Vote Chori | ಆಳಂದ ವೋಟ್‌ ಚೋರಿ ಪ್ರಕರಣ – SIT ಯಿಂದ ಮೊದಲ ಬಂಧನ

1 Min Read

– ಹಣ ಪಡೆದು ಮೊಬೈಲ್‌ ನಂಬರ್‌, OTP ಕೊಡ್ತಿದ್ದ ಕಾಲ್‌ಸೆಂಟರ್‌ ನಬೀ

ಬೆಂಗಳೂರು/ಕಲಬುರಗಿ: ಕಲಬುರಗಿಯ ಆಳಂದ ಕ್ಷೇತ್ರದಲ್ಲಿ (Aland constituency) ಮತಗಳ್ಳತನ ಆರೋಪ ಪ್ರಕರಣದಲ್ಲಿ ಮೊದಲ ಬಂಧನವಾಗಿದೆ.

- Advertisement -

ಮತ ಕಳವು ಪ್ರಕರಣದ ಜಾಡು ಹಿಡಿದು ಹೊರಟ ವಿಶೇಷ ತನಿಖಾ ತಂಡ (SIT) ಕಾಲ್ ಸೆಂಟರ್‌ನಲ್ಲಿ ಕೆಲಸ ಮಾಡ್ತಿದ್ದ ನಬೀ ಎಂಬಾತನ್ನ ಬಂಧಿಸಿದೆ. ಇದನ್ನೂ ಓದಿ: ಸುಪ್ರೀಂ ಕೋರ್ಟ್ ತೀರ್ಪು ಕರ್ನಾಟಕಕ್ಕೆ ಮಾತ್ರವಲ್ಲ ತಮಿಳುನಾಡು, ಪುದುಚೆರಿಗೂ ಸಂದ ಜಯ: ಡಿ.ಕೆ.ಶಿವಕುಮಾರ್

- Advertisement -

- Advertisement -

ಕಾಲ್‌ಸೆಂಟರ್ ಅಲ್ಲಿ ಕೆಲಸ ಮಾಡುತ್ತಾ ಇದ್ದ ನಭೀ, ಮತದಾರರ ಹೆಸರು ಡಿಲೀಟ್ ಮಾಡೋದಕ್ಕೆ ಓಟಿಪಿ ನೀಡ್ತಿದ್ದ. ಈ ಆರೋಪಿ ಮುಖಾಂತರವೇ ಓಟಿಪಿ ಪಡೆದುಕೊಂಡು ಡಿಲೀಟ್ ಪ್ರಕ್ರಿಯೆ ಮಾಡಲಾಗುತಿತ್ತು. ಹಣ ಪಡೆದು ಮೊಬೈಲ್ ನಂಬರ್ ನೀಡಿ ಒಟಿಪಿ ಕೂಡ ನೀಡುತ್ತಾ ಇದ್ದ ಸಂಬಂಧ ನಬೀಯನ್ನ ಬಂಧಿಸಿ ವಿಚಾರಣೆ ನಡೆಸಲಾಗ್ತಿದೆ.

- Advertisement -

ಈಗಾಗಲೇ ಪ್ರಕರಣ ಸಂಬಂಧ ಹಲವರಿಗೆ ಬಿಸಿ ಮುಟ್ಟಿಸಿದ್ದು, ತನಿಖೆಯನ್ನ ಚುರುಕುಗೊಳಿಸಿದ್ದಾರೆ. ಈಗ ಪ್ರಕರಣದ ಆರೋಪಿಯ ಬಂಧನ ಬಳಿಕ ಇದರ ಹಿಂದಿನ ಕೈವಾಡ ಯಾರದ್ದು? ಮತಗಳವಿನಲ್ಲಿ ಭಾಗಿಯಾದವರಿಗೆ ಬಲೆ ಬೀಸಿದೆ. ಇದನ್ನೂ ಓದಿ: ಮುಧೋಳ | ಭುಗಿಲೆದ್ದ ರೈತರ ಆಕ್ರೋಶ – 50ಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳಿಗೆ ಬೆಂಕಿ, ಸಾವಿರಾರು ಟನ್‌ ಕಬ್ಬು ಭಸ್ಮ!

Share This Article