BJP ಸರ್ಕಾರ ಕರ್ನಾಟಕಕ್ಕೆ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ – ಡಿಕೆಶಿ

Public TV
2 Min Read

ಬೆಂಗಳೂರು: ಐಟಿ-ಬಿಟಿ (ITBT), ಕೆಂಪೇಗೌಡರ ನಾಡು ಅಂತಾ ಕರೆಯುತ್ತಿದ್ದ ಕರ್ನಾಟಕಕ್ಕೆ ಬಿಜೆಪಿ ಸರ್ಕಾರ `ಕಳಂಕಿತ ರಾಜ್ಯ’ ಅನ್ನೋ ಬಿರುದು ತಂದುಕೊಟ್ಟಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ (DK Shivakumar) ಕಿಡಿಕಾರಿದ್ದಾರೆ.

ಕರ್ನಾಟಕದಲ್ಲೂ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸುವ ನಿರ್ಧಾರ ಕುರಿತು ಕೆಪಿಸಿಸಿ (KPCC) ಕಚೇರಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರೊಂದಿಗೆ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬಂದಿದ್ದಕ್ಕೆ ಜನ ನನ್ನ ಸೋಲಿಸಿಬಿಟ್ರು: ಎಂಟಿಬಿ ನಾಗರಾಜ್

ಐಟಿ-ಬಿಟಿ, ಕೆಂಪೇಗೌಡರ ನಾಡು ಎಂದೇ ಕರೆಯುತ್ತಿದ್ದ ಕರ್ನಾಟಕಕ್ಕೆ ಕಳಂಕಿತ ರಾಜ್ಯ ಅನ್ನೋ ಬಿರುದನ್ನು ಬಿಜೆಪಿ ಸರ್ಕಾರ (BJP Government) ತಂದುಕೊಟ್ಟಿದೆ. ಪ್ರತಿಯೊಂದರಲ್ಲೂ ಭ್ರಷ್ಟ ರಾಜ್ಯ ಆಗಿದೆ. ಜನರು ತಮ್ಮ ಮತದಾನದ ಹಕ್ಕನ್ನಾದರೂ ಉಳಿಸಿಕೊಳ್ಳಬೇಕಿದೆ ಎಂದು ಕರೆ ನೀಡಿದ್ದಾರೆ. ಇದನ್ನೂ ಓದಿ: ವೈಷ್ಣವಿ ಹಾಗೂ ವಿದ್ಯಾಭರಣ್ ಪರಿಚಯವಾಗಿದ್ದು 2017ರಲ್ಲಿ: ಚಾಕೋಲೇಟ್ ಬಾಯ್ ಸ್ಟೋರಿ

ಕೇಂದ್ರ ಚುನಾವಣಾ ಆಯೋಗಕ್ಕೆ (Election Commission Of India) ವೋಟರ್ ಐಡಿ (Voter ID) ದುರುಪಯೋಗ ಮಾಡಿಕೊಂಡಿದ್ದಾರೆ ಅಂತ ದೆಹಲಿಯಲ್ಲಿ ದೂರು ನೀಡಿದ್ದೇವೆ. ಅದರಂತೆ ಉಪ ಆಯುಕ್ತರೇ ಇಲ್ಲಿ ಬಂದು, ಕ್ರಮ ತೆಗೆದುಕೊಂಡಿರುವುದು ಸ್ವಾಗತಾರ್ಹ. ಸರ್ಕಾರ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡಿರುವ ಕೆಲ ಅಧಿಕಾರಗಳನ್ನ ಅಮಾನತು ಮಾಡಿದ್ದಾರೆ. ಚುನಾವಣಾ ಆಯೋಗದ ಕ್ರಮವನ್ನ ಸ್ವಾಗತ ಮಾಡ್ತೇವೆ ಎಂದು ಹೇಳಿದ್ದಾರೆ.

ಅಕ್ರಮ ಡೇಟಾ ವಾಪಸ್ ಪಡೆಯಬೇಕು ಅಂತ ಹೇಳಿದ್ದಾರೆ. ಡೇಟಾ ಈಗಾಗಲೇ ಬಿಜೆಪಿ (BJP) ನಾಯಕನ ಬಳಿ ಇದೆ. ಇದೊಂದು ಕ್ರಿಮಿನಲ್ ಕೆಲಸ. ಬಿಜೆಪಿ ಕೆಲ ಶಾಸಕರು ಇದರಲ್ಲಿ ಶಾಮೀಲಾಗಿದ್ದಾರೆ. ಇದಕ್ಕೆ ದಾಖಲೆಗಳು ಕೂಡಾ ಇವೆ. ಇಂತಹ ಅಕ್ರಮ ಬೊಮ್ಮಾಯಿ (Basavaraj Bommai) ಸರ್ಕಾರದ ಅವಧಿಯಲ್ಲಿ ದೇಶದಲ್ಲೇ ಮೊದಲ ಬಾರಿಗೆ ಆಗಿದೆ. ಯಾವ ನಾಯಕರು ಯಾರ ಸಂಪರ್ಕದಲ್ಲಿದ್ದಾರೆ ಅಂತಾ ತನಿಖೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಅಂಕಪಟ್ಟಿ ಸೇರಿದಂತೆ ಎಲ್ಲ ಮಾಹಿತಿ ಕಳವು ಮಾಡಲಾಗಿದೆ. ಈಗ ವೋಟ್‌ಗಳನ್ನು ಕದ್ದು ದುರ್ಬಳಕೆ ಮಾಡಿಕೊಂಡಿದ್ದಾರೆ. ಕರ್ನಾಟಕಕ್ಕೆ ಕಳಂಕಿತ ರಾಜ್ಯ ಅಂತ ಹೆಸರು ಈ ಸರ್ಕಾರ ಕೊಟ್ಟಿದೆ. ರಾಜ್ಯದ ಜನರು ತಮ್ಮ ಮತದಾನದ ಹಕ್ಕು ಉಳಿಸಿಕೊಳ್ಳಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನ ಮೂರು ಕ್ಷೇತ್ರ ಮಾತ್ರವಲ್ಲ, 28 ಕ್ಷೇತ್ರ ಮತ್ತು ರಾಜ್ಯದ 224 ಕ್ಷೇತ್ರದ ಮತಗಳು ಕೂಡಾ ಸರಿ ಮಾಡೋ ಕೆಲಸ ಆಗಬೇಕು. ಅಕ್ರಮದಲ್ಲಿ ಭಾಗಿಯಾಗಿರೋ ರಾಜಕಾರಣಿ, ಅಧಿಕಾರಿಗಳು, ಚುನಾವಣಾ ಆಯೋಗದ ಅಧಿಕಾರಿಗಳ ಹೆಸರು ಬಹಿರಂಗ ಆಗಬೇಕು. ನಮ್ಮ ಕಾಲದಲ್ಲಿ ಅಕ್ರಮ ಆಗಿದ್ದರೆ ನಮ್ಮ ಮೇಲೂ ದೂರು ಕೊಡಿ, ಕ್ರಮ ಆಗಲಿ ಎಂದು ಆಗ್ರಹಿಸಿದ್ದಾರೆ.

ಅಕ್ರಮದಲ್ಲಿ ಬೊಮ್ಮಾಯಿ ಕಿಂಗ್‌ಪಿನ್: ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತನಾಡಿ, ವೋಟರ್ ಐಡಿ ಅಕ್ರಮದಲ್ಲಿ ಕಿಂಗ್‌ಪಿನ್ ಸಿಎಂ ಬೊಮ್ಮಾಯಿ ಆಗಿದ್ದಾರೆ. ಕೂಡಲೇ ಬೊಮ್ಮಾಯಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರದಲ್ಲಿ ಹೊಸ ಪಟ್ಟಿ ಆಗಬೇಕು. ನಿಷ್ಪಕ್ಷಪಾತವಾಗಿ ಚುನಾವಣಾ ಆಯೋಗ ತನಿಖೆ ಮಾಡಬೇಕು. ಜನರು ಯಾರನ್ನ ಬೇಕಾದ್ರೂ ಗೆಲ್ಲಿಸಲಿ. ಆದರೆ ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಅಕ್ರಮ ತನಿಖೆ ಆಗಬೇಕು. ಅಕ್ರಮ ಮಾಡಿರೋ ಫ್ರಾಡ್‌ಗಳಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *