ವಿಟಿಯು ಇಂಜಿನಿಯರಿಂಗ್‌ ಪರೀಕ್ಷೆ – ಸುಚಿತಾ ಮಡಿವಾಳಗೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ

Public TV
1 Min Read

ಮಂಗಳೂರು: ವಿಟಿಯು ಇಂಜಿನಿಯರಿಂಗ್ ಪರೀಕ್ಷೆಯಲ್ಲಿ (VTU Engineering Exam) ಸುಚಿತಾ ಮಡಿವಾಳ (Suchita Madiwala) ಅವರು ಡಾಟಾ ಸೈನ್ಸ್‌ನ ಪ್ರಥಮ ಬ್ಯಾಚ್‌ಗೆ ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಪಡೆದಿದ್ದಾರೆ.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ನಡೆಸಿದ 2024-25 ನೇ ಸಾಲಿನ ಪರೀಕ್ಷೆಯಲ್ಲಿ ಪುತ್ತೂರು (Putturu) ವಿವೇಕಾನಂದ ಎಂಜಿನಿಯರಿಂಗ್ ಕಾಲೇಜ್ ಅಂಡ್ ಟೆಕ್ನಾಲಜಿ (Vivekananda Engineering College) ಫೈನಲ್ ಇಯರ್ ಬಿಇ ಕಂಪ್ಯೂಟರ್ ಸೈನ್ಸ್ (ಡೇಟಾ ಸೈನ್ಸ್) ವಿಭಾಗದಲ್ಲಿ 9.60 cgpa ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದು ರಾಜ್ಯಕ್ಕೆ ಮೊದಲ ರ‍್ಯಾಂಕ್‌ ಜೊತೆಗೆ ಚಿನ್ನದ ಪದಕ ಪಡೆದಿರುತ್ತಾರೆ. ಇದನ್ನೂ ಓದಿ: 46 ರೂ. ಆಗಿದ್ರೂ 50 ರೂ. ಟಿಕೆಟ್‌ – ಭಾರೀ ಟೀಕೆ ಬೆನ್ನಲ್ಲೇ KSRTC ಆದೇಶ ರದ್ದು

ದಿ.ರಮೇಶ ಮಡಿವಾಳ ಹಾಗೂ ಮೋಹಿನಿಯವರ ಮಗಳಾದ ಇವರು ಗ್ರಾಮೀಣ ಪ್ರದೇಶದಿಂದ ಬಂದವರಾದರೂ ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳಲ್ಲೂ ತನ್ನನ್ನು ತಾನು ತೊಡಗಿಸಿಕೊಂಡು ಅಣ್ಣನ ಸಹಾಯ, ತಾಯಿಯ ಪ್ರೋತ್ಸಾಹದಿಂದ ಇಂತಹ ಸಾಧನೆ ಮಾಡಿರುವುದು ಹೆಮ್ಮೆಯ ವಿಚಾರವಾಗಿದೆ.

ಪ್ರತೀ ಹಂತದ ಮಾಸಿಕ, ವಾರ್ಷಿಕ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಗಳಿಸುತ್ತಾ ಬರುತ್ತಿದ್ದ ಸುಚಿತಾ ಅಂತಿಮ ವರ್ಷದ ಪರೀಕ್ಷೆಯಲ್ಲೂ ಉತ್ತಮ ಅಂಕಗಳನ್ನು ಪಡೆದು ಮೊದಲ ಸ್ಥಾನ ಪಡೆದಿರುವುದು ಪ್ರಾಧ್ಯಾಪಕರಿಗೂ ಜೊತೆಗೆ ಹೆತ್ತವರಿಗೂ ಸಂತಸವನ್ನು ಉಂಟು ಮಾಡಿದೆ. ಇದನ್ನೂ ಓದಿ: PublicTV Explainer: ಹೃದಯ ಭಾರ.. ಇರಲಿ ಎಚ್ಚರ! ಹೃದಯಾಘಾತಕ್ಕೆ ಯುವಕರೇ ಹೆಚ್ಚು ಬಲಿ ಯಾಕೆ?

ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷರಾದ ಡಾ.ಕಲ್ಲಡ್ಕ ಪ್ರಭಾಕರ್ ಭಟ್ ಆಡಳಿತ ಮಂಡಳಿಯ ಅಧ್ಯಕ್ಷರು ಸಂಚಾಲಕರು ನಿರ್ದೇಶಕರು. ಕಾಲೇಜಿನ ಪ್ರಾಂಶುಪಾಲರಾದ ಡಾ.ಮಹೇಶ್ ಪ್ರಸನ್ನ ಕೆ ಅವರ ಮುಂದಾಳತ್ವದಲ್ಲಿ ಡೇಟಾ ಸೈನ್ಸ್ ವಿಭಾಗದ ಮುಖ್ಯಸ್ಥೆ ಪ್ರೊ ರೂಪ ಜಿಕೆ ಹಾಗೂ ಪ್ರಾಧ್ಯಾಪಕರ ಸಮರ್ಥ ಮಾರ್ಗದರ್ಶನದಲ್ಲಿ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿ ಇವರನ್ನು ಅಭಿನಂದಿಸಿದ್ದಾರೆ.

Share This Article