ಎಕ್ಸಿಟ್ ಪೋಲ್ ಟ್ರೋಲ್ ಫೋಟೋ ಹಂಚಿಕೊಂಡು ‘ಐಶ್’ ನೆನೆದ ವಿವೇಕ್ ಒಬೇರಾಯ್

Public TV
1 Min Read

ಮುಂಬೈ: ಭಾನುವಾರ ಲೋಕಸಮರದ ಚುನಾವಣೋತ್ತರ ಸಮೀಕ್ಷೆಗಳು ಹೊರ ಬಂದಿವೆ. ಎಕ್ಸಿಟ್ ಪೋಲ್ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್, ಮೀಮ್ಸ್ ಗಳು ಸಹ ಹರಿದಾಡುತ್ತಿವೆ. ಈ ಟ್ರೋಲ್ ಗಳ ಮೂಲಕವೇ ರಾಜಕೀಯ ನಾಯಕರು ಒಬ್ಬರನ್ನೊಬ್ಬರ ಕಾಲೆಳೆಯುತ್ತಿದ್ದಾರೆ. ಈ ನಡುವೆ ಎಕ್ಸಿಟ್ ಪೋಲ್ ಟ್ರೋಲ್ ತನ್ನ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿರುವ ನಟ ವಿವೇಕ್ ಒಬೇರಾಯ್ ತಮ್ಮ ಮಾಜಿ ಗೆಳತಿ ಐಶ್ವರ್ಯಾ ರೈ ನೆನೆಪು ಮಾಡಿಕೊಂಡಿದ್ದಾರೆ.

ಮಾಜಿ ವಿಶ್ವ ಸುಂದರಿ, ಬಿಗ್ ಬಿ ಮನೆಯ ಮುದ್ದು ಸೊಸೆ ಐಶ್ವರ್ಯಾ ರೈ ಹೆಸರು ಹಲವು ನಟರೊಂದಿಗೆ ತಳಕು ಹಾಕಿಕೊಂಡಿತ್ತು. ಯಶಸ್ವಿ ಸಿನಿಮಾಗಳನ್ನು ನೀಡುತ್ತಿದ್ದ ಐಶ್ವರ್ಯಾ ರೈ ಹೆಸರು ಮೊದಲಿಗೆ ಬಾಲಿವುಡ್ ಬಾಯಿಜಾನ್ ಸಲ್ಮಾನ್ ಖಾನ್ ಕೇಳಿ ಬಂದಿತ್ತು. ತದನಂತರ ವಿವೇಕ್ ಒಬೇರಾಯ್ ಜೊತೆಗೆ ಕೇಳಿ ಬಂದಿತ್ತು. ಎಲ್ಲ ಗಾಸಿಪ್ ಗಳ ನಡುವೆ ಅಭಿಷೇಕ್ ಬಚ್ಚನ್ ರನ್ನು ವರಿಸುವ ಮೂಲಕ ಎಲ್ಲ ಅಂತೆ ಕಂತೆಗಳಿಗೆ ತೆರೆ ಎಳೆದಿದ್ದರು.

ಸಲ್ಮಾನ್ ಮತ್ತು ಐಶ್ವರ್ಯ ಜೊತೆಗಿನ ಫೋಟೋ ಹಾಕಿ Opinion Poll, ವಿವೇಕ್-ಐಶ್ವರ್ಯಾ ಫೋಟೋಗೆ Exit Poll ಕೊನೆಗೆ ಅಭಿಷೇಕ್ ಬಚ್ಚನ್, ಐಶ್ವರ್ಯ ಮತ್ತು ಆರಾಧ್ಯ ಜೊತೆಗಿನ ಫೋಟೋಗೆ Result ಅಂತಾ ಬರೆಯಲಾಗಿದೆ. ಈ ಮೂರು ಫೋಟೋಗಳನ್ನು ಸೇರಿಸಿರುವ ಟ್ರೋಲ್ ವಿವೇಕ್ ಹಂಚಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.

https://twitter.com/vivekoberoi/status/1130380916142907392

Share This Article
Leave a Comment

Leave a Reply

Your email address will not be published. Required fields are marked *