ದೃಷ್ಟಿ ಮಂಜಾಗ್ತಿದೆ, ಕೈ-ಕಾಲು ಸ್ವಾಧೀನ ಕಳೆದುಕೊಳ್ತಿದೆ – ಪುಟಿನ್‌ ಆರೋಗ್ಯದಲ್ಲಿ ಬಿಗ್‌ ಅಪ್ಡೇಟ್ಸ್‌

Public TV
1 Min Read

ಮಾಸ್ಕೋ: ಕಳೆದ ವರ್ಷದಿಂದ ಉಕ್ರೇನ್‌ ವಿರುದ್ಧ ಯುದ್ಧ (Russia Ukraine War) ಸಾರಿದಾಗಿನಿಂದಲೂ ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ (Vladimir Putin) ಆರೋಗ್ಯ ವಿಚಾರ ನಿರಂತರ ಚರ್ಚೆಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವರದಿ ಬಿಡುಗಡೆಯಾಗಿದ್ದು, ಪುಟಿನ್‌ ಆರೋಗ್ಯ ಮತ್ತಷ್ಟು ಕ್ಷೀಣಿಸಿದೆ ಎಂದು ಹೇಳಲಾಗಿದೆ.

ಪುಟಿನ್‌ಗೆ ಅತಿಯಾದ ತಲೆನೋವು, ದೃಷ್ಟಿ ಮಂಜಾಗುವುದು ಹಾಗೂ ನಾಲಿಗೆಯಲ್ಲಿ ಮರಗಟ್ಟುವಿಕೆ ಉಂಟಾಗುತ್ತಿದೆ ಎಂದು ವೈದ್ಯರು (Doctors) ಹೇಳಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಇದನ್ನೂ ಓದಿ: ಕಣ್ಣು ಮಂಕಾಗ್ತಿದೆ, ಬೆರಳು ಅಲುಗಾಡ್ತಿದೆ – ಪುಟಿನ್ ಬದುಕಿರೋದು ಇನ್ನೂ ಮೂರೇ ವರ್ಷ!

ಪುಟಿನ್‌ ಈಗಾಗಲೇ ಬಲಗೈ ಮತ್ತು ಬಲಗಾಲಿನ ಭಾಗಶಃ ಸ್ವಾಧೀನ ಕಳೆದುಕೊಳ್ಳುತ್ತಿದ್ದಾರೆ, ಅವರಿಗೆ ತುರ್ತು ವೈದ್ಯಕೀಯ ಆರೈಕೆ ಅಗತ್ಯವಿದೆ ಎಂದು ಹೇಳಿದ್ದಾರೆ. ಆದ್ರೆ ಕ್ರೆಮ್ಲಿನ್‌ ಮತ್ತು ರಷ್ಯಾದ ಆರೋಗ್ಯ ಸಚಿವರು ಪುಟಿನ್‌ ಆರೋಗ್ಯವಾಗಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: ಅಫ್ಘಾನಿಸ್ತಾನದಲ್ಲಿ ಉದ್ಯಾನವನ, ರೆಸ್ಟೊರೆಂಟ್‌ಗಳಿಗೆ ಕುಟುಂಬ, ಮಹಿಳೆಯರೊಂದಿಗೆ ಹೋಗೋದು ಬ್ಯಾನ್

ಈ ಹಿಂದೆಯೇ ವೈದ್ಯರು ಕೌನ್ಸಿಲಿಂಗ್‌ ಮಾಡಿ‌, ಔಷಧಿ ತೆಗೆದುಕೊಂಡು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದರು. ಆದರೆ ಪುಟಿನ್‌ ವಿಶ್ರಾಂತಿ ಪಡೆಯಲು ನಿರಾಕರಿಸಿ, ಉಕ್ರೇನ್‌ ವಿರುದ್ಧ ಯುದ್ಧದ ಬೆಳವಣಿಗೆಯಲ್ಲಿ ತೊಡಗಿಕೊಂಡರು. ಅವರು ಕೊಂಚ ಸುಧಾರಿಸಿಕೊಳ್ಳುತ್ತಿದ್ದಂತೆಯೇ ವೈದ್ಯರ ಆರೈಕೆ ಬಗ್ಗೆ ನಿರ್ಲಕ್ಷ್ಯ ತೋರಿದರು ಎಂದು‌ ತಿಳಿಸಿದ್ದಾರೆ.

ಪುಟಿನ್‌ ಕ್ಯಾನ್ಸರ್‌ ಮತ್ತು ಪಾರ್ಕಿನ್ಸನ್‌ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ರಷ್ಯಾದ ಬೇಹುಗಾರಿಕಾ ಸಂಸ್ಥೆ ಎಫ್‌ಎಸ್‌ಬಿ ಕಳೆದ ವರ್ಷವೇ ಹೇಳಿತ್ತು. ಅಲ್ಲದೇ ಹೆಚ್ಚೆಂದರೆ ಪುಟಿನ್‌ ಇನ್ನು 3 ವರ್ಷಗಳ ಕಾಲ ಬದುಕಬಹುದು ಎಂದು ತಿಳಿಸಿತ್ತು.

Share This Article