ನಟ ವಿಷ್ಣುವರ್ಧನ್ ಪುತ್ಥಳಿ ತಯಾರಿಸಿದ್ದು ಅರುಣ್ ಯೋಗಿರಾಜ್

Public TV
1 Min Read

ರಾಮ್ ಲಲ್ಲಾ ಮೂರ್ತಿ (Ram Lalla)ಮಾಡುವ ಮೂಲಕ ಜಗತ್ ಪ್ರಸಿದ್ಧಿ ಪಡೆದಿರುವ ಮೈಸೂರಿನ ಅರುಣ್ ಯೋಗಿರಾಜ್ (Arun Yogiraj)ಗೂ ಸಿನಿಮಾ ರಂಗಕ್ಕೂ ನಂಟಿದೆ. ಮೈಸೂರಿನ ವಿಷ್ಣುವರ್ಧನ್ (Vishnuvardhan) ಸ್ಮಾರಕದಲ್ಲಿ ತಲೆಯೆತ್ತಿ ನಿಂತಿರುವ ಡಾ.ವಿಷ್ಣುವರ್ಧನ್ ಅವರ ಪುತ್ಥಳಿಯನ್ನು (Putthali) ತಯಾರು ಮಾಡಿದ್ದು ಇದೇ ಅರುಣ್ ಯೋಗಿರಾಜ್.

 

ಅರುಣ್ ಯೋಗಿರಾಜ್ ಸ್ಥಳೀಯ ಮಟ್ಟದಲ್ಲಿ ಶಿಲ್ಪಿಕಾರರಾಗಿ ಗುರುತಿಸಿಕೊಂಡಿದ್ದರೂ, ಡಾ.ವಿಷ್ಣುವರ್ಧನ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವ ಮೂಲಕ ಸಿನಿಮಾ ರಂಗಕ್ಕೂ ಪರಿಚಿತ ಆದರು. ಅದರಲ್ಲೂ ಸ್ಮಾರಕದ ಉದ್ಘಾಟನೆ ದಿನದಂದು ವಿಷ್ಣುವರ್ಧನ್ ಪುತ್ಥಳಿ ಹಾಗೂ ಭಾರತಿ ವಿಷ್ಣುವರ್ಧನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದ್ದರು.

 

ಇದೀಗ ಅರುಣ್ ಯೋಗಿರಾಜ್ ನ್ಯಾಷಿನಲ್ ಸ್ಟಾರ್ ಆಗಿ ಬದಲಾಗಿದ್ದಾರೆ. ಇವರದ್ದೇ ಕಲ್ಪನೆಯಲ್ಲಿ ತಯಾರಾದ ರಾಮ್ ಲಲ್ಲಾ ಮೂರ್ತಿಯು ಆಯ್ಕೆಯಾದ ನಂತರ ಅರುಣ್ ಸಖತ್ ಫೇಮಸ್ ಆಗಿದ್ದಾರೆ. ಇವರ ಕಲ್ಪನೆಯಲ್ಲಿ ಅರಳಿದ ಪ್ರತಿಮೆಗಳು ಇದೀ ಒಂದೊಂದೇ ಬೆಳಕಿಗೆ ಬರುತ್ತಿವೆ.

 

ನಿನ್ನೆಯಷ್ಟೇ ಅರುಣ್ ಯೋಗಿರಾಜ್ ಬೆಂಗಳೂರಿಗೆ ಬಂದಿಳಿದ್ದಾರೆ. ಜೊತೆಗೆ ಪಬ್ಲಿಕ್ ಟಿವಿ ಮುಖ್ಯಸ್ಥ ಹೆಚ್.ಆರ್. ರಂಗನಾಥ್ ಅವರ ಜೊತೆ ಎಕ್ಸ್ ಕ್ಲ್ಯೂಸಿವ್ ಆಗಿ ಸಂದರ್ಶನಕ್ಕೆ ಕೂತಿದ್ದಾರೆ. ಸಾಕಷ್ಟು ವಿಚಾರಗಳನ್ನೂ ಅವರು ಹಂಚಿಕೊಂಡಿದ್ದಾರೆ.

Share This Article