ಭಾರತೀಯ ಪ್ರಜೆಯಾಗದೇ ಮತದಾರರ ಪಟ್ಟಿಯಲ್ಲಿ ಸೋನಿಯ ಗಾಂಧಿ ಸೇರ್ಪಡೆ; ಮತಗಳವು ಆರೋಪಕ್ಕೆ ಬಿಜೆಪಿ ಪ್ರತ್ಯಾರೋಪ

Public TV
2 Min Read

ನವದೆಹಲಿ: ಕಾಂಗ್ರೆಸ್ ಮಾಜಿ ಮುಖ್ಯಸ್ಥೆ ಸೋನಿಯಾ ಗಾಂಧಿ 1980 ರ ದಶಕದಲ್ಲಿ ಚುನಾವಣಾ ಕಾನೂನನ್ನು ಉಲ್ಲಂಘಿಸಿದ್ದಾರೆ. ಅಧಿಕೃತವಾಗಿ ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಆರೋಪಿಸಿದ್ದಾರೆ.

ಬಿಹಾರದಲ್ಲಿ ಮತದಾರರ ವಿಶೇಷ ತೀವ್ರ ಪರಿಷ್ಕರಣೆ ನೆಪದಲ್ಲಿ ಅಕ್ರಮ ನಡೆಸಲಾಗುತ್ತಿದೆ. ಕರ್ನಾಟಕದಲ್ಲಿ ಮತಗಳವು ಮಾಡಲಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮತ್ತು ಬಿಜೆಪಿ ವಿರುದ್ಧ ಆರೋಪ ಮಾಡುತ್ತಿರುವ ಕಾಂಗ್ರೆಸ್‌ಗೆ ಈ ಮೂಲಕ ಬಿಜೆಪಿ ತಿರುಗೇಟು ನೀಡಿದೆ. ಇದನ್ನೂ ಓದಿ: `ಮಿಂತಾ ದೇವಿ’ ಟಿ ಶರ್ಟ್ ಹಾಕಿ ಪ್ರತಿಭಟನೆ – 124 ವರ್ಷದ ವೋಟರ್ ಪ್ರತ್ಯಕ್ಷ; ರಾಹುಲ್‌, ಪ್ರಿಯಾಂಕಾಗೆ ತರಾಟೆ

ಈ ಬಗ್ಗೆ ಎಕ್ಸ್ ಖಾತೆಯಲ್ಲಿ 1980 ರ ಮತದಾರರ ಪಟ್ಟಿಯ ಸಾರದ ನಕಲು ಪ್ರತಿಯನ್ನು ಪೋಸ್ಟ್ ಮಾಡಿರುವ ಅವರು, ಸೋನಿಯಾ ಅಧಿಕೃತವಾಗಿ ಭಾರತೀಯ ನಾಗರಿಕರಾಗುವ ಮೂರು ವರ್ಷಗಳ ಮೊದಲು ಮತದಾರರ ಪಟ್ಟಿಯಲ್ಲಿ ಅವರ ಹೆಸರು ಕಾಣಿಸಿಕೊಂಡಿದೆ. 1950 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 16 ರ ಪ್ರಕಾರ, ಭಾರತದ ನಾಗರಿಕರಲ್ಲದ ವ್ಯಕ್ತಿಯನ್ನು ಮತದಾರರ ಪಟ್ಟಿಯಲ್ಲಿ ನೋಂದಾಯಿಸಲು ಅನರ್ಹಗೊಳಿಸಲಾಗುತ್ತದೆ

ಸೋನಿಯಗಾಂಧಿ ಅವರು ಭಾರತೀಯ ಪೌರತ್ವ ಪಡೆಯುವ ಮೂರು ವರ್ಷಗಳ ಮೊದಲು ಮತ್ತು ಅವರು ಇನ್ನೂ ಇಟಾಲಿಯನ್ ಪೌರತ್ವವನ್ನು ಹೊಂದಿದ್ದರು. ಆ ಸಮಯದಲ್ಲಿ, ಗಾಂಧಿ ಕುಟುಂಬವು ಪ್ರಧಾನಿ ಇಂದಿರಾ ಗಾಂಧಿಯವರ ಅಧಿಕೃತ ನಿವಾಸವಾದ 1, ಸಫ್ದರ್ಜಂಗ್ ರಸ್ತೆಯಲ್ಲಿ ವಾಸಿಸುತ್ತಿದ್ದರು. ಅಲ್ಲಿಯವರೆಗೆ, ಆ ವಿಳಾಸದಲ್ಲಿ ನೋಂದಾಯಿಸಲಾದ ಮತದಾರರು ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಸಂಜಯ್ ಗಾಂಧಿ ಮತ್ತು ಮೇನಕಾ ಗಾಂಧಿಯಾಗಿದ್ದರು. ಇದನ್ನೂ ಓದಿ: ಎರಡೆರಡು ವೋಟರ್ ಐಡಿ – ಬಿಹಾರ ಡಿಸಿಎಂಗೆ ಚುನಾವಣಾ ಆಯೋಗ ನೋಟಿಸ್

1980 ರಲ್ಲಿ ನವದೆಹಲಿ ಸಂಸದೀಯ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಷ್ಕರಿಸಲಾಯಿತು ಮತ್ತು ಸೋನಿಯಾ ಅವರ ಹೆಸರನ್ನು ಪಟ್ಟಿಗೆ ಸೇರಿಸಲಾಯಿತು. ಇದರ ಬೆನ್ನಲ್ಲೇ 1982 ರಲ್ಲಿ ವ್ಯಾಪಕ ಆಕ್ರೋಶದ ನಂತರ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಯಿತು. ಆದರೆ 1983 ರಲ್ಲಿ ಮಾತ್ರ ಮತ್ತೆ ಸೇರಿಸಲಾಯಿತು. ಆ ವರ್ಷ ಮತದಾರರ ಪಟ್ಟಿಯ ಹೊಸ ಪರಿಷ್ಕರಣೆಯಲ್ಲಿ, ಸೋನಿಯಾ ಗಾಂಧಿಯವರ ಹೆಸರನ್ನು ಮತಗಟ್ಟೆ 140 ರಲ್ಲಿ ಕ್ರಮ ಸಂಖ್ಯೆ 236 ರಲ್ಲಿ ಪಟ್ಟಿ ಮಾಡಲಾಗಿದೆ.

ಸೋನಿಯ ಗಾಂಧಿ ಚುನಾವಣಾ ನೋಂದಣಿಗೆ ಅರ್ಹತಾ ದಿನಾಂಕ 1983ರ ಜ.1 ಇದ್ದು, ಅವರು 1983ರ ಏ.30 ರಂದು ಮಾತ್ರ ಭಾರತೀಯ ಪೌರತ್ವ ನೀಡಲಾಯಿತು. ಸೋನಿಯಾ ಗಾಂಧಿಯವರ ಹೆಸರು ಮೂಲಭೂತ ಪೌರತ್ವ ಅವಶ್ಯಕತೆಗಳನ್ನು ಪೂರೈಸದೆ ಎರಡು ಬಾರಿ ಮತದಾರರ ಪಟ್ಟಿಯಲ್ಲಿ ಸೇರಿದೆ. ರಾಜೀವ್ ಗಾಂಧಿಯವರನ್ನು ಮದುವೆಯಾದ ನಂತರವೂ ಅವರು ಭಾರತೀಯ ಪೌರತ್ವವನ್ನು ಸ್ವೀಕರಿಸಲು 15 ವರ್ಷಗಳನ್ನು ಏಕೆ ತೆಗೆದುಕೊಂಡರು ಎಂದು ನಾವು ಕೇಳುತ್ತಿಲ್ಲ ಬದಲಿಗೆ ಅವರು ಚುನಾವಣಾ ದುಷ್ಕೃತ್ಯವನ್ನು ಮಾಡಿದ್ದಾರೆ ಎಂದು ಮಾಳವೀಯ ಟೀಕಿಸಿದರು.

Share This Article