ಕಲಬುರಗಿ: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಿಡಿಸಿರುವ ಮತಗಳ್ಳತನ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಆಳಂದ ಕ್ಷೇತ್ರದ ವೋಟ್ ಚೋರಿ ಪ್ರಕರಣ (Vote Chori Case) ಸಂಬಂಧ ಎಸ್‍ಐಟಿ (SIT) ತನಿಖೆ ಚುರುಕುಗೊಂಡಿದೆ. ಈ ಕೇಸ್ ಇದೀಗ ಆಳಂದ ಮಾಜಿ ಶಾಸಕರ ಮನೆವರೆಗೂ ಬಂದು ನಿಂತಿದೆ.
ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ (Subhash Guttedar) ಅವರಿಗೆ ಸೇರಿದ ಮನೆ, ಬಾರ್ & ರೆಸ್ಟೋರೆಂಟ್ ಮೇಲೆ ಎಸ್‍ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗುರುವಾರ ಎಸ್‍ಐಟಿ ಅಧಿಕಾರಿಗಳು ಕಲಬುರಗಿಯಲ್ಲಿ ಅಕ್ರಂ ಎಂಬಾತನ ಮನೆ ಮೇಲೆ ದಾಳಿ ಮಾಡಿದ್ದರು. ದಾಳಿ ವೇಳೆ ರಾಶಿ ರಾಶಿ ವೋಟರ್ ಐಡಿಗಳು ಪತ್ತೆ ಆಗಿದ್ದವು. 15 ಮೊಬೈಲ್, 7 ಲ್ಯಾಪ್ ಟಾಪ್ ಸೀಜ್ ಮಾಡಿದ್ದರು. ಇದನ್ನೂ ಓದಿ: ‘ವೋಟ್ ಚೋರಿ’ ಪ್ರಕರಣ | ಎಸ್ಐಟಿ ತೀವ್ರ ಶೋಧ – ಕಲಬುರಗಿಯಲ್ಲಿ ಸಾವಿರಾರು ವೋಟರ್ ಐಡಿಗಳು ಪತ್ತೆ
ಇದರ ಬೆನ್ನಲ್ಲೇ ಇಂದು (ಅ.17) ಮಾಜಿ ಶಾಸಕರ ಮನೆ ಮೇಲೂ ದಾಳಿ ನಡೆದಿದೆ. ಇತ್ತ ಆಳಂದದಲ್ಲಿನ ಸುಭಾಷ್ ಗುತ್ತೇದಾರ್ ಮನೆ ಇರೋ ಬಡಾವಣೆಯಲ್ಲಿ ರಾಶಿ ರಾಶಿ ದಾಖಲೆಗಳಿಗೆ ಬೆಂಕಿ ಇಡಲಾಗಿದೆ. ಸುಭಾಷ್ ಗುತ್ತೆದಾರ್ ಮನೆಯ ಸಮೀಪದಲ್ಲೆ ದಾಖಲೆಗಳನ್ನು ಸುಟ್ಟು ಹಾಕಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.
ಸುಟ್ಟಿರುವ ದಾಖಲೆಗಳು ಯಾವುವು? ಸುಟ್ಟು ಹಾಕಿದ್ಯಾರು? ಎಂಬುದರ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಇನ್ಫೋಸಿಸ್‌ನವ್ರು ಏನ್ ಬಹಳ ಬೃಹಸ್ಪತಿಗಳಾ?: ಜಾತಿಗಣತಿಯಲ್ಲಿ ಭಾಗವಹಿಸದ್ದಕ್ಕೆ ಸಿಎಂ ಟಾಂಗ್