ಮಿತ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ಹರ್ಷಿಸುತ್ತೇವೆ: ಪುಟಿನ್ ಆಹ್ವಾನ

Public TV
1 Min Read

ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಆಹ್ವಾನಿಸಿದ್ದಾರೆ.

ವಿದೇಶಾಂಗ ಸಚಿವ ಎಸ್.ಜೈಶಂಕರ್ (S. Jaishankar) ಅವರು ಸದ್ಯ ರಷ್ಯಾ ಪ್ರವಾಸದಲ್ಲಿದ್ದಾರೆ. ಪುಟಿನ್ ಅವರು ತಮ್ಮ ಅಧಿಕೃತ ನಿವಾಸದಲ್ಲಿ ಜೈಶಂಕರ್ ಅವರ ಜೊತೆ ಮಾತನಾಡುತ್ತಾ, ನಮ್ಮ ಆತ್ಮೀಯ ಮಿತ್ರರಾಗಿರುವ ನರೇಂದ್ರ ಮೋದಿಯವರನ್ನು ರಷ್ಯಾದಲ್ಲಿ ನೋಡಲು ನಾವು ಸಂತೋಷ ಪಡುತ್ತೇವೆ ಎಂದು ಹೇಳಿದ್ದಾರೆ.

ನಮಗೆ ಪ್ರಧಾನಿ ಮೋದಿಯವರ (Narendra Modi) ನಿಲುವು ತಿಳಿದಿದೆ. ಅಲ್ಲದೆ ಈ ಬಗ್ಗೆ ಹಲವು ಬಾರಿ ಮಾತುಕತೆ ನಡೆಸಿದ್ದೇವೆ. ನಾನು ಅವರಿಗೆ ಉಕ್ರೇನ್‍ನ ಸ್ಥಿತಿಗತಿಯ ಬಗ್ಗೆ ವಿವರಿಸಿದ್ದೇನೆ. ಸಂಘರ್ಷವಿಲ್ಲದೆ ಶಾಂತಿಯ ಮೂಲಕ ಈ ಸಮಸ್ಯೆಯನ್ನು ಪರಿಹರಿಸಲು ಅವರ ಪ್ರಯತ್ನದ ಬಗ್ಗೆ ನನಗೆ ತಿಳಿದಿದೆ ಎಂದು ಪುಟಿನ್ ಹೇಳಿದರು. ಇದನ್ನೂ ಓದಿ: ಶಸ್ತ್ರಚಿಕಿತ್ಸೆ ವೇಳೆ ವೃದ್ಧೆಯ ತಲೆಗೆ 3 ಬಾರಿ ಪಂಚ್‌ ಕೊಟ್ಟ ವೈದ್ಯ- ಮುಂದೇನಾಯ್ತು?

ಮೋದಿಯವರಿಗೆ ನನ್ನ ಶುಭಾಶಯಗಳನ್ನು ತಿಳಿಸಿ. ರಷ್ಯಾದಲ್ಲಿ ಭೇಟಿಯಾಗಲು ನಾವು ಕಾಯುತ್ತಿದ್ದೇವೆ ಎಂದು ದಯವಿಟ್ಟು ಅವರಿಗೆ ತಿಳಿಸಿ. ಹಾಗೆಯೇ ಭಾರತದಲ್ಲಿರುವ ನಮ್ಮ ಸ್ನೇಹಿತರಿಗೆ ನಾವು ಯಶಸ್ಸನ್ನು ಬಯಸುತ್ತೇವೆ ಎಂದು ಪುಟಿನ್ ಅವರು ಜೈಶಂಕರ್ ಗೆ ಹೇಳಿದರು.

ಮಾತುಕತೆಯ ನಂತರ ಸಚಿವ ಲಾವ್ರೊವ್ ಅವರೊಂದಿಗೆ ಜಂಟಿ ಮಾಧ್ಯಮದಲ್ಲಿ ಕಾಣಿಸಿಕೊಂಡ ಜೈಶಂಕರ್, ಮುಂದಿನ ವರ್ಷ ವಾರ್ಷಿಕ ಶೃಂಗಸಭೆಗಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಪುಟಿನ್ ಭೇಟಿಯಾಗುತ್ತಾರೆ ಎಂಬ ವಿಶ್ವಾಸವಿದೆ ಎಂದರು.

Share This Article