಎದುರು ನೇತು ಹಾಕಿದ್ದಾರೆ. ಇತ್ತೀಚೆಗೆ ಈ ಅಂಗಡಿಗೆ ಬಂದಿದ್ದ ಅವರ ಗೆಳೆಯರೊಬ್ಬರು ಈ ಫಲಕವನ್ನು ನೋಡಿ ಅದರ  ಫೋಟೋ ತೆಗೆದುಕೊಂಡು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಪ್‍ಲೋಡ್ ಮಾಡಿದ್ದರು. ಅದುವರೆಗೂ ಸುತ್ತಮುತ್ತಲಿನ ಊರುಗಳಲ್ಲಿ ಹುಡುಗಿಗಾಗಿ ಹುಡುಕಾಡುತ್ತಿದ್ದ ಉನ್ನಿಕೃಷ್ಣನ್‍ಗೆ ಈ ಒಂದು ಪೋಸ್ಟ್​ನಿಂದ ಈಗ ಆಸ್ಟ್ರೇಲಿಯ, ಇಂಗ್ಲೆಂಡ್‍ನಿಂದಲೂ  ಫೋನ್ ಕಾಲ್‍ಗಳು ಬಂದಿವೆಯಂತೆ. ಇದನ್ನೂ ಓದಿ: ಸುದೀಪ್ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್ – ಬಿಡುಗಡೆಯಾಗಲಿದೆ ಆಡಿಯೋ ಬುಕ್

ನನ್ನ ತಲೆಬುರುಡೆಯಲ್ಲಿ ಗೆಡ್ಡೆ ಬೆಳೆದಿದ್ದರಿಂದ ಈಗಾಗಲೇ ಆಪರೇಷನ್ ಆಗಿದೆ. ಈಗ ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ. ಇನ್ನಾದರೂ ಜೀವನದಲ್ಲಿ ಸೆಟಲ್ ಆಗಬೇಕೆಂದು ಮದುವೆಯಾಗಲು ನಿರ್ಧರಿಸಿದೆ. ಆದರೆ ಯಾರೂ ನನ್ನನ್ನು ಮದುವೆಯಾಗಲು ಮುಂದೆ ಬರಲಿಲ್ಲ. ನನಗೆ ನನ್ನದೇ ಸ್ವಂತದ್ದೊಂದು ಅಂಗಡಿಯಿದೆ. ನಮ್ಮ ಮನೆ ಬಳಿಯೇ ಲಾಟರಿ ಅಂಗಡಿಯೊಂದನ್ನು ತೆರೆದಿದ್ದೇನೆ. ಅಲ್ಲಿಯೇ ಟೀಯನ್ನು ಕೂಡ ಮಾರುತ್ತೇನೆ. ಬ್ರೋಕರ್ ಮೂಲಕ ಹುಡುಗಿಯನ್ನು ಹುಡುಕುವುದು ಇಷ್ಟವಿಲ್ಲದ ಕಾರಣಕ್ಕೆ ಈ ರೀತಿ ಅಂಗಡಿಯೆದುರು ನನಗೆ ನಾನೇ ಜಾಹೀರಾತು ಕೊಟ್ಟುಕೊಂಡಿದ್ದೇನೆ. ನಮ್ಮ ಮನೆಯವರು ಕೂಡ ಹುಡುಗಿಯನ್ನು ಹುಡುಕುತ್ತಿದ್ದಾರೆ. ಆದರೆ ಇನ್ನೂ ನನಗೆ ಸರಿಯೆನಿಸುವ ಹುಡುಗಿ ಸಿಕ್ಕಿಲ್ಲ ಎಂದು ಉನ್ನಿಕೃಷ್ಣನ್ ಹೇಳಿದ್ದಾರೆ. ಇದನ್ನೂ ಓದಿ: ಸುದೀಪ್‍ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ ನೀರಜ್ ಚೋಪ್ರಾ

ಈ ಬೋರ್ಡ್‍ನ  ಫೋಟೋ ತೆಗೆದು ಉನ್ನಿಕೃಷ್ಣನ್ ಅವರ ಸ್ನೇಹಿತ ತಮ್ಮ ಫೇಸ್‍ಬುಕ್ ಪೇಜಿನಲ್ಲಿ ಹಾಕಿಕೊಂಡಿದ್ದರು. ಮಲಯಾಳಂನಲ್ಲಿ ಬರೆದಿದ್ದ ಆ ಬೋರ್ಡ್‍ನ ಅರ್ಥವನ್ನು ಇಂಗ್ಲಿಷ್‍ನಲ್ಲಿ ಅನುವಾದಿಸಿ  ಫೋಸ್ಟ್ ಮಾಡಿದ್ದರು. ನನ್ನನ್ನು ಮದುವೆಯಾಗಲು ಇಚ್ಛಿಸುವ ಯಾವುದೇ ಧರ್ಮ, ಜಾತಿಯ ಹುಡುಗಿ ಈ ನಂಬರ್‍ಗೆ ಸಂಪರ್ಕಿಸಿ ಎಂದು ಬರೆದಿದ್ದ ಆ ಬೋರ್ಡ್ ಅನ್ನು ನೋಡಿ ಅನೇಕರು ಇಂಪ್ರೆಸ್ ಆಗಿದ್ದಾರೆ. ಇದೀಗ ಆ  ಫೋಸ್ಟ್ ನೋಡಿದ ಆಸ್ಟ್ರೇಲಿಯ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ವಾಸವಾಗಿರುವ ಮಲೆಯಾಳಿಗಳು ಕೂಡ ಫೋನ್ ಮಾಡಿ ತಮ್ಮ ಕುಟುಂಬದಲ್ಲಿ ಹುಡುಗಿ ಇರುವುದಾಗಿ ತಿಳಿಸುತ್ತಿದ್ದಾರೆ. ಹಲವರು ಫೋನ್ ಮಾಡಿ ಜಾತಿ, ಧರ್ಮವನ್ನು ಲೆಕ್ಕಿಸದೆ ಮದುವೆಯಾಗಲು ಬಯಸಿದ್ದಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಮದುವೆಗೆ ಹುಡುಗಿಯನ್ನು ಹುಡುಕಲು ಬ್ರೋಕರ್ ಬಳಿ ಹೋಗಬೇಕು, ನೆಂಟರಿಷ್ಟರ ಬಳಿ ವಿಚಾರಣೆ ಮಾಡಬೇಕೆಂಬ ಕಾಲವೆಲ್ಲ ಹಳೆಯದಾಯ್ತು. ಈಗೇನಿದ್ದರೂ ತಮಗೆ ಬೇಕಾದ ಹುಡುಗಿಯನ್ನು ಹುಡುಕಿಕೊಳ್ಳಲು ಬೇಕಾದಷ್ಟು ಹೊಸ ಹೊಸ ಆಯ್ಕೆಗಳಿವೆ.

Share This Article
Leave a Comment

Leave a Reply

Your email address will not be published. Required fields are marked *