ಕನ್ನಡ ಚಿತ್ರರಂಗದ ಧೀಮಂತ ನಾಯಕ ಡಾ.ವಿಷ್ಣುವರ್ಧನ್ ಸಮಾಧಿ (Vishnuvardhan Memorial) ನೆಲಸಮ ಮಾಡಿದ ಹಿನ್ನೆಲೆ ಕರ್ನಾಟಕದಾದ್ಯಂತ ಅಭಿಮಾನಿಗಳ ಆಕ್ರೋಶ ಭುಗಿಲೆದ್ದಿದೆ. ಇತ್ತ ಕನ್ನಡ ಚಿತ್ರರಂಗದ ಗಣ್ಯರು ಒಬ್ಬೊಬ್ಬರಾಗಿ ದನಿ ಎತ್ತುತ್ತಿದ್ದಾರೆ. ಇಂದು ಫಿಲ್ಮ್ ಚೇಂಬರ್‌ಗೆ ಡಾ.ವಿಷ್ಣುವರ್ಧನ್ ಅಭಿಮಾನಿಗಳು (Vishnuvardhan Fans) ಮನವಿ ಸಲ್ಲಿಸಿದ್ದಾರೆ.
ರಾತ್ರೋ ರಾತ್ರಿ ವಿಷ್ಣು ಸಮಾಧಿ ತೆರವುಗೊಳಿಸಿದ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ದಾದಾ ಅಂತ್ಯಕ್ರಿಯೆ ನಡೆದ ಜಾಗದಲ್ಲಿ ಅವರ ಸ್ಮಾರಕ ಪುನರ್ ನಿರ್ಮಾಣ ಆಗಬೇಕು ಅಂತ ಒತ್ತಾಯಿಸಿ ವಿಷ್ಣು ಅಭಿಮಾನಿಗಳ ಸಂಘ ಫಿಲ್ಮ್ ಚೇಂಬರ್‌ಗೆ ಮನವಿ ಸಲ್ಲಿಸಿದೆ. ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ – ಇ.ಡಿ ವಿಚಾರಣೆಗೆ ಹಾಜರಾದ ನಟ ರಾಣಾ ದಗ್ಗುಬಾಟಿ
ವಿಷ್ಣುವರ್ಧನ್ ಅಭಿಮಾನಿಗಳ ಮನವಿ ಸ್ವೀಕರಿಸಿದ ಫಿಲ್ಮ್ ಚೇಂಬರ್. ನಾವು ಕೂಡ ಸರ್ಕಾರದ (Government) ಗಮನಕ್ಕೆ ತರುತ್ತೇವೆ. ಈಗಾಗಲೇ ಸರ್ಕಾರ ಪರ್ಯಾಯವಾಗಿ ಮೈಸೂರಿನಲ್ಲಿ ಸ್ಮಾರಕ ಮಾಡಿದೆ. ಆದರೂ ಬೆಂಗಳೂರಿನ ಅಭಿಮಾನ್ ಸ್ಟುಡಿಯೋದಲ್ಲಿ (Abhiman Studio) ಜಾಗ ಉಳಿಸಿಕೊಳ್ಳುವ ನಿಮ್ಮ ಪ್ರಯತ್ನಕ್ಕೆ ನಾವು ಕೂಡ ಸಾಥ್ ನೀಡುತ್ತೇವೆ. ನಾವು ನಿಮ್ಮ ಜೊತೆ ಇದ್ದೇವೆ. ಎಲ್ಲಾ ಕಲಾವಿದರು ಒಂದೇ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ವಿಷ್ಣು ಸ್ಮಾರಕಕ್ಕಾಗಿ ಕೋರ್ಟಿಗೆ ಬೇಕಾದ್ರೂ ಹೋಗ್ತೀನಿ, ಹಣಕಾಸು ಕೊಡಲು ರೆಡಿ ಇದ್ದೀನಿ: ಕಿಚ್ಚ ಸುದೀಪ್
ಧೀಮಂತ ನಾಯಕನ ವಿಚಾರದಲ್ಲಿ ಪದೇ ಪದೇ ಇದೆ ರೀತಿ ತಾರತಮ್ಯ ನಡೆಯುತ್ತಿದ್ದು, ಇದಕ್ಕೆ ಸೂಕ್ತ ನ್ಯಾಯ ಸಿಗದೇ ಇದ್ದರೆ ಕರ್ನಾಟಕದಾದ್ಯಂತ ತೀವ್ರ ಹೋರಾಟ ಮಾಡುತ್ತೇವೆ. ಇದಕ್ಕೆ ಸರ್ಕಾರ ಶೀಘ್ರವೇ ನ್ಯಾಯ ಒದಗಿಸಬೇಕು ಎಂದು ಫಿಲ್ಮ್ ಚೇಂಬರ್ ಮೂಲಕ ಮನವಿ ಮಾಡಿದ್ದಾರೆ. ರಾತ್ರೋ ರಾತ್ರಿ ಸಮಾಧಿ ನೆಲಸಮ ಮಾಡಿದವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅಭಿಮಾನಿಗಳು ಮನವಿ ಸಲ್ಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಇದಕ್ಕೆ ತಾರ್ಕಿಕ ಅಂತ್ಯ ಸಿಗುತ್ತಾ ಅಂತಾ ಕಾದು ನೋಡ್ಬೇಕು. ಇದನ್ನೂ ಓದಿ: ವಿಷ್ಣು ಸಮಾಧಿ ನೆಲಸಮ; ಯಾರದ್ದೋ ಮಾತು ಕೇಳಿ ಕುಟುಂಬದ ವಿರುದ್ಧ ಮಾತನಾಡ್ಬೇಡಿ – ಫ್ಯಾನ್ಸ್‌ಗೆ ಅನಿರುದ್ಧ್ ಮನವಿ