– ವಿಮಾನದಿಂದ ಕೆಳಗೆ ಬಿದ್ದವರನ್ನ ಕಂಡ ವ್ಯಕ್ತಿಯ ಮಾತು
ಕಾಬೂಲ್: ಆಗಸ್ಟ್ 16ರ ಮಧ್ಯಾಹ್ನ ಜೋರಾದ ಸದ್ದು ಕೇಳಿಸಿತು. ಮನೆಯ ಮೇಲೆ ಹೋಗಿ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿರೋದು ಕಂಡು ಬಂತು ಎಂದು ವಿಮಾನದಿಂದ ಕೆಳಗೆ ಬಿದ್ದವರನ್ನ ಕಂಡ ವ್ಯಕ್ತಿ ಹೇಳಿದ್ದಾರೆ.
ಅಫ್ಘಾನಿಸ್ತಾನ ತಾಲಿಬಾನಿಗಳ ಕೈವಶವಾಗುತ್ತಲೇ ಭಯಗೊಂಡ ಜನ ದೇಶ ತೊರೆಯಲು ಆರಂಭಿಸಿದ್ದಾರೆ. ಕಳೆದ ನಾಲ್ಕೈದು ದಿನಗಳಿಂದ ತಾಲಿಬಾನಿಗಳ ಕ್ರೌರ್ಯದ ವರದಿಗಳು ಪ್ರಕಟವಾಗುತ್ತಿವೆ. ಅಗಸ್ಟ್ 16ರಂದು ಅಫ್ಘಾನಿಸ್ತಾನದ ಜನರು ವಿಮಾನ ನಿಲ್ದಾಣಗಳತ್ತ ಆಗಮಿಸಿ, ಸಿಕ್ಕ ಸಿಕ್ಕ ಪ್ಲೇನ್ ಹತ್ತಲು ಆರಂಭಿಸಿದ್ದರು. ಅಮೆರಿಕಾದ ಪ್ಲೇನ್ ಟೇಕಾಫ್ ಗೊಂಡ ಕೆಲವೇ ನಿಮಿಷಗಳಲ್ಲಿ ಮೇಲಿಂದ ಇಬ್ಬರು ಬೀಳುವ ಭಯಾನಕ ದೃಶ್ಯ ಮೊಬೈಲ್ ಗಳಲ್ಲಿ ಸೆರೆಯಾಗಿತ್ತು. ಅಂದು ವಿಮಾನದಿಂದ ಕೆಳಗೆ ಬಿದ್ದವರ ಗುರುತು ಪತ್ತೆಯಾಗಿದೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗಾಗಿ ಕಾಯುತ್ತಿದ್ದೇನೆ, ನನ್ನನ್ನು ಕೊಲ್ಲುತ್ತಾರೆ: ಅಫ್ಘಾನಿಸ್ತಾನದ ಮಹಿಳಾ ಮೇಯರ್
ವಲಿ ಸಾಲೆಕ್ ಎಂಬವರ ಮನೆ ಮೇಲೆ ಬಿದ್ದು ಸಾವನ್ನಪ್ಪಿದ್ದಾರೆ. ಸೋಮವಾರ ಮಧ್ಯಾಹ್ನ ಎರಡು ಗಂಟೆ ನಂತ್ರ ವಿಶ್ರಾಂತಿ ಪಡೆಯುತ್ತಿದ್ದೆ. ಆಗ ಮೇಲಿನಿಂದ ಏನೋ ಬಿದ್ದಂತೆ ಆಯ್ತು. ನಾವು ಟೈರ್ ಸ್ಫೋಟಗೊಂಡು ಮನೆಯ ಮೇಲೆ ಬಂದಿದೆಯಾ ಅಂತ ನೋಡಲು ಹೋದೆ. ನನ್ನೊಂದಿಗೆ ಮಗಳು ಮತ್ತು ಪತ್ನಿ ಸಹ ಬಂದರು. ಮೇಲೆ ನೋಡಿದ್ರೆ ಇಬ್ಬರ ಶವಗಳು ಎರಡು ತುಂಡಾಗಿದ್ದವು. ಈ ಭೀಕರ ದೃಶ್ಯ ಕಂಡ ಪತ್ನಿ ಮತ್ತು ಮಗಳು ಮೂರ್ಛೆ ಹೋದರು ಎಂದು ವಲಿ ಹೇಳ್ತಾರೆ. ಇದನ್ನೂ ಓದಿ: ರಕ್ತಪಾತ ತಡೆಗಾಗಿ ದೇಶ ತೊರೆದೆ- ಅಫ್ಘಾನಿಸ್ತಾನದ ಅಧ್ಯಕ್ಷ ಅಶ್ರಫ್ ಘನಿ
https://www.youtube.com/watch?v=2fj1FGePoZE
ಸ್ಥಳೀಯರ ಸಹಾಯದಿಂದ ಎರಡೂ ಶವಗಳನ್ನು ಸಮೀಪದ ಮಸೀದಿ ಬಳಿ ತೆಗೆದುಕೊಂಡು ಹೋಗಲಾಯ್ತು. ಅಲ್ಲಿ ಇಬ್ಬರ ಜೇಬುಗಳನ್ನ ಪರಿಶೀಲಿಸಿದಾಗ ಅವರ ಗುರುತು ಪತ್ತೆಯಾಯ್ತು. ಒಬ್ಬರು ಶಫೀವುಲ್ಲಾ, ಮತ್ತೊಬ್ಬರು ಫಿದಾ ಮೊಹಮ್ಮದ್. ಶಫೀವುಲ್ಲಾ ದಾಖಲೆ ಆತ ವೈದ್ಯ ಅಂತ ಗೊತ್ತಾಯ್ತು. ಇಬ್ಬರ 30 ವರ್ಷದೊಳಗಿನ ಯುವಕರು ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಪ್ರಜಾಪ್ರಭುತ್ವ ಸರ್ಕಾರ ಇಲ್ಲ, ಷರಿಯಾ ಕಾನೂನುಗಳೇ ಜಾರಿ – ತಾಲಿಬಾನ್