ಸಾಹಸ ಸಿಂಹ ಡಾ.ವಿಷ್ಣುವರ್ಧನ್ (Dr Vishnuvardhan) ಸಮಾಧಿ ನೆಲಸಮ ಹಿನ್ನೆಲೆ ನಟ ವಿಜಯ್ ರಾಘವೇಂದ್ರ (Vijay Raghavendra) ಪ್ರತಿಕ್ರಿಯೆ ನೀಡಿದ್ದಾರೆ. ಮೇರು ನಟನ ಸಮಾಧಿ ರಾತ್ರೋ ರಾತ್ರಿ ತೆರವು ಮಾಡಿದ್ದು ಎಲ್ಲರಿಗೂ ಬೇಸರ ತಂದಿದೆ. ಈಗ ಆಗೋಗಿದೆ, ಅದಕ್ಕಾಗಿ ಏನು ಮಾಡಬೇಕು, ಕಾನೂನು ಬದ್ಧವಾಗಿ ಬಹಳ ದೊಡ್ಡ ಜವಾಬ್ದಾರಿ ಹೊತ್ತಿರೋರು ಹಾಗೂ ಒಳ್ಳೆಯ ಮನಸ್ಸಿರೋರು ಕೆಲಸ ಮಾಡ್ತಿದಾರೆ. ಸಿನಿಮಾ ಇಂಡಸ್ಟ್ರಿ ಬೆಳಸಿದವರು ವಿಷ್ಣುವರ್ಧನ್ ಸರ್. ಚಿತ್ರರಂಗಕ್ಕೆ ಕೊಡುಗೆ ಕೊಟ್ಟಿರುವ ಹಿರಿಯ ಕಲಾವಿದರಿಗೆ ಹೀಗಾದಾಗ ಏನು ಹೇಳಬೇಕು ಗೊತ್ತಾಗಲ್ಲ ಎಂದಿದ್ದಾರೆ.
ವಿಷ್ಣುವರ್ಧನ್ ಅವರು ಬಹಳ ಜನರಿಗೆ ಆರಾಧ್ಯದೈವ. ಇವಾಗ ಆಗೋಗಿದೆ. ನಮ್ಮ ಹಿರಿಯರು ಸೇರಿ, ಮುಂದೆ ನಿಂತು ಅದನ್ನ ಸರಿಪಡಿಸುವ ಕೆಲಸ ಮಾಡಬೇಕು. ಎಂದು ತಮ್ಮ ರಿಪ್ಪನ್ ಸ್ವಾಮಿ ಸಿನಿಮಾದ ಟ್ರೈಲರ್ ಲಾಂಚ್ ಇವೆಂಟ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈಗಾಗಲೇ ಕಿಚ್ಚ ಸುದೀಪ್ ಅವರು ವಿಷ್ಣುವರ್ಧನ್ ಅವರ ಅಭಿಮಾನಿಗಳಿಗಾಗಿ ದರ್ಶನ ಕೇಂದ್ರ ಮಾಡಲು ಕೆಂಗೇರಿ ಬಳಿ ಜಾಗವನ್ನು ಖರೀದಿಸಿದ್ದಾರಂತೆ. ಸದ್ಯದಲ್ಲಿಯೇ ಅಡಿಗಲ್ಲು ಇಡಲು ವಿಷ್ಣುದಾದ ಫ್ಯಾನ್ಸ್ ಹಾಗೂ ಕಿಚ್ಚ ಸುದೀಪ್ ನೇತೃತ್ವದಲ್ಲಿ ಈ ಕಾರ್ಯ ನಡೆಯಲಿದೆಯಂತೆ. ಜೊತೆಗೆ ಅಭಿಮಾನ್ ಸ್ಟುಡಿಯೋದಲ್ಲಿನ ಜಾಗವನ್ನು ಉಳಿಸಿಕೊಳ್ಳಲು ಹೋರಾಟಗಳು ನಡೆದಿವೆ. ಕಾನೂನು ಬದ್ಧವಾಗಿ ಜಾಗವನ್ನ ಪಡೆಯಲು ವಿಷ್ಣುವರ್ಧನ್ ಫ್ಯಾನ್ಸ್ ಪಣ ತೊಟ್ಟಿದ್ದಾರೆ.
ಡಾ.ವಿಷ್ಣುವರ್ಧನ್ ಅವರ ಸಮಾಧಿ ವಿಚಾರದಲ್ಲಿ ಚಿತ್ರರಂಗದ ಗಣ್ಯರು ಧ್ವನಿ ಎತ್ತಿದ್ದಾರೆ. ಇದೀಗ ನಟ ವಿಜಯ್ ರಾಘವೇಂದ್ರ ಈ ಘಟನೆಗೆ ಬೇಸರ ವ್ಯಕ್ತಪಡಿಸಿದ್ದಾರೆ.