ಭಾರತ ಪಾಕ್‌ನೊಂದಿಗೆ ಸಾಮಾನ್ಯ ಬಾಂಧವ್ಯ ಬಯಸುತ್ತದೆ, ಆದರೆ… – ಮೋದಿ ಹೇಳಿದ್ದೇನು?

By
2 Min Read

– ಹಿರೋಶಿಮಾ ನಗರದಲ್ಲಿ ಭಾರತೀಯರನ್ನ ಭೇಟಿಯಾದ ನಮೋ

ಟೋಕಿಯೋ: ಅಣುಬಾಂಬ್ ಸ್ಫೋಟಗೊಂಡ ಜಪಾನ್ ದೇಶದ ಹಿರೋಶಿಮಾ (Hiroshima) ನಗರದಲ್ಲಿ ನಡೆಯುತ್ತಿರುವ G7 ಶೃಂಗಸಭೆಯಲ್ಲಿ (G7 Summit) ಪ್ರಧಾನಿ ಮೋದಿ (PM Nrendra Modi) ಪಾಲ್ಗೊಂಡಿದ್ದಾರೆ.

ಶುಕ್ರವಾರದಿಂದ ಪ್ರಧಾನಿ ಮೋದಿಯವರ 6 ದಿನಗಳ ವಿದೇಶ ಪ್ರವಾಸ ಇವತ್ತಿಂದ ಶುರುವಾಗಿದೆ. ಹಿರೋಶಿಮಾದಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಈ ಶೃಂಗಸಭೆಯಲ್ಲಿ ಭಾರತ ವಿಶೇಷ ಆಹ್ವಾನಿತ ದೇಶವಾಗಿದೆ. ಪ್ರಧಾನಿ ಮೋದಿ 6 ದಿನಗಳ ಈ ಪ್ರವಾಸದಲ್ಲಿ ಹಿರೋಶಿಮಾದಲ್ಲಿ ಜಗತ್ತಿಗೆ ಶಾಂತಿ ಸಂದೇಶ ಸಾರಿದ ಮಹಾತ್ಮಾ ಗಾಂಧಿ ವಿಗ್ರಹವನ್ನು ಅನಾವರಣ ಮಾಡಲಿದ್ದಾರೆ. ಇದೇ ವೇಳೆ ಅಲ್ಲಿನ ಭಾರತೀಯರನ್ನೂ ಭೇಟಿಯಾಗಿದ್ದಾರೆ.

ಸಭೆಗೆ ಹಾಜರಾಗುವುದಕ್ಕೂ ಮುನ್ನ `ನಿಕ್ಕಿ ಏಷ್ಯಾ’ಗೆ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ಭಾರತ ಮತ್ತು ಪಾಕಿಸ್ತಾನ, ಭಾರತ ಮತ್ತು ಚೀನಾ ಸಂಬಂಧದ ಕುರಿತು ಮಾತನಾಡಿದ್ದಾರೆ. ಇದನ್ನೂ ಓದಿ: 2,000 ರೂ. ಮುಖಬೆಲೆಯ ನೋಟ್ ಬ್ಯಾನ್ – ಕೇಂದ್ರ ಬಿಜೆಪಿ ವಿರುದ್ಧ ನಿಯೋಜಿತ ಸಿಎಂ ಸಿದ್ದರಾಮಯ್ಯ ಕಿಡಿ

ಭಾರತವು ಪಾಕಿಸ್ತಾನದೊಂದಿಗೆ ಸಾಮಾನ್ಯ ಬಾಂಧವ್ಯ ಹೊಂದಲು ಬಯಸುತ್ತದೆ. ಆದ್ರೆ ಭಯೋತ್ಪಾದನೆ, ಹಗೆತನ ಮುಕ್ತ ವಾತಾವರಣ ಸೃಷ್ಟಿಸುವುದು ಅವರ ಜವಾಬ್ದಾರಿಯಾಗಿದೆ. ಈ ನಿಟ್ಟಿನಲ್ಲಿ ಪಾಕಿಸ್ತಾನ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಗಡಿಯಾಚೆಗಿನ ಭಯೋತ್ಪಾದನೆಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ಭಾರತ ಪದೇ ಪದೇ ತನ್ನ ಕಳವಳ ವ್ಯಕ್ತಪಡಿಸಿದೆ. ಭಯೋತ್ಪಾದನೆ ಕುರಿತ ಮಾತುಕತೆಗೆ ಎಂದಿಗೂ ಭಾರತ ಪಾಕಿಸ್ತಾನದೊಂದಿಗೆ ಹೋಗುವುದಿಲ್ಲ ಎಂದು ಪ್ರತಿಪಾದಿಸಿದ್ದಾರೆ. ಈ ತಿಂಗಳ ಆರಂಭದಲ್ಲಿಯೂ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಗೋವಾದಲ್ಲಿ ನಡೆದ ಎಸ್‌ಸಿಒ ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದರು. ಆದ್ರೆ ಅವರೊಂದಿಗೆ ಯಾವುದೇ ದ್ವಿಪಕ್ಷೀಯ ಮಾತುಕತೆ ಸಹ ನಡೆದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮಹಿಳೆಯರಿಗೆ ಬಳಸಿದ ಕಾಂಡೋಮ್, ಲೈಂಗಿಕ ಸಂದೇಶದ ಲೆಟರ್ ಪೋಸ್ಟ್ – ಯಾರು ಕಳಿಸಿದ್ದಾರೆ ಅನ್ನೋದೆ ಸಸ್ಪೆನ್ಸ್

ಚೀನಾ ಸಂಬಂಧದ ಕುರಿತು ಮಾತನಾಡುತ್ತಾ, ಭಾರತವು ತನ್ನ ಸಾರ್ವಭೌಮತೆ ಮತ್ತು ಘನತೆಯನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧ ಮತ್ತು ಬದ್ಧವಾಗಿದೆ. ಚೀನಾ ಸೇನೆಯ ಕ್ರಮಗಳ ನಂತರ 2020ರ ಬೇಸಿಗೆಯಲ್ಲಿ ಪೂರ್ವ ಲಡಾಖ್‌ನಲ್ಲಿ ಚೀನಾದೊಂದಿಗೆ ಬಿಕ್ಕಟ್ಟು ಭುಗಿಲೆದ್ದಿತು. ಆನಂತರ ನಡೆದ ಮಾತುಕತೆಗಳ ಬಳಿಕ ಕೆಲವು ಪ್ರದೇಶಗಳಿಂದ ಬೇರ್ಪಟ್ಟಿತು. ಈಗ ಸೇನೆಯ ಮಧ್ಯೆ ಘರ್ಷಣೆಗಳು ಆಗಾಗ್ಗೆ ನಡೆಯುತ್ತಿವೆ ಎಂದು ತಿಳಿಸಿದ್ದಾರೆ.

Share This Article