ವಿಶ್ವ ಹಿಂದೂ ಪರಿಷತ್‍ಗೆ ತುಂಬಿತು 60 ವರ್ಷ- ಉಡುಪಿ ಶ್ರೀಕೃಷ್ಣನ ನಗರ ಕೇಸರಿಮಯ

Public TV
2 Min Read

ಉಡುಪಿ: ಕರಾವಳಿ ಜಿಲ್ಲೆ ಉಡುಪಿ (Udupi) ಕೇಸರಿಮಯವಾಗಿದೆ. ಪ್ರಮುಖ ರಸ್ತೆಗಳು ಬ್ಯಾನರ್ ಬಂಟಿಂಗ್ಸ್ ಪತಾಕೆಗಳಿಂದ ರಾರಾಜಿಸುತ್ತಿದೆ. ವಿಶ್ವ ಹಿಂದೂ ಪರಿಷತ್ (Vishwa Hindu Parishad) ಸಂಘಟನೆಗೆ 60 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೃಹತ್ ಪಾದಯಾತ್ರೆ ಮತ್ತು ಸಮಾವೇಶಕ್ಕೆ ಕೃಷ್ಣನ ನಗರಿ ಸಜ್ಜಾಗಿದೆ.

ದೇಶದ ಅತಿ ದೊಡ್ಡ ಸಂಘಟನೆ ವಿಶ್ವ ಹಿಂದೂ ಪರಿಷತ್‍ಗೆ 60 ವರ್ಷ ತುಂಬಿದೆ. ಹೀಗಾಗಿ ದೇಶಾದ್ಯಂತ ಹಿಂದೂ ಸಮಾಜೋತ್ಸವ, ಮೆರವಣಿಗೆ ಜಾಥಾಗಳು ನಡೆಯುತ್ತಿದೆ. ಕರ್ನಾಟಕದಲ್ಲಿ 10 ಬೃಹತ್ ಸಮಾವೇಶಗಳನ್ನ ಮಾಡಲು ವಿಶ್ವ ಹಿಂದೂ ಪರಿಷತ್ ನಿರ್ಧರಿಸಿದೆ. ಈ ಪೈಕಿ ಉಡುಪಿಯಲ್ಲಿ ಹಿಂದೂ ಸಮಾಜೋತ್ಸವ ನಡೆಯಲಿದೆ. ವಿಶ್ವ ಹಿಂದೂ ಪರಿಷತ್ ಭಜರಂಗದಳ ಈ ಕಾರ್ಯಕ್ರಮವನ್ನು ಆಯೋಜಿಸಿದೆ. ಶೌರ್ಯ ಜಾಗರಣಾ ಹೆಸರಿನಲ್ಲಿ ಜಿಲ್ಲೆಯ ಸುಮಾರು 50,000 ಜನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: Bigg Boss: ಟೀಕೆ, ಟ್ರೋಲ್‌ಗಳ ಬಗ್ಗೆ ಮೌನ ಮುರಿದ ಡ್ರೋನ್ ಪ್ರತಾಪ್

ಉಡುಪಿಯ ಜೋಡುಕಟ್ಟೆಯಿಂದ ಆರಂಭವಾಗಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಸಾಗಿ ಎಂಜಿಎಂ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಭೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲಾ ಪೊಲೀಸರು ಕಾನೂನು ವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಿದ್ದಾರೆ. ಶಿವಮೊಗ್ಗ ಘಟನೆ ನಂತರ ಹಲವಾರು ಮುನ್ನೆಚ್ಚರಿಕೆ ಕ್ರಮವನ್ನು ವಹಿಸಲಾಗಿದೆ. ಅಧಿಕಾರಿ ಸಿಬ್ಬಂದಿ ಸೇರಿ 200ಕ್ಕೂ ಹೆಚ್ಚು ಪೊಲೀಸರ ನಿಯೋಜನೆಯಾಗಲಿದೆ. 2 ಕೆಎಸ್‍ಆರ್‍ಪಿ, 5 ಡಿಎಆರ್ ಪೊಲೀಸರನ್ನು ಕರೆಸಿಕೊಳ್ಳಲಾಗಿದೆ. ಮುನ್ನೆಚ್ಚರಿಕೆ ಕ್ರಮ ತೆಗೆದುಕೊಂಡಿದ್ದೇವೆ, ಸುಪ್ರೀಂಕೋರ್ಟ್ ಆದೇಶಗಳನ್ನು ಜಾರಿ ಮಾಡಿದ್ದೇವೆ. ಆಯೋಜಕರು ಮುಚ್ಚಳಿಕೆ ಬರೆದುಕೊಟ್ಟಿದ್ದಾರೆ ಎಂದು ಎಸ್.ಪಿ ಅರುಣ್ ಹೇಳಿದ್ದಾರೆ. ಇದನ್ನೂ ಓದಿ: ಹಮಾಸ್ ಉಗ್ರರ ನಡೆಗೆ ಮೋದಿ ಖಂಡನೆ- ಇಸ್ರೇಲ್ ಪರ ನಿಂತ ಭಾರತ

ಅನಿವಾರ್ಯ ಕಾರಣದಿಂದ ಬಾಗೇಶ್ವರ ಮಹಾರಾಜ್ ಗೈರಾಗಲಿದ್ದು, ಮಹಾಮಂಡಲೇಶ್ವರದ ಅಖಿಲೇಶ ದಾಸ್ ಜೀ ಮಹಾರಾಜ್ ಸಮಾರಂಭದಲ್ಲಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪೇಜಾವರ ಮತ್ತು ಅದಮಾರು ಸ್ವಾಮೀಜಿಗಳು, ದಕ್ಷಿಣ ಕನ್ನಡ ಉಡುಪಿ ಜಿಲ್ಲೆಯ ಸಂಘಟನೆಯ ಮುಖಂಡರುಗಳು ಉಪಸ್ಥಿತರಿರುತ್ತಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್